ಮೈಸೂರು ಪಾಲಿಕೆ ವ್ಯಾಪ್ತಿಯ ಬೀದಿಬದಿ   ವರ್ತಕರಿಗೆ 10 ಸಾವಿರ ರೂ. ಸಾಲ ಸೌಲಭ್ಯ
ಮೈಸೂರು

ಮೈಸೂರು ಪಾಲಿಕೆ ವ್ಯಾಪ್ತಿಯ ಬೀದಿಬದಿ  ವರ್ತಕರಿಗೆ 10 ಸಾವಿರ ರೂ. ಸಾಲ ಸೌಲಭ್ಯ

October 30, 2020

ಮೈಸೂರು,ಅ.29-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡು ತ್ತಿರುವ ಬೀದಿ ಬದಿ ವರ್ತಕರಿಗೆ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿ ಗಳ ಆತ್ಮನಿರ್ಭರ್ ನಿಧಿ (Pಒ Sಗಿಂ ಓIಆಊI) ‘ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಲ ಮರುಪಾವ ತಿಗೆ ಉತ್ತೇಜನ ನೀಡುವ ಮೂಲಕ ಡಿಜಿಟಲ್ ವಹಿವಾಟಿಗೆ ಉತ್ತೇಜನ ಮತ್ತು ಬಹುಮಾನ ನೀಡುವ ಉದ್ದೇಶ ಈ ಯೋಜನೆಯದಾಗಿದ್ದು, ಈ ಯೋಜನೆಯಲ್ಲಿ ಬೀದಿಬದಿ ವ್ಯಾಪಾ ರಸ್ಥರಿಗೆ ಕೈಗೆಟಕುವ ದರದಲ್ಲಿ 10 ಸಾವಿರದವರೆಗೆ ಸಾಲ ಸೌಲಭ್ಯ ದೊರೆ ಯುತ್ತಿದೆ. ಮಾರ್ಚ್ 24, 2020ರೊಳ ಗಾಗಿ ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡು ಗುರುತಿಸಲ್ಪಟ್ಟಿರುವ ‘ಗುರುತಿನ ಚೀಟಿ’ ಮತ್ತು ವ್ಯಾಪಾರ ಪ್ರಮಾಣ ಪತ್ರ ಹೊಂದಿ ರುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಈ ಸೌಲಭ್ಯ ಪಡೆಯಲು ಅರ್ಹg.Áಗಿರುತ್ತಾರೆ. ಬೀದಿ ಬದಿ ವ್ಯಾಪಾರಸ್ಥರೆಂದು ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟು ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರ ಹೊಂದಿಲ್ಲದಿದ್ದವರು ಸಹ ಫಲಾನುಭವಿಗಳಾಗಬಹುದು. ಈ ಬಗ್ಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವವರನ್ನು ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರು ಮತ್ತು ಸಂಬಂಧಪಟ್ಟ ವಲಯ ಕಚೇರಿ ವ್ಯಾಪ್ತಿಯಲ್ಲಿನ ಸಮುದಾಯ ಸಂಘಟಕರು, ವ್ಯಾಪಾರ ನಡೆಸಲಾಗುತ್ತಿರುವ ಬಗ್ಗೆ ಜಂಟಿ ಸ್ಥಳ ಪರಿಶೀಲನೆ ಮಾಡಿ ಯೋಜನೆಯ ಮಾರ್ಗಸೂಚಿ ಮತ್ತು ಸರ್ಕಾರದ ಸುತ್ತೋಲೆಯಂತೆ ಅರ್ಹತೆ ಪಡೆದವರಾಗಿದ್ದಲ್ಲಿ “ಶಿಫಾರಸ್ಸು ಪತ್ರ” ನೀಡುವ ಮೂಲಕ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. 10 ಸಾವಿರ ಸಾಲವನ್ನು ಮಾಸಿಕ ಕಂತುಗಳ ಮುಖಾಂತರ ಒಂದು ವರ್ಷದ ಅವಧಿಯವರೆಗೆ ಪಾವತಿಸಲು ಅವಕಾಶವಿದೆ. ಸಾಲದ ಮೊತ್ತವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವಾರ್ಷಿಕ ಶೇ.7 ರಷ್ಟು ಬಡ್ಡಿ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಪ್ರತಿ ತ್ರೈಮಾಸಿಕವಾಗಿ ಜಮೆಗೊಳಿಸಲಾಗುವುದು.

ಯೋಜನೆ ಮಾಹಿತಿಗೆ ಸಂಪರ್ಕಿಸಿ: ವಲಯ ಕಚೇರಿಗಳ ಡೇ-ನಲ್ಮ್ ಯೋಜನೆಯ ಸಮುದಾಯ ಸಂಘಟಕರುಗಳು ಹಾಗೂ ಟಿ.ವಿ.ಸಿ ಸದಸ್ಯರುಗಳನ್ನು ಸಂಪರ್ಕಿಸ ಬಹುದು. ವಲಯ ಕಚೇರಿ ಸಂಖ್ಯೆ 1ರ ಸಮುದಾಯ ಸಂಘಟಕರಾದ ನಳಿನ ಆರ್.ಪಿ-9844316512, ಟಿ.ವಿ.ಸಿ ಸದಸ್ಯರಾದ ಗುರುಸ್ವಾಮಿ ಆರ್-9620161299, ವಲಯ ಕಚೇರಿ 2ರ ಸಮುದಾಯ ಸಂಘಟಕರಾದ ಉಷಾಪೂರ್ಣ-9481515527, ಟಿ.ವಿ.ಸಿ ಸದಸ್ಯರಾದ ಬಿ.ಆರ್.ರವಿ-9945261197, ವಲಯ ಕಚೇರಿ 3 ರ ಸಮುದಾಯ ಸಂಘಟಕರಾದ  ಎಂ.ಮುನಿಲಕ್ಷ್ಮಮ್ಮ-9886041972, ಟಿ.ವಿ.ಸಿ ಸದಸ್ಯರಾದ ಪ್ರಭುಸ್ವಾಮಿ-812304062, ವಲಯಕಚೇರಿ 4 ರ ರಮೇಶ್-9449124422, ಟಿ.ವಿ.ಸಿ ಸದಸ್ಯರಾದ ಎಂ.ಅನಿತಕುಮಾರಿ-9739325288, ವಲಯ ಕಚೇರಿ 5 ಸಮುದಾಯ ಸಂಘಟಕರಾದ ರಮೇಶ್-9449124422, ಟಿ.ವಿ.ಸಿ ಸದಸ್ಯರಾದ ನಾಗರತ್ನಮ್ಮ-7899113747, ವಲಯ ಕಚೇರಿ 6 ರ ಸಮುದಾಯ ಸಂಘಟಕರಾದ ಜಮುನ-9740129562, ಟಿ.ವಿ.ಸಿ ಸದಸ್ಯರಾದ ಜಿಯಾವುಲ್ಲಾ-9740985728, ವಲಯ ಕಚೇರಿ 7ರ  ಸಮು ದಾಯ ಸಂಘಟಕರಾದ ಸಂತೋಷ್ ಕುಮಾರ್-9972634378, ಟಿ.ವಿ.ಸಿ ಸದಸ್ಯರಾದ ಬಸಪ್ಪ ಬಿ.-9035746592, ವಲಯ ಕಚೇರಿ 8 ರ  ಸಮುದಾಯ ಸಂಘಟಕರಾದ ಸಂತೋಷ್‍ಕುಮಾರ್-9972634378, ಟಿ.ವಿ.ಸಿ ಸದಸ್ಯರಾದ ಭಾರತಿ-8095644520 ಹಾಗೂ ವಲಯ ಕಚೇರಿ 9 ರ ಸಮುದಾಯ ಸಂಘಟಕರಾದ ನಳಿನ ಆರ್.ಪಿ- 9844316512, ಟಿ.ವಿ.ಸಿ ಸದಸ್ಯರಾದ ವಿ-ವಡಿವೇಲು-9742395661.

 

 

Translate »