ಜುಬಿಲಂಟ್ ಭಾರತೀಯ ಗ್ರೂಪ್‍ನಿಂದ `ಪಿಎಂ ಕೇರ್ಸ್ ಫಂಡ್’ಗೆ 10 ಕೋಟಿ ರೂ. ದೇಣಿಗೆ
ಮೈಸೂರು

ಜುಬಿಲಂಟ್ ಭಾರತೀಯ ಗ್ರೂಪ್‍ನಿಂದ `ಪಿಎಂ ಕೇರ್ಸ್ ಫಂಡ್’ಗೆ 10 ಕೋಟಿ ರೂ. ದೇಣಿಗೆ

April 27, 2020

ಮೈಸೂರು, ಏ.26- ಔಷಧ ತಯಾರಿಕೆ ಮತ್ತು ಸಿದ್ಧ ಆಹಾರ ಪದಾರ್ಥಗಳ ಉದ್ಯಮ ಕ್ಷೇತ್ರದ ಕಂಪನಿಗಳ ಸಮೂಹವಾದ `ಜುಬಿಲೆಂಟ್ ಭಾರತೀಯ ಗ್ರೂಪ್’ ಕೋವಿಡ್-19 ವೈರಾಣು ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರಕ್ಕೆ ನೆರವಾಗಲು ಪಿಎಂ ಕೇರ್ಸ್ ಫಂಡ್‍ಗೆ 10 ಕೋಟಿ ರೂ. ದೇಣಿಗೆ ನೀಡಿರುವುದಾಗಿ ಹೇಳಿದೆ.

ಭಾರತದಲ್ಲಿ ಅತಿದೊಡ್ಡ ಸಿದ್ಧ ಆಹಾರ ಸೇವೆಗಳ ಹಾಗೂ ಡೊಮಿನೋಸ್ ಪಿಜ್ಜಾ ಮತ್ತು ಡಂಕಿನ್ ಡೋನಟ್ಸ್‍ನ ಮಾಸ್ಟರ್ ಫ್ರಾಂಚೈಸಿ ಆಗಿರುವ ಜುಬಿಲಂಟ್ ಫುಡ್ ವಕ್ರ್ಸ್ ಲಿ., ಫಾರ್ಮಾಸ್ಯುಟಿಕಲ್ಸ್ ಮತ್ತು ಲೈಫ್ ಸೈನ್ಸಸ್ ಕ್ಷೇತ್ರದ ಜುಬಿಲಂಟ್ ಲೈಫ್ ಸೈನ್ಸಸ್ ಲಿ. ಕಂಪೆನಿಗಳು ಮತ್ತು ಇತರೆ ಅಂಗಸಂಸ್ಥೆಗಳು ತಲಾ ಐದು ಕೋಟಿ ರೂ. ದೇಣಿಗೆ ನೀಡಿವೆ.

ಈ ಮೊತ್ತದಲ್ಲಿ ಸಮೂಹದ ಕಂಪೆನಿಗಳ ಎಲ್ಲಾ ಉದ್ಯೋಗಿಗಳ ಒಂದು ದಿನದ ವೇತನವೂ ಸೇರಿದೆ ಎಂದು ಉತ್ತರಪ್ರದೇಶದ ನೊಯ್ಡಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪೆನಿಯು ಏಪ್ರಿಲ್ 24ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Translate »