ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‍ಗೆ ಆಗ್ರಹಿಸಿ ನಾಳೆ ಪ್ರತಿಭಟನೆ
ಮೈಸೂರು

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‍ಗೆ ಆಗ್ರಹಿಸಿ ನಾಳೆ ಪ್ರತಿಭಟನೆ

July 20, 2020

ಮೈಸೂರು, ಜು.19(ಪಿಎಂ)- ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‍ಗೆ ಆಗ್ರಹಿಸಿ `ರೈತ ಹುತಾತ್ಮ ದಿನ’(ಜು.21) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಲಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ ತಿಳಿಸಿದರು.

ಮೈಸೂರಿನ ವಾಲ್ಮೀಕಿ ರಸ್ತೆಯ ಲೀಲಾ ಚೆನ್ನಯ್ಯ ಸಮುದಾಯ ಭವನದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿ ನಡೆಸಿದ ಅವರು, ನವಲಗುಂದ-ನರಗುಂದ ರೈತರ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿ ಯಾದ ರೈತರ ಸ್ಮರಣಾರ್ಥ ಪ್ರತಿವರ್ಷ ಜು.21 ರಂದು ಹುತಾತ್ಮ ದಿನ ಆಚರಿಸಲಾಗುತ್ತ್ತದೆ. ಈ ಬಾರಿ ಅಂದು ಡಿಸಿ ಕಚೇರಿ ಎದುರು ಪ್ರತಿಭಟಿಸ ಲಾಗುತ್ತಿದೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಆ.15ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಪ್ರಾರಂ ಭಿಸುವುದಾಗಿ ಎಚ್ಚರಿಕೆ ನೀಡಿದರು. ಜು.21ರಂದು ಸಂಘದ ಗ್ರಾಮ ಘಟಕಗಳು ತಮ್ಮೂರಲ್ಲಿ `ರೈತನ ಭೂಮಿ ಮಾರುವ ಸರಕಲ್ಲ, ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಗೆ ಧಿಕ್ಕಾರ, ಬಂಡವಾಳಶಾಹಿಗಳು, ಭೂಗಳ್ಳರಿಗೆ ಗ್ರಾಮದೊಳಗೆ ಪ್ರವೇಶವಿಲ್ಲ. ನಮ್ಮ ನೆಲ, ನಮ್ಮ ಅನ್ನ, ನಮ್ಮ ಹಕ್ಕು’ ಎಂಬ ಘೋಷಣಾ ಫಲಕ ಅಳವಡಿಸಲಿವೆ. ಅಲ್ಲದೆ, ರೈತರಿಗೆ ಕಾಯ್ದೆ ಅರಿವು ಮೂಡಿಸುವ ಶಿಬಿರ ಹಮ್ಮಿಕೊಳ್ಳ ಲಾಗುವುದು ಎಂದರು. ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್, ಜಿಲ್ಲಾ ಕಾರ್ಯದರ್ಶಿ ರಘು, ನಂಜನಗೂಡು ತಾ.ಅಧ್ಯಕ್ಷ ಸತೀಶ್ ರಾವ್ ಗೋಷ್ಠಿಯಲ್ಲಿದ್ದರು.

Translate »