ಟ್ರೈನಿ ನರ್ಸ್‍ಗಳ ಪ್ರತಿಭಟನೆಗೆ 10 ದಿನ: ಸರ್ಕಾರದ ದಿವ್ಯ ಮೌನ!
ಮೈಸೂರು

ಟ್ರೈನಿ ನರ್ಸ್‍ಗಳ ಪ್ರತಿಭಟನೆಗೆ 10 ದಿನ: ಸರ್ಕಾರದ ದಿವ್ಯ ಮೌನ!

July 19, 2020

ಮೈಸೂರು, ಜು.18(ಎಂಟಿವೈ)- ವೇತನ ಹೆಚ್ಚಳ, ಸೇವಾ ಭದ್ರತೆ ಹಾಗೂ ಮೂಲಸೌಕರ್ಯಕ್ಕೆ ಆಗ್ರಹಿಸಿ ಮೈಸೂ ರಿನ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗಳಲ್ಲಿ ಶಿಷ್ಯವೇತನದ ಆಧಾರ ಸೇವೆ ಸಲ್ಲಿಸುತ್ತಿರುವ ಟ್ರೈನಿ ಸ್ಟಾಫ್‍ನರ್ಸ್‍ಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಪ್ರತಿಭಟನೆ ಶನಿವಾರ 10ನೇ ದಿನಕ್ಕೆ ಕಾಲಿಟ್ಟಿತು.

ಎರಡೂ ಆಸ್ಪತ್ರೆಗಳ 150 ಟ್ರೈನಿ ನರ್ಸ್ ಗಳು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಕೆ.ಆರ್.ಆಸ್ಪತ್ರೆ ಮುಂದೆ ಸಾಂಕೇತಿಕ ಪ್ರತಿ ಭಟನೆ ನಡೆಸಿದರು. ಬಳಿಕ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು.

ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆ ಗಳಲ್ಲಿ 8-10 ವರ್ಷಗಳಿಂದಲೂ ಅತ್ಯಂತ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ. ಮಾಸಿಕ 10 ಸಾವಿರ ರೂ. ವೇತನ ನೀಡಲಾಗು ತ್ತಿದೆ. ಶಿಷ್ಯವೇತನ ಆಧಾರ ಸೇವೆ ಸಲ್ಲಿಸು ತ್ತಿದ್ದರೂ ನಮ್ಮನ್ನು ಸ್ಟಾಫ್ ನರ್ಸ್ ಎಂದೇ ಪರಿಗಣಿಸಲಾಗಿದೆ. ಕಡಿಮೆ ವೇತನದಿಂದಾಗಿ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ಹಾಗಾಗಿ, `ಶಿಷ್ಯವೇತನ’ ಕೊನೆಗೊಳಿಸಿ `ಗುತ್ತಿಗೆ ನರ್ಸ್’ ಅಥವಾ `ಖಾಯಂ ನರ್ಸ್’ ಎಂದು ಘೋಷಿಸಿ, ವೇತನ ಹೆಚ್ಚಿಸಬೇಕು, ಕ್ವಾಟ್ರಸ್ ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸೋಂಕಿತರ ವಾರ್ಡ್‍ಗಳಿಗೆ ನಮ್ಮನ್ನು ನಿಯೋಜಿಸಿರುವುದರಿಂದ ಅಗತ್ಯ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಸಾಮೂ ಹಿಕ ರಾಜೀನಾಮೆ ನೀಡುವುದಕ್ಕೂ ಸಿದ್ಧ. ಕೊರೊನಾ ಭೀತಿ ಮಧ್ಯೆಯೂ ನಮ್ಮ ಕುಟುಂ ಬದ ಸದಸ್ಯರು ಹಾಗೂ ವೈಯಕ್ತಿಕ ಹಿತವನ್ನು ಬದಿಗಿಟ್ಟು ಸೇವೆ ಸಲ್ಲಿಸುತ್ತಿದ್ದೇವೆ. ಇದ ನ್ನಾದರೂ ಸರ್ಕಾರ ಅರ್ಥ ಮಾಡಿ ಕೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಶಿಷ್ಯವೇತನ ಆಧಾರದ ನರ್ಸ್‍ಗಳ ಸಂಘಟನೆಯ ವಿನೋದ್, ಚಂದ್ರಶೇಖರ್, ಕುಮಾರ್, ರಾಘು, ರಾಮಕೃಷ್ಣ, ಶಿವಣ್ಣ, ಭಾಗ್ಯ, ಅನಿತಾ ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

Translate »