`ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 10 ದಿನಗಳ `ಗಾಂಧಿ ಶಿಲ್ಪ ಬಜಾರ್
ಮೈಸೂರು

`ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ 10 ದಿನಗಳ `ಗಾಂಧಿ ಶಿಲ್ಪ ಬಜಾರ್

January 30, 2021

ಮೈಸೂರು, ಜ.29(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶ ದಲ್ಲಿರುವ `ಜೆಎಸ್‍ಎಸ್ ಅರ್ಬನ್ ಹಾತ್’ನಲ್ಲಿ ಗುರುವಾರದಿಂದ 10 ದಿನಗಳ `ಗಾಂಧಿ ಶಿಲ್ಪ ಬಜಾರ್’ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು, ಸಾಹಿತಿ ಎಸ್.ಪಿ.ಉಮಾದೇವಿ ಉದ್ಘಾಟಿಸಿದರು.

ಜೆಎಸ್‍ಎಸ್ ಅರ್ಬನ್ ಹಾತ್, ಭಾರತ ಸರ್ಕಾರದ ಜವಳಿ ಮಂತ್ರಾಲಯ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯ ಸಂಯು ಕ್ತಾಶ್ರಯದಲ್ಲಿ ಜ.29ರಿಂದ ಫೆ.7ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ 70ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ಉತ್ಕøಷ್ಟ ಕಲಾ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.

ಮೇಳದಲ್ಲಿ ಮರದ ಕೆತ್ತನೆ, ಶಿಲಾಶಿಲ್ಪ, ಕಂಚಿನ ವಿಗ್ರಹ, ಮರದ ಕುಂದಣ ಕಲೆ, ಟೆರ್ರಾಕೋಟಾ, ರತ್ನಗಂಬಳಿ, ಹತ್ತಿ ಜಮಖಾನ, ಲಘು ಆಭರಣಗಳು, ಮರದ ಅರಗಿನ ಕಲಾ ವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ಮೈಸೂರು ಶೈಲಿಯ ಚಿತ್ರಕಲೆ, ಗೊಂಬೆಗಳು, ಛತ್ತೀಸ್ ಘಡ್‍ನ ದ್ರೊಕ್ರಾ ಎರಕದ ವಸ್ತುಗಳು, ಚಂದೇರಿ/ಪಟೋಲ ಸೀರೆಗಳು, ಬಿದಿರಿನ ವಸ್ತುಗಳು, ಅಲಂಕಾರಿಕ ಹೂವು, ಮತ್ತಿತರೆ ಕಲಾತ್ಮಕ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿವೆ. ಮೇಳ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿದ್ದು, ಮಧ್ಯವರ್ತಿ ಹಾವಳಿ ಇಲ್ಲದೆ ನೇರ ಖರೀದಿಸಬಹುದಾಗಿದೆ.

ಜೆಎಸ್‍ಎಸ್ ಮಹಾ ವಿದ್ಯಾಪೀಠದ ಸಾಮಾನ್ಯ ಆಡಳಿತ ವಿಭಾಗದ ನಿರ್ದೆಶಕ ಶಂಕರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ(ಹಸ್ತಶಿಲ್ಪ) ಕೆ.ಎಸ್. ಸುನೀಲ್‍ಕುಮಾರ್, ರಾಕೇಶ್ ರೈ ಉದ್ಘಾಟನೆ ವೇಳೆ ಹಾಜರಿದ್ದರು.

 

Translate »