ಜಿಲ್ಲಾಡಳಿತದಿಂದ ಸರಳ ಬಸವ ಜಯಂತಿ ಆಚರಣೆ
ಮೈಸೂರು

ಜಿಲ್ಲಾಡಳಿತದಿಂದ ಸರಳ ಬಸವ ಜಯಂತಿ ಆಚರಣೆ

April 27, 2020

ಮೈಸೂರು, ಏ.26(ಆರ್‍ಕೆಬಿ)- ಸಮಾಜ ಸುಧಾರಕ ಬಸ ವಣ್ಣನವರ ಜಯಂತಿ ಅಂಗವಾಗಿ ಮೈಸೂರಿನ ವಿದ್ಯಾ ಪೀಠದ ಬಳಿಯಿರುವ ಶ್ರೀ ಬಸವೇಶ್ವರರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಭಾನುವಾರ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾಡಳಿತ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ಬಸವ ತತ್ವವನ್ನು ಪಾಲಿಸುವ ಮೂಲಕ ಸಮಾಜ ಸುಧಾರಣೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಸಚಿವ ಅಡಗೂರು ವಿಶ್ವನಾಥ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ನಗರ ಪೆÇಲೀಸ್ ಆಯುಕ್ತ ಚಂದ್ರಗುಪ್ತ ಇನ್ನಿತರರು ಉಪಸ್ಥಿತರಿದ್ದರು.

Translate »