ಕುಕ್ಕರಹಳ್ಳಿ ಕೆರೆ ಬಳಿ ಮರಕ್ಕೆ ಕಾರು  ಡಿಕ್ಕಿ: ಯುವಕ ಸಾವು, ಮತ್ತೊಬ್ಬ ಗಂಭೀರ
ಮೈಸೂರು

ಕುಕ್ಕರಹಳ್ಳಿ ಕೆರೆ ಬಳಿ ಮರಕ್ಕೆ ಕಾರು  ಡಿಕ್ಕಿ: ಯುವಕ ಸಾವು, ಮತ್ತೊಬ್ಬ ಗಂಭೀರ

October 30, 2020

ಮೈಸೂರು,ಅ.29(ವೈಡಿಎಸ್)-ಮೈಸೂರಿನ ಬೋಗಾದಿ ರಸ್ತೆಯ ಕುಕ್ಕರಹಳ್ಳಿ ಕೆರೆ ಬಳಿ ಬುಧವಾರ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಚನ್ನಪಟ್ಟಣ ನಿವಾಸಿ ಅರುಣ್‍ಕುಮಾರ್ (25) ಮೃತರು. ಚಾಲಕ ಶಿವಕುಮಾರ್, ಮೂವರು ಸ್ನೇಹಿತರೊಂದಿಗೆ ಬುಧವಾರ ತಡರಾತ್ರಿ ಕಾರಿ ನಲ್ಲಿ ಟಿ.ಕೆ.ಲೇಔಟ್‍ಗೆ ಹೋಗುತ್ತಿದ್ದಾಗ ಕುಕ್ಕರಹಳ್ಳಿ ಕೆರೆ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅರುಣ್ ಕುಮಾರ್‍ಗೆ ತೀವ್ರ ಪೆಟ್ಟಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿ ಸದೇ ಸಾವನ್ನಪ್ಪಿದ್ದಾರೆ. ಮಣಿ ಎಂಬುವರು ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಶಿವಕುಮಾರ್ ಮತ್ತು ಸುನಿಲ್ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೆ.ಆರ್. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Translate »