ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮಂಡ್ಯ

ಭತ್ತ ನಾಟಿ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

August 17, 2021

ಮಂಡ್ಯ, ಆ.16(ಮೋಹನ್‍ರಾಜ್)- ಜನಾಶೀರ್ವಾದ ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಹಿಳಾ ಕಾರ್ಮಿಕರೊಂದಿಗೆ ಗದ್ದೆಯಲ್ಲಿ ನಾಟಿ ಮಾಡಿ ಹಾಗೂ ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದರು.

ಸೋಮವಾರ ಬೆಳಗ್ಗೆ ಬೆಂಗಳೂರಿ ನಿಂದ ಮಂಡ್ಯ ಕಡೆಗೆ ಬರುವ ಮಾರ್ಗ ಮಧ್ಯದಲ್ಲಿ ಚನ್ನಪಟ್ಟಣ ಬಳಿ ಇರುವ ಕೆಂಗಲ್ ಹನುಮಂತನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಂಡ್ಯ ಗಡಿ ಪ್ರವೇಶಿಸುತ್ತಿದ್ದಂತೆ ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಕೇಂದ್ರ ಸಚಿವ ರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಆ ಬಳಿಕ ಮಂಡ್ಯ ನಗರಕ್ಕೆ ಆಗಮಿ ಸಿದ ಅವರು, ಕೆರಗೋಡು ರಸ್ತೆಯಲ್ಲಿ ರುವ ಸಾತನೂರು ಗ್ರಾಮದ ಆಲೆಮನೆ ಯೊಂದಕ್ಕೆ ಭೇಟಿ ನೀಡಿದರು. ಆಲೆಮನೆ ಯಲ್ಲಿ ಬೆಲ್ಲ ಉತ್ಪಾದಿಸುವುದನ್ನು ಪರಿಶೀ ಲಿಸಿದ ಸಚಿವರು, ಬಳಿಕ ಗಾಣಕ್ಕೆ ತಾವೇ ಕಬ್ಬನ್ನು ನೀಡುವ ಮೂಲಕ ಸಂತಸಪಟ್ಟರು.
ಬಳಿಕ ಕೊಮ್ಮೇರಹಳ್ಳಿ- ಹೊನಗಾನಹಳ್ಳಿ ಗ್ರಾಮದ ಬಳಿ ರೈತ ಕೂಲಿ ಕಾರ್ಮಿಕ ಮಹಿಳೆಯರೊಂದಿಗೆ ಗದ್ದೆಗಿಳಿದು ಸುಮಾರು ಹತ್ತು ನಿಮಿಷಗಳ ಕಾಲ ನಾಟಿ ಮಾಡಿದರು. ಜೊತೆಗೆ ಟ್ರ್ಯಾಕ್ಟರ್ ಸಹ ಚಲಾಯಿಸಿ ಗಮನ ಸಳೆದರು.

ಬಳಿಕ ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಮೈಸೂರಿನತ್ತ ತೆರಳಿದರು.

ಈ ಸಂದರ್ಭದಲ್ಲಿ ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ನಾಗೇಂದ್ರ, ಮಾಜಿ ಸಚಿವ ಎ.ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿ ರಾಜುಗೌಡ, ಮುಖಂಡ ರಾದ ಸಿದ್ದರಾ ಮಯ್ಯ, ಉಮೇಶ್, ಮೈ.ವಿ.ರವಿಶಂಕರ್, ಮುಡಾ ಅಧ್ಯಕ್ಷ ಶ್ರೀನಿವಾಸ್ ಇತರರಿದ್ದರು.

Translate »