ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದ ನಟ ದರ್ಶನ್
ಮೈಸೂರು

ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದ ನಟ ದರ್ಶನ್

July 18, 2021

ಮೈಸೂರು, ಜು.17-ನಿರ್ದೇಶಕ ಇಂದ್ರ ಜಿತ್ ಲಂಕೇಶ್ ಅವರಿಗೆ ತಾಕತ್ತಿದ್ದರೆ ನಾನು ಅವರ ಜೊತೆ ಮಾತನಾಡಿರುವ ಆಡಿಯೋ ವನ್ನು ರಿಲೀಸ್ ಮಾಡಲಿ ಎಂದು ನಟ ದರ್ಶನ್ ಸವಾಲು ಹಾಕಿದರು.

ಶನಿವಾರ ತಿ.ನರಸೀಪುರ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಂದ್ರಜಿತ್ ಲಂಕೇಶ್ ವಿರುದ್ಧ ಕಿಡಿಕಾರಿದರು. ನಾನು ಕಲಾವಿದ ನಾಗಿ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿ ಸಿದ್ದೇನೆ. ನೀನಾಸಂ ವಿದ್ಯಾರ್ಥಿಯಾದ ನಾನು, ರಜನಿಕಾಂತ್, ಶಿವರಾಜ್‍ಕುಮಾರ್ ಅಭಿ ನಯ ಕಲಿತ ಶಾಲೆಯಲ್ಲಿ ನಾನೂ ಕಲಿತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಯಾರಿಗೆ ಸಹಾಯಕ ನಿರ್ದೇಶಕರಾಗಿದ್ದರು ಎಂದು ಪ್ರಶ್ನಿಸಿದ ದರ್ಶನ್, ನಿರ್ದೇಶಕರ ಪಟ್ಟ ಕಟ್ಟಿಕೊಂಡಿ ರುವ ಇಂದ್ರಜಿತ್ ಲಂಕೇಶ್, ಸರಿಯಾಗಿ ಒಂದು ಸಿನಿಮಾವನ್ನೂ ನಿರ್ದೇಶನ ಮಾಡಿ ತೋರಿಸಲಿ ಎಂದು ಸವಾಲೆಸೆದರು.

ನಿರ್ಮಾಪಕ ಉಮಾಪತಿ ವಿರುದ್ಧವೂ ಹರಿಹಾಯ್ದ ಅವರು, 25 ಕೋಟಿ ರೂ. ಪ್ರಕರಣ ಎಲ್ಲೆಲ್ಲಿಗೋ ಹೋಗುತ್ತಿದೆ. ಈಗ ಅದು ದೊಡ್ಡ ಮನೆ (ಡಾ. ರಾಜ್ ಕುಟುಂಬ) ಹತ್ತಿರ ಬಂದಿದೆ. ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರಿಂದ ಉಮಾಪತಿ ಖರೀದಿಸಿದ್ದ ಆಸ್ತಿ ಯನ್ನು ನಾನು ಕೇಳಿದ್ದಾಗಿಯೂ, ಅದಕ್ಕೆ ಅವರು ಕೊಡುವುದಿಲ್ಲ ಎಂದು ಹೇಳಿದ್ದಾ ಗಿಯೂ ಉಮಾಪತಿ ಹೇಳಿಕೊಂಡಿದ್ದಾರೆ. ನನ್ನ ಹಾಗೂ ದೊಡ್ಡ ಮನೆಯವರ ನಡುವೆ ಯಾವುದೇ ಸಮಸ್ಯೆ ಇಲ್ಲ. ಉಮಾಪತಿ ನನಗೆ ಹಣ ಬಾಕಿ ಕೊಡಬೇಕಾಗಿತ್ತು. ಅದಕ್ಕೆ ಅವರು ದೊಡ್ಡ ಮನೆಯ ವರಿಂದ ಖರೀದಿಸಿದ್ದ ಆಸ್ತಿ ನನಗೆ ಕೊಡುವುದಾಗಿ ಹೇಳಿದ್ದರು. ಒಂದು ವೇಳೆ ನಾನು ಕೇಳಿ ಅವರು ಕೊಡುವುದಿಲ್ಲ ಎಂದು ಹೇಳಿದ್ದರೆ ಆ ಆಸ್ತಿಯ 2 ವರ್ಷದ ಬಾಡಿಗೆಯನ್ನು ನನಗೆ ಯಾಕೆ ಕೊಟ್ಟರು ಎಂಬುದಕ್ಕೆ ಅವರು ಉತ್ತರಿಸಲಿ. 3 ವರ್ಷದ ಹಿಂದಿನ ವಿಷಯ ವನ್ನು ಈಗ ಎತ್ತುವ ಮೂಲಕ ಉಮಾಪತಿ 25 ಕೋಟಿ ರೂ. ಪ್ರಕರಣವನ್ನು ಡೈವರ್ಟ್ ಮಾಡುತ್ತಿದ್ದಾರೆ ಎಂದರು.

ನಾವು ಡಾ. ರಾಜ್‍ಕುಮಾರ್ ಅವರ ಕುಟುಂಬವನ್ನು ಮರೆಯುವುದಿಲ್ಲ. ಅವರ ಬ್ಯಾನರ್‍ನಲ್ಲೇ ನಮ್ಮ ತಂದೆ ಬೆಳೆದರು. ನಾನೂ ಕೂಡ ಅವರ ಪೂರ್ಣಿಮಾ ಎಂಟರ್ ಪ್ರೈಸಸ್‍ನಡಿ ನಿರ್ಮಾಣವಾದ `ಜನುಮದ ಜೋಡಿ’ ಚಿತ್ರದಲ್ಲಿ ದಿನಕ್ಕೆ 175 ರೂ. ಬಾಟಾ ಪಡೆದು ಲೈಟ್ ಬಾಯ್ ಆಗಿ ಕೆಲಸ ಮಾಡಿ ಮೇಲೆ ಬಂದವನು. ನಾವು ಅವರ ಅನ್ನ ತಿಂದಿದ್ದೇವೆ. ನೂರು ವರ್ಷವಾದರೂ ದೊಡ್ಡ ಮನೆ ದೊಡ್ಡ ಮನೆಯೇ ಎಂದರು.
ಸಂದೇಶ್ ದಿ ಪ್ರಿನ್ಸ್‍ನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿ ನಾನು ಯಾವ ತಪ್ಪೂ ಮಾಡಿಲ್ಲ. ಹಾಗಾಗಿ ಯಾರ ಬಳಿಯೂ ಕ್ಷಮೆ ಕೇಳುವು ದಿಲ್ಲ. ನಾನು ಹಲ್ಲೆ ಮಾಡಿದ್ದೇ ಆಗಿದ್ದಲ್ಲಿ ವೈದ್ಯ ಕೀಯ ವರದಿ ಬರುತ್ತಿತ್ತು. ಹೊಡೆಸಿಕೊಂಡ ವರು ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಿದ್ದರು. ಆದರೆ ಹಾಗೇನೂ ಆಗಿಲ್ಲ. ಇದೆಲ್ಲಾ ಕೇವಲ ಷಡ್ಯಂತರ ಎಂದರು.

Translate »