ಕೊರೊನಾ ಸೋಂಕಿತರಿಗೆ ಆಹಾರ, ಔಷಧಿ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೊಬೋಟ್ ನಿಯೋಜನೆ
ಮೈಸೂರು

ಕೊರೊನಾ ಸೋಂಕಿತರಿಗೆ ಆಹಾರ, ಔಷಧಿ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೊಬೋಟ್ ನಿಯೋಜನೆ

April 27, 2020

ಬೆಂಗಳೂರು, ಏ. 26- ರಾಜ್ಯದಲ್ಲಿ ಕೊರೊನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಇತರರಿಗೆ ಸೋಂಕು ಹರಡ ದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಸರ್ಕಾರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಆಹಾರ ಹಾಗೂ ಔಷಧಿಗಳನ್ನು ನೀಡಲು ರೊಬೋಟ್ ನಿಯೋಜಿಸಿದೆ.

ನಿಯೋಜನೆಗೊಂಡಿರುವ ಈ ರೊಬೋಟ್ ಸೋಂಕಿತರ ಆಸುಪಾಸಿ ನಲ್ಲೇ ತಿರುಗಾಡಲಿದ್ದು, ಸಮಯಕ್ಕೆ ಸರಿ ಯಾಗಿ ರೋಗಿಗಳಿಗೆ ಔಷಧಿ ಹಾಗೂ ಆಹಾರವನ್ನು ನೀಡಲಿದೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೂ ಸೋಂಕು ತಗುಲುವುದು ನಿಯಂತ್ರಣಗೊಳ್ಳಲಿದೆ.

Translate »