ಸಣ್ಣ ರೈತರ ಉಳಿವಿಗೆ 10 ಸಾವಿರ ಕೃಷಿ ಉತ್ಪಾದಕರ ಸಂಘ ಅಸ್ತಿತ್ವಕ್ಕೆ
ಮಂಡ್ಯ

ಸಣ್ಣ ರೈತರ ಉಳಿವಿಗೆ 10 ಸಾವಿರ ಕೃಷಿ ಉತ್ಪಾದಕರ ಸಂಘ ಅಸ್ತಿತ್ವಕ್ಕೆ

August 17, 2021

ಮಂಡ್ಯ, ಆ.16(ಮೋಹನ್‍ರಾಜ್)- ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ರೈತರುಗಳನ್ನು ಉಳಿಸಲು ಹಾಗೂ ಅವರ ಸಂಕಷ್ಟಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ದೇಶಾದ್ಯಂತ 10 ಸಾವಿರ ಕೃಷಿ ಉತ್ಪಾದ ಕರ ಸಂಘ ಅಸ್ತಿತ್ವಕ್ಕೆ ತರಲು ನಿರ್ಧರಿಸಿದೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನ ದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಶೇ.80ರಷ್ಟು ರೈತರು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವ ರಾಗಿದ್ದಾರೆ. ಮಂಡ್ಯ ಜಿಲ್ಲೆ ನೀರಾವರಿ ಪ್ರದೇಶ ವಾಗಿರುವುದರಿಂದ ಇಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಬೆಳೆಗಳನ್ನು ನಿರಾಯಾಸವಾಗಿ ಬೆಳೆಯಬಹುದು. ಆದರೆ ಉತ್ತರ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ನೀರಾವರಿಯಲ್ಲದ ಪ್ರದೇಶದ ರೈತರು ಮಳೆಯಾಶ್ರಯದಲ್ಲೇ ಬೆಳೆ ಬೆಳೆಯಬೇಕು. ಒಂದು ವೇಳೆ ಮಳೆ ಕೈ ಕೊಟ್ಟರೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಪರಿಸ್ಥಿತಿ ತೀರಾ ದುಸ್ತರ ಎಂದರು.

ಕೆಲವೆಡೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಕೃಷಿಗಾಗಿ ಪರಿಕರಗಳು, ಟಿಲ್ಲರ್ ಗಳು ಹಾಗೂ ಎತ್ತುಗಳನ್ನು ಖರೀದಿಸ ಲಾಗದೇ ಕಂಗೆಟ್ಟಿದ್ದಾರೆ. ಜೊತೆಗೆ ಕೃಷಿ ಮಾಡಲಾಗದೇ ತಮ್ಮ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸಹಕಾರ ನೀಡಲು ಮುಂದಾಗಿದೆ. ಕೃಷಿ ಉತ್ಪಾದಕರ ಸಂಘ ಮಾಡಬೇಕೆಂದು ಚಿಂತನೆ ನಡೆಸಿದೆ. ರೈತ ರನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳು ಒಂದಾಗಿವೆ ಎಂದರು.

ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ 1 ಲಕ್ಷದ 23 ಸಾವಿರ ಕೋಟಿ ಹಣವನ್ನು ಕೃಷಿ ಬಜೆಟ್‍ಗೆ ಮೀಸಲಿಟ್ಟಿದೆ. ಎಂಟು ಸಾವಿರ ಕೋಟಿ 1 ವರ್ಷದ ಕೃಷಿ ಬಜೆಟ್ ಆಗಿದೆ. 10 ಲಕ್ಷ ಕೋಟಿ ಹಣವನ್ನು ಕೃಷಿ ನಿಧಿಗಾಗಿ ಮೀಸಲಿಟ್ಟಿದೆ. 25 ವಿವಿಧ ಘಟಕಗಳನ್ನು ಸ್ಥಾಪನೆ ಮಾಡುವ ಮೂಲಕ ಸಣ್ಣ ರೈತರಿಗೆ ಸ್ಟೋರೇಜ್ ಮಾಡಿ ಕೊಳ್ಳಲು ಅನೇಕ ಉತ್ಪಾದನೆಗಳನ್ನು ಕೈಗೆತ್ತಿ ಕೊಳ್ಳಲು ಸಹಕಾರ ಮಾಡಲು ಮುಂದಾ ಗಿದೆ ಎಂದು ವಿವರಿಸಿದರು.
ರಾಸಾಯನಿಕ ಮುಕ್ತ ಬೆಲ್ಲಕ್ಕೆ ದೇಶಾ ದ್ಯಂತ ಅವಕಾಶ ನೀಡಿದ್ದು, ಇದನ್ನು ಅತಿ ಹೆಚ್ಚು ಬೆಲ್ಲ ಉತ್ಪಾದಿಸುವ ಮಂಡ್ಯ ಜಿಲ್ಲೆ ಸದುಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ಬೆಲ್ಲ ಉತ್ಪಾದಿಸುವ ಆಲೆಮನೆ ಗಳಿಗೆ ಶೇ.30ರಷ್ಟು ಸಬ್ಸಿಡಿ ನೀಡಲಾಗು ತ್ತಿದೆ. ರೈತರನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೋವಿಡ್ 1 ಮತ್ತು 2ನೇ ಅಲೆಯಲ್ಲಿ ದೇಶಕ್ಕೆ ಅನೇಕ ಸಂಕಷ್ಟಗಳು ಬಂದೊದ ಗಿದ್ದವು. ಆದರೆ ಎಲ್ಲೂ ಸಹ ಸೋಂಕಿತ ರಿಗೆ ಆಹಾರದ ಕೊರತೆಯಾಗಲಿಲ್ಲ. ಹಣ್ಣು, ತರಕಾರಿ, ಹಾಲು ಯಾವುದೂ ಸಹ ಕೊರತೆ ಯಾಗದಂತೆ ಲಭ್ಯವಾದವು. ಅಮೇರಿಕಾದಂ ತಹ ರಾಷ್ಟ್ರದಲ್ಲೇ ಆಹಾರಕ್ಕೆ ಕೊರತೆಯುಂ ಟಾಗಿ ಸೋಂಕಿತರು ಇಷ್ಟೇ ಪ್ರಮಾಣದಲ್ಲಿ ಆಹಾರ ಬಳಸಬೇಕೆಂದು ಮನವಿ ಮಾಡಿದ್ದರು. ಆದರೆ ಭಾರತದಲ್ಲಿ ಅಂತಹ ಕೊರತೆ ಆಗಲಿಲ್ಲ. ಅತಿ ಹೆಚ್ಚು ಆಹಾರ ಪದಾರ್ಥ ಉತ್ಪಾದಿ ಸಿದ ಕೀರ್ತಿ ನಮ್ಮ ರೈತರಿಗೆ ಸಲ್ಲಬೇಕೆಂದರು.

ಅಹಾರ ಧಾನ್ಯ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ನಮ್ಮ ರೈತರ ಕೆಲಸ ಗಳು ಶ್ಲಾಘನೀಯ. ಆದರೆ ಅವರು ಬೆಳೆದ ಬೆಳೆಗೆ ಮಾತ್ರ ಅಗತ್ಯ ಬೆಲೆ ಸಿಗುತ್ತಿಲ್ಲ. ಇದನ್ನು ನಾವು ನಿವಾರಣೆ ಮಾಡಬೇಕೆಂದರು.

ಕೃಷಿ ಸರಳೀಕರಣ ಮಾಡುವ ಸಲುವಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದು, ಇನ್ನು ಅನೇಕ ರೈತ ಪರ ಯೋಜನೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದರು.

ಪೆಟ್ರೋಲ್ ಹಾಗೂ ಡೀಸೆಲ್ ನಮ್ಮ ದೇಶ ದಲ್ಲಿ ಉತ್ಪಾದನೆಯಾಗದ ಕಾರಣ ಬೆಲೆ ಹೆಚ್ಚಿದೆ. ಅನ್ಯ ದೇಶದಿಂದ ತರುವಾಗ ಸುಂಕ ಹಾಗೂ ಇನ್ನಿತರ ಖರ್ಚಿನಿಂದ ಬೆಲೆ ಹೆಚ್ಚಾ ಗಿದೆ. ಇದನ್ನು ತಡೆಯುವ ಸಲುವಾ ಗಿಯೇ ಎಥನಾಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಂಡ್ಯ ಜಿಲ್ಲೆಯಲ್ಲೂ ಸಕ್ಕರೆ ಕಾರ್ಖಾನೆ ಇರುವುದರಿಂದ ಎಥನಾಲ್ ಉತ್ಪಾದನೆಗೆ ಹೆಚ್ಚಿನ ಒತ್ತು ಕೊಡಿ ಎಂದು ಸೂಚಿಸಿದರು.

ದೇಶದಲ್ಲಿ ಮಂಡ್ಯದ ಬೆಲ್ಲಕ್ಕೆ ಭಾರೀ ಬೇಡಿಕೆ ಇದೆ. ಈ ಬೆಲ್ಲವನ್ನು ವಿದೇಶಕ್ಕೂ ಸಹ ರಫ್ತು ಮಾಡಲಾಗುತ್ತದೆ. ಆದರೆ ಕೆಲ ಕಿಡಿಗೇಡಿಗಳು ಮಂಡ್ಯ ಬೆಲ್ಲಕ್ಕೆ ರಾಸಾಯ ನಿಕ ಮಿಶ್ರಣ ಮಾಡುವ ಆರೋಪ ಕೇಳಿ ಬಂದಿದೆ. ಇದನ್ನು ಅಧಿಕಾರಿಗಳು ಗಂಭೀರ ವಾಗಿ ಪರಿಗಣಿಸಬೇಕು. ಇದು ರಾಷ್ಟ್ರ ಮಟ್ಟ ದಲ್ಲಿ ಬೆಳಕಿಗೆ ಬಂದರೆ ಭಾರತದ ಬೆಲ್ಲಕ್ಕೆ ವಿದೇಶದಲ್ಲಿ ಮಾನ್ಯತೆಯೇ ಇಲ್ಲದಂತಾಗು ತ್ತದೆ ಎಂದು ಎಚ್ಚರಿಸಿದರು.

ಇನ್ನು ಮೇಕೆದಾಟು ಬಳಿ ಡ್ಯಾಂ ನಿರ್ಮಾ ಣದ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಹೇಳಿಕೆ ಕೊಟ್ಟಿರಬಹುದು. ಆದರೆ ಈ ವಿಚಾರ ದಲ್ಲಿ ನಾವು ರಾಜ್ಯ ಸರ್ಕಾರ ತೆಗೆದುಕೊ ಳ್ಳುವ ತೀರ್ಮಾನಕ್ಕೆ ಬದ್ಧರಿದ್ದೇವೆ. ಕಾವೇರಿ ನ್ಯಾಯಾಧೀಕರಣ ಹೇಳಿದಂತೆಲ್ಲಾ ನಾವು ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಈಗ ತಮಿಳುನಾಡು ಸರ್ಕಾರ ಅಣೆಕಟ್ಟೆ ನಿರ್ಮಾಣ ವಾದರೆ ನಮಗೆ ನೀರು ಕೊಡುವುದಿಲ್ಲ ಎಂಬ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಡ್ಯಾಂ ನಿರ್ಮಾಣವಾದರೂ ನ್ಯಾಯಾಧೀ ಕರಣದ ಸೂಚನೆಯಂತೆ ನಾವು ನೀರು ಕೊಡುತ್ತೇವೆ ಎಂದರು.

ಡ್ಯಾಂ ನಿರ್ಮಾಣದಿಂದ ನಮಗೂ ಲಾಭ ವಿದೆ. ಅವರಿಗೂ ಲಾಭವಿದೆ. ಅದನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಯೋಜನೆಗೆ ಅಡ್ಡಗಾಲು ಹಾಕದೇ ಡ್ಯಾಂ ನಿರ್ಮಾಣಕ್ಕೆ ಅವಕಾಶ ಮಾಡಿಕೊಡ ಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಸಿ. ನಾರಾಯಣಗೌಡ, ಶಾಸಕ ನಾಗೇಂದ್ರ, ಮಾಜಿ ಸಚಿವ ಎ.ಮಂಜು, ಬಿಜೆಪಿ ಜಿಲ್ಲಾ ಧ್ಯಕ್ಷ ವಿಜಯ ಕುಮಾರ್, ಮುಖಂಡರಾದ ಸಿದ್ದರಾಮಯ್ಯ, ಮಹೇಶ್ ಇತರರಿದ್ದರು.

Translate »