ಮೈಸೂರು, ಜು.18(ಎಂಟಿವೈ)- ರಾಜ ಪ್ರಭುತ್ವದೊಂದಿಗೆ ಪ್ರಜಾಪ್ರಭುತ್ವದ ಸುಂದರ ಅರುಣೋದಯ ಮೂಡಿಸಿದ ಕೀರ್ತಿ ಮೈಸೂರು ಸಂಸ್ಥಾನದ ರಾಜರುಗಳಿಗೆ ಸಲ್ಲ ಬೇಕು. ಅವರ ಆಡಳಿತಾವಧಿಯಲ್ಲಿ ಜಾರಿ ಗೊಳಿಸಿದ ಉತ್ತಮ ಯೋಜನೆಗಳು ಮತ್ತು ಜನಪರ ಆಡಳಿತದಿಂದಾಗಿ ಇಂದಿಗೂ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅದ ರಿಂದಲೇ ಜನರು ಒಡೆಯರ್ ಕುಟುಂಬ ವನ್ನು ಈಗಲೂ ಪೂಜ್ಯ ಭಾವದಿಂದ ಸ್ಮರಿಸುತ್ತಾರೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಬಣ್ಣಿಸಿದ್ದಾರೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ಶನಿವಾರ ಹಮ್ಮಿ ಕೊಂಡಿದ್ದ ಜಯಚಾಮ ರಾಜೇಂದ್ರ ಒಡೆ ಯರ್ ಜನ್ಮಶತಮಾನೋತ್ಸವದ ಸಮಾ ರೋಪ ಸಮಾರಂಭದಲ್ಲಿ ದೆಹಲಿಯಿಂದಲೇ ಯೂಟ್ಯೂಬ್ ಲೈವ್‍ಸ್ಟ್ರೀಮಿಂಗ್ ಮೂಲಕ ಮಾತನಾಡಿದ ಉಪ ರಾಷ್ಟ್ರಪತಿಗಳು, ಮೈಸೂರು ಮಹಾರಾಜರು ದೇಶಕ್ಕೆ ಮಾದರಿ ಆಡಳಿತ ನೀಡುವ ಮೂಲಕ ಮೈಸೂರು ಸಂಸ್ಥಾನವನ್ನು ಸ್ವಾವಲಂಬಿ ಹಾಗೂ ಪ್ರಗತಿಪರ ನಾಡನ್ನಾಗಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ದೇಶದ ಅತ್ಯಂತ ಅಭಿವೃದ್ಧಿಪರ ರಾಜ್ಯವೆಂದು ಹೆಸರು ಪಡೆ ದಿತ್ತು. ಇದಕ್ಕೆ ಒಡೆಯರ್ ಆಳ್ವಿಕೆಯೇ ಕಾರಣ ಎಂದು ನೆನಪಿಸಿಕೊಂಡರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಒಕ್ಕೂಟ ವ್ಯವಸ್ಥೆಯೊಳಗೆ ವಿಲೀನಗೊಂಡ ದೊಡ್ಡ ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರು ಮಹಾರಾಜರ ದೂರದೃಷ್ಟಿ ಹಾಗೂ ಪ್ರಜಾ ಪ್ರಭುತ್ವ ನಿಲುವಿನಿಂದ ಇದು ಸಾಧ್ಯವಾ ಯಿತು. ಜಯಚಾಮರಾಜೇಂದ್ರ ಒಡೆಯರ್ ರಾಜರಾಗಿ, ರಾಜ್ಯಪಾಲರಾಗಿ ನಾಡಿನ ಅಭಿ ವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕøತಿ, ಪರಂಪರೆ, ಆಡ ಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೈಸೂರು ಸಂಸ್ಥಾನ ಮುಂಚೂಣಿ ಯಲ್ಲಿತ್ತು ಎಂದು ವಿಶ್ಲೇಷಿಸಿದರು.
ಕೇಂದ್ರದ ಮಾಜಿ ಸಚಿವ ಡಾ.ಕರಣ್ ಸಿಂಗ್ ಮಾತನಾಡಿ, ಜಯಚಾಮ ರಾಜೇಂದ್ರ ಒಡೆಯರ್ ಅವರ ಆಡಳಿತ ಸ್ಮರಣೀಯ. ರಾಜಕೀಯ ವ್ಯವಸ್ಥೆಯಲ್ಲಿ ಹಲವು ಸುಧಾ ರಣೆ ತಂದು ರಾಜ್ಯದ ಆರ್ಥಿಕ ಬೆಳವಣಿ ಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮಾನವೀಯ ಗುಣಗಳನ್ನು ಹೊಂದಿದ್ದ ಒಡೆಯರ್ ಅವರು ಕಲೆ, ಸಂಸ್ಕøತಿ, ಸಾಹಿ ತ್ಯದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿ ದ್ದರು. ನಾನು 1954ರಲ್ಲಿ ತಾಯಿ ಹಾಗೂ ಪತ್ನಿಯೊಂದಿಗೆ ದಕ್ಷಿಣ ಭಾರತ ಪ್ರವಾಸ ಕೈಗೊಂಡಿz್ದÉ. ತಮಿಳುನಾಡಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ಬಳಿಕ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೂ ಭೇಟಿ ನೀಡಿದ್ದೆ. ಆ ಸಂದಭರ್À ಒಡೆಯರ್ ಅವರು ನಮಗೆ ಅತ್ಯುತ್ತಮ ಆತಿಥ್ಯ ನೀಡಿದ್ದರು ಎಂದು ನೆನಪಿಸಿಕೊಂಡರು.
ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ದೇಶದಲ್ಲಿದ್ದ ಅನೇಕ ರಾಜ ಸಂಸ್ಥಾನಗಳು ವಿಲೀನಗೊಂಡ ವಿಚಾರ ಕುರಿತು ವಿ.ಪಿ.ಮೆನನ್ ರಚನೆಯ ಇಂಟಿ ಗ್ರೇಷನ್ ಆಫ್ ಇಂಡಿಯನ್ ಸ್ಟೇಟ್ಸ್ ಕೃತಿ ಯಲ್ಲಿವೆ. 26 ಅಧ್ಯಾಯಗಳ ಕೃತಿಯಲ್ಲಿ ಮೈಸೂರು ಸಂಸ್ಥಾನ ಕುರಿತು ಕೇವಲ 4 ಪುಟ ಮಾಹಿತಿ ಇವೆ. ಆದರೆ, ಬೇರೆ ಸಂಸ್ಥಾನಗಳ ಕುರಿತು 20-25 ಪುಟಗಳಷ್ಟು ಮಾಹಿತಿ ಅಡಕವಾಗಿದೆ. ಮೈಸೂರು ಸಂಸ್ಥಾನ ದೇಶದ ಒಕ್ಕೂಟ ವ್ಯವಸ್ಥೆಯೊಳಗೆ ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ಸೇರ್ಪಡೆ ಗೊಂಡ ಸಂಸ್ಥಾನವಾಗಿದ್ದರಿಂದಲೇ ಅತ್ಯಂತ ಕಡಿಮೆ ಮಾಹಿತಿ ಅಡಕವಾಗಿದೆ. ಇದು ಮೈಸೂರು ಮಹಾರಾಜರ ಪ್ರಜಾಪ್ರಭುತ್ವದ ನಿಲುವನ್ನು ಎತ್ತಿ ತೋರಿಸುತ್ತದೆ ಎಂದರು.
ರಾಜಮನೆತನದ ಪ್ರಮೋದಾದೇವಿ ಒಡೆ ಯರ್, ಜಯಚಾಮರಾಜೇಂದ್ರ ಒಡೆಯರ್ ಪುತ್ರಿಯರಾದ ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರಳ ಕಾರ್ಯಕ್ರಮ: ಜಯಚಾಮ ರಾಜೇಂದ್ರ ಒಡೆಯರ್ ಅವರ ಜನ್ಮಶತ ಮಾನೋತ್ಸವ ಸಮಾರಂಭದ ಸಮಾ ರೋಪ ಕಾರ್ಯಕ್ರಮವನ್ನು ಅರಮನೆ ಮುಂಭಾಗದ ಆವರಣದಲ್ಲಿ ಅದ್ದೂರಿ ಯಾಗಿ ಆಚರಿಸಲು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನಿರ್ಧರಿಸಿ ದ್ದರು. ಕಾರ್ಯಕ್ರಮದ ರೂಪುರೇಷೆ, ಸ್ಥಳ, ದಿನಾಂಕವನ್ನೂ ನಿಗದಿಪಡಿಸ ಲಾಗಿತ್ತು. ಆದರೆ ಕೊರೊನಾ ಹಿನ್ನೆಲೆ ಯಲ್ಲಿ ಸಾರ್ವಜನಿಕ ಸಮಾರಂಭ ರದ್ದಾಗಿ, ಆನ್‍ಲೈನ್ ಮೂಲಕ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.