1.70 ಕೋಟಿ ರೂ. ಅಂದಾಜಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ
ಮೈಸೂರು

1.70 ಕೋಟಿ ರೂ. ಅಂದಾಜಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ

March 17, 2020

ಮೈಸೂರು, ಮಾ.16(ಆರ್‍ಕೆಬಿ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1.70 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್. ನಾಗೇಂದ್ರ ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.

ತಮ್ಮ ಶಾಸಕರ ನಿಧಿಯಿಂದ ಮೈಸೂರಿನ 24ನೇ ಮತ್ತು 40ನೇ ವಾರ್ಡ್‍ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಬೀರ್ ರಸ್ತೆ-ಅಶೋಕರಸ್ತೆ ಸೇರುವ ಜಂಕ್ಷನ್ ಪಾಂಡುರಂಗ ವಿಠಲಸ್ವಾಮಿ ದೇವಸ್ಥಾನದ ಬಳಿ ಅಶೋಕ ರಸ್ತೆಗೆ ಸಾಡೇ ರಸ್ತೆಯಿಂದ ಇರ್ವಿನ್ ರಸ್ತೆವರೆಗೆ (ರೂ.75 ಲಕ್ಷ) ರಸ್ತೆ ಅಭಿವೃದ್ಧಿ, ಗೀತಾ ಮಂದಿರ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ (ರೂ.20 ಲಕ್ಷ), ಕಬೀರ್ ರಸ್ತೆಗೆ ಮಂಡಿ ಪೊಲೀಸ್ ಠಾಣೆಯಿಂದ ಅಶೋಕ ರಸ್ತೆವರೆಗೆ ಮರು ಡಾಂಬರೀಕರಣ (ರೂ.20 ಲಕ್ಷ), ಹರ್ಷ ರಸ್ತೆ ಅಭಿವೃದ್ಧಿ ಕಾಮಗಾರಿ (ರೂ.25 ಲಕ್ಷ), ಜೆ.ಕೆ.ಮೈದಾನ ವೃತ್ತದಿಂದ ಮಹಾನಗರಪಾಲಿಕೆ ವಲಯ ಕಚೇರಿ 6ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ (ರೂ.30 ಲಕ್ಷ) ಗುದ್ದಲಿಪೂಜೆ ನೆರವೇರಿಸಿದರು.

ಗುಣಮಟ್ಟದ ಕಾಮಗಾರಿ ಕೈಗೊಂಡು ತ್ವರಿತವಾಗಿ ಕಾಮ ಗಾರಿ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚಿಸಿ ದರು. ಈ ವೇಳೆ ಪಾಲಿಕೆ ಸದಸ್ಯರಾದ ರಮೇಶ್ ರಮಣಿ, ಎಂ.ಸತೀಶ್, ಮಾಜಿ ಸದಸ್ಯ ಶಿವಕುಮಾರ್, ಕಾರ್ಯಪಾಲಕ ಅಭಿಯಂತರ ಬಿ.ನಾಗರಾಜು, ಅಭಿವೃದ್ಧಿ ಅಧಿಕಾರಿ ಹೆಚ್.ನಾಗ ರಾಜು, ಕಿರಿಯ ಇಂಜಿನಿಯರ್‍ಗಳಾದ ಚಂದ್ರಶೇಖರ್, ಕೆ.ಮೋಹನ್, ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಚಿಕ್ಕವೆಂಕಟು, ಮುಖಂಡರಾದ ಗಣೇಶ್ ಲಾಳಿಗೆ, ಕೇಶವರಾವ್, ಮಂಜುನಾಥ್ ಲಾಳಿಗೆ, ನಾಗೇಶ್, ರಾಜೇಶ್, ನಾಗರಾಜು, ಗುತ್ತಿಗೆದಾರರಾದ ಹೆಚ್.ಆಶಾ, ಮಹದೇವ್, ಬಿ.ವಿ.ಗುರುರಾಜ್ ಇನ್ನಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಶಾಸಕ ಎಲ್.ನಾಗೇಂದ್ರ, ಮೈಸೂರಿನ ಲಕ್ಷ್ಮಿಕಾಂತನಗರದ ಗೋಲ್ಡನ್ ಬೇಕರಿ ರಸ್ತೆಯಲ್ಲಿ 14ಎ ಹಣ ಕಾಸು ಯೋಜನೆಯ 12.30 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮೇಯರ್ ತಸ್ನೀಂ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಸದಸ್ಯರಾದ ಲಕ್ಷ್ಮಿ ಶಿವಣ್ಣ, ಪ್ರೇಮಾ ಶಂಕರೇಗೌಡ, ವಾಣಿವಿಲಾಸ ಇಂಜಿನಿಯರ್ ಗಿರೀಶ್, ಪಾಲಿಕೆ ಮಾಜಿ ಸದಸ್ಯ ಕೆ.ಟಿ.ಚಲುವೇಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »