ಪಾಕ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ
ಮೈಸೂರು

ಪಾಕ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ

October 30, 2020

ನವದೆಹಲಿ,ಅ.29-ಪಾಕ್‍ನ ಪುಲ್ವಾಮ ದಾಳಿ ಹೇಳಿಕೆಗೆ ಭಾರತ ಕಟು ವಾಗಿ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಬಗೆಗಿನ ಸತ್ಯ ಇಡೀ ಜಗತ್ತಿಗೇ ಗೊತ್ತಿದೆ. ಭಯೋತ್ಪಾದಕರಿಗೆ ಆ ದೇಶ ಎಷ್ಟರಮಟ್ಟಿಗೆ ಬೆಂಬಲ ನೀಡು ತ್ತದೆ ಎಂಬುದು ಜಗಜ್ಜಾಹೀರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.

ಪಾಕ್ ಉಗ್ರರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂಬ ಸತ್ಯವನ್ನು ಅದರ ಯಾವ ನಿರಾಕರಣೆಗಳೂ ಮುಚ್ಚಿಡಲು ಸಾಧ್ಯವೇ ಇಲ್ಲ. ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಅನೇಕ ಉಗ್ರಸಂಘಟನೆಗಳ ಭಯೋತ್ಪಾದಕರಿಗೆ ಆಶ್ರಯ ಕೊಟ್ಟಿರುವ ಪಾಕಿಸ್ತಾನ, ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುವುದೂ ಸರಿಯಲ್ಲ ಎಂದು ಕಟುವಾಗಿ ತಿರುಗೇಟು ನೀಡಿದ್ದಾರೆ.

ನಮ್ಮ ಕಾರ್ಯತಂತ್ರ ನೋಡಿ: ಪುಲ್ವಾಮಾ ದಾಳಿಗೆ ಪಾಕಿಸ್ತಾನದ ಬೆಂಬಲವಿದೆ ಎಂಬ ಭಾರತದ ವಾದಕ್ಕೆ ಇದೀಗ ಜಾಗತಿಕ ಮನ್ನಣೆ ದೊರೆತಿದ್ದು, ಪಾಕ್ ಸಚಿವರೇ ಭಾರತದ ವಾದಕ್ಕೆ ಬಲ ತುಂಬಿದ್ದಾರೆ. ಅದರಂತೆ ಪಾಕ್ ಸಚಿವ ಫವಾದ್ ಚೌಧರಿ ಹೇಳಿಕೆಯನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಹಾಗೂ ನಿವೃತ್ತ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್, ಭಾರತದ ವಾದಕ್ಕೆ ಬಲ ತುಂಬಿರುವ ಚೌಧರಿ ಒಳ್ಳೆಯದನ್ನೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿಗೆ ನಾವೇ ಕಾರಣ ಎಂದು ಸತ್ಯ ಒಪ್ಪಿಕೊಂಡ ಪಾಕಿಸ್ತಾನಕ್ಕೆ ಧನ್ಯವಾದ, ಭಾರತ ಈ ಹೇಳಿಕೆಯ ಸದುಪಯೋಗ ಪಡೆದುಕೊಳ್ಳ ಲಿದೆ ಎಂದು ಜನರಲ್ ವಿಕೆ ಸಿಂಗ್ ಹೇಳಿದ್ದಾರೆ. ಪಾಕ್ ಸಚಿವನ ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಪಾಕಿಸ್ತಾನದ ಭಯೋತ್ಪಾದಕ ಮುಖವಾಡವನ್ನು ಜಾಗತಿಕ ವಾಗಿ ಭಾರತ ಕಳಚಲಿದೆ ಎಂದು ವಿ.ಕೆ.ಸಿಂಗ್ ಭರವಸೆ ನೀಡಿದರು. ಈಂಖಿಈ ಸಂಸ್ಥೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಫವಾದ್ ಚೌಧರಿ ಹೇಳಿಕೆ ಸಹಾಯಕಾರಿ ಯಾಗಿದ್ದು, ಈ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಲಿದೆ ಎಂದು ವಿ.ಕೆ.ಸಿಂಗ್ ನುಡಿದರು.

 

 

Translate »