ಕೆ.ಆರ್.ನಗರ ತಾಲೂಕಿನಲ್ಲಿದ್ದ 74 ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಟ್ಟ ಜಿಲ್ಲಾಡಳಿತ
ಮೈಸೂರು

ಕೆ.ಆರ್.ನಗರ ತಾಲೂಕಿನಲ್ಲಿದ್ದ 74 ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಟ್ಟ ಜಿಲ್ಲಾಡಳಿತ

April 27, 2020

ಮೈಸೂರು, ಏ.26(ಪಿಎಂ)- ಲಾಕ್‍ಡೌನ್‍ನಿಂದಾಗಿ ತಮ್ಮೂರಿಗೂ ತೆರಳಲಾಗದೇ ಕೆಆರ್ ನಗರ ತಾಲೂಕಿನ ವಿವಿಧೆಡೆ ಅತಂತ್ರ ಸ್ಥಿತಿಯಲ್ಲಿದ್ದ 10 ಮಹಿಳೆಯರೂ ಸೇರಿದಂತೆ 74 ವಲಸೆ ಕೂಲಿ ಕಾರ್ಮಿಕರನ್ನು ಅವರ ಊರು ಗಳಿಗೆ ಜಿಲ್ಲಾಡಳಿತ ಭಾನುವಾರ ಕಳುಹಿಸಿಕೊಟ್ಟಿತು.

ಕೇಂದ್ರ ಸರ್ಕಾರ ಲಾಕ್‍ಡೌನ್ ನಿಯಮ ಸಡಿಲಿಸಿದ್ದು, ರಾಜ್ಯದೊಳಗೆ ವಲಸೆ ಕಾರ್ಮಿಕರು ಅವರ ಊರಿಗೆ ತೆರಳಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯ ದರ್ಶಿ ವಿಜಯಭಾಸ್ಕರ್ ಅವರು ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು, ಲಾಕ್‍ಡೌನ್‍ನಿಂದ ನಗರಗಳಲ್ಲಿ ಕಷ್ಟಕ್ಕೆ ಸಿಲುಕಿರುವ ವಲಸೆ ಕೂಲಿ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ವ್ಯವಸ್ಥೆ ಮಾಡುವಂತೆ ನಿರ್ದೇ ಶನ ನೀಡಿದ್ದರು. ಕೆಆರ್ ನಗರ ತಾಲೂಕಿನ ವಿವಿಧೆಡೆ ನಿರಾ ಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಕೂಲಿ ಕಾರ್ಮಿಕ ರನ್ನು ಅವರ ಊರುಗಳಿಗೆ ಭಾನುವಾರ ಕಳುಹಿಸಿಕೊಡ ಲಾಯಿತು. ಭೇರ್ಯದ ಬಿಸಿಎಂ ಹಾಸ್ಟೆಲ್‍ನಲ್ಲಿ ತೆರೆದಿದ್ದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕೂಲಿ ಕಾರ್ಮಿಕ ರನ್ನು 4 ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಕರೆದೊಯ್ಯಲಾಯಿತು. 2 ಬಸ್‍ಗಳು ವಿಜಯಪುರ, 1 ಬಸ್ ರಾಯಚೂರು-ಕೊಪ್ಪಳ ಹಾಗೂ ಮತ್ತೊಂದು ಬಸ್ ಬೆಂಗಳೂರು-ಕೋಲಾರ ಜಿಲ್ಲೆ ಮಾರ್ಗವಾಗಿ ತೆರಳಿದವು.

ವಲಸೆ ಕೂಲಿ ಕಾರ್ಮಿಕರನ್ನು ರಾಜ್ಯದೊಳಗೆ ಸಂಚರಿ ಸಲು ಅವಕಾಶ ನೀಡಿದರೆ ಅವರು ಕೃಷಿಯಲ್ಲಿ ತೊಡಗಿ ಸಿಕೊಳ್ಳಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯದೊಂ ದಿಗೆ ಕೇಂದ್ರದ ಗೃಹ ಸಚಿವಾಲಯ ಏ.19ರಂದು ಆದೇಶ ಮಾಡಿತ್ತು. ಬಸ್‍ಗಳಲ್ಲಿ ಶೇ.40ರಷ್ಟು ಜನರನ್ನು ಮಾತ್ರ ಭರ್ತಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಜೊತೆಗೆ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸು ವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿತ್ತು. ಈ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಕೆಆರ್ ನಗರ ತಾಲೂಕಿನ ಕೂಲಿ ಕಾರ್ಮಿಕರನ್ನು ಕಳುಹಿಸಿಕೊಡಲಾಗಿದೆ. ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎ.ಸಿ.ತಮ್ಮಣ್ಣ, ಕೆಆರ್ ನಗರ ತಹಸಿ ಲ್ದಾರ್ ಮಂಜುಳಾ ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಇದಕ್ಕಾಗಿ ಶ್ರಮಿಸಿದ್ದರು. ಜಿಲ್ಲೆಯ ಉಳಿದÀ ತಾಲೂಕು ಗಳಲ್ಲಿಯೂ ಇರುವ ವಲಸೆ ಕೂಲಿ ಕಾರ್ಮಿಕರನ್ನು ಗುರುತಿಸಿ ಅವರ ಊರುಗಳಿಗೆ ಹಂತಹಂತವಾಗಿ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.

Translate »