ಯುವಜನರ ಕೌಶಲಾಭಿವೃದ್ಧಿಗೆ 10 ಕೋಟಿ  ವೆಚ್ಚದಲ್ಲಿ ತರಬೇತಿ ಶಾಲೆ ಮಂಜೂರು
ಮಂಡ್ಯ

ಯುವಜನರ ಕೌಶಲಾಭಿವೃದ್ಧಿಗೆ 10 ಕೋಟಿ ವೆಚ್ಚದಲ್ಲಿ ತರಬೇತಿ ಶಾಲೆ ಮಂಜೂರು

July 18, 2021

ಕೆ.ಆರ್.ಪೇಟೆ,ಜು.17(ಶ್ರೀನಿವಾಸ್)-ತಾಲೂಕಿನ ಯುವ ಜನತೆಯ ಕೌಶಲಾ ಭಿವೃದ್ಧಿಗಾಗಿ ಕೌಶಲ್ಯ ತರಬೇತಿ ಶಾಲೆ ಆರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ 10 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾ ಯಣಗೌಡ ಮಾಹಿತಿ ನೀಡಿದರು.

ತಾಲೂಕಿನ ಬೂಕನಕೆರೆ ಹೋಬಳಿ ಬಳ್ಳೇಕೆರೆ ಗ್ರಾಮದ ಮುಖಂಡ ಯೋಗಣ್ಣ ಅವರ ತೋಟದಮನೆ ಆವರಣದಲ್ಲಿ ಆಯೋ ಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತ ನಾಡಿದರು. ತಾಲೂಕಿನ ಸುಪುತ್ರ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಕಾರಣದಿಂದಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾ ವಣೆ ಎದುರಿಸಿ ಬಿಜೆಪಿ ಶಾಸಕನಾಗಿ ಆಯ್ಕೆ ಯಾಗಿ ರಾಜ್ಯದ ಸಚಿವನಾಗಿದ್ದೇನೆ. ತಾಲೂ ಕಿನ ಸಮಗ್ರವಾದ ಅಭಿವೃದ್ಧಿ ಕನಸನ್ನು ಕಂಡಿದ್ದ ನಾನು ಜೆಡಿಎಸ್‍ನಿಂದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಅರಿತು ಕಠಿಣ ತೀರ್ಮಾನ ತೆಗೆದುಕೊಂಡು ಇಂದು ಸಚಿವನಾಗಿದ್ದೇನೆ ಎಂದರು.

ಸಂತ್ರಸ್ತರ ಮನೆಗೆ ತೆರಳಿ ಸಾಂತ್ವನ: ಕೋವಿಡ್ ಮಹಾಮಾರಿಗೆ ನಮ್ಮ ತಾಲೂ ಕಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವ ನ್ನಪ್ಪಿದ್ದಾರೆ. ಇದು ನನಗೆ ಅತೀವ ದುಃಖ ತರಿಸಿದೆ. ಸಾವನ್ನಪ್ಪಿರುವ ಜನರು ಯಾವುದೇ ಪಕ್ಷವಿರಲಿ ಅವರ ಮನೆ ಬಾಗಿಲಿಗೆ ತೆರಳಿ, ಸರ್ಕಾರದಿಂದ ನೀಡುವ 1 ಲಕ್ಷ ರೂ. ಜೊತೆಗೆ ನನ್ನ ತಂದೆ-ತಾಯಿ ಹೆಸರಿನ ಟ್ರಸ್ಟ್ ಮೂಲಕವೂ ಕೈಲಾದಷ್ಟು ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಲಂಚದ ಹಾವಳಿ ತಪ್ಪಿಸಿ: ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಬಳ್ಳೇಕೆರೆ ಗ್ರಾಪಂ ಸದಸ್ಯ ಹೆಮ್ಮಡಹಳ್ಳಿ ತಿಮ್ಮೇಗೌಡ, ಗ್ರಾಪಂ ನರೇಗಾ ಕಾಮಗಾರಿ ಅನುಷ್ಠಾನಕ್ಕೆ ತಾಪಂ ಅಧಿಕಾರಿಗಳು ಹಾಗೂ ಇಂಜಿನಿ ಯರ್‍ಗಳು ಕನಿಷ್ಠ 5, 10ರಿಂದ 20 ಸಾವಿರ ರೂ. ವರೆಗೂ ಲಂಚ ಪಡೆಯುತ್ತಿ ದ್ದಾರೆ. ಇದರಿಂದ ನರೇಗಾ ಯೋಜನೆ ಯನ್ನು ಗ್ರಾಪಂ ಸದಸ್ಯರು ಸಮರ್ಪಕ ವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗು ತ್ತಿಲ್ಲ. ದಯಮಾಡಿ ಲಂಚದ ಹಾವಳಿ ತಪ್ಪಿಸಿ ಗಾಪಂಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಶ್ರೀನಿವಾಸ್, ಮಂಡ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬ ರೀಷ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರಮೀಳಾ ವರದರಾಜೇಗೌಡ, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ರಾಜ್ಯ ಬಿಜೆಪಿ ಮುಖಂಡ ಬಿ.ವರದರಾಜೇ ಗೌಡ, ತಾಲೂಕು ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ನಾಗಣ್ಣ, ಎಸ್‍ಸಿ ಮೋರ್ಚಾ ಅಧ್ಯಕ್ಷ ರವಿ ಶಿವಕುಮಾರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ತಾಲೂಕು ಕಾರ್ಯದರ್ಶಿ ಪುಟ್ಟಣ್ಣ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಪಾಪಣ್ಣ ಇತರರು ಇದ್ದರು.

Translate »