ಪಾಕ್ ಸಂಸತ್‍ನಲ್ಲಿ ಮೋದಿ ಪರ ಘೋಷಣೆ, ಸಚಿವ ಖುರೇಷಿ ಸಭಾತ್ಯಾಗ
ಮೈಸೂರು

ಪಾಕ್ ಸಂಸತ್‍ನಲ್ಲಿ ಮೋದಿ ಪರ ಘೋಷಣೆ, ಸಚಿವ ಖುರೇಷಿ ಸಭಾತ್ಯಾಗ

October 30, 2020

ಇಸ್ಲಾಮಾಬಾದ್, ಅ.29- ಪಾಕಿಸ್ತಾನ ಸಂಸತ್ತಿನಲ್ಲಿ ಬಲೂಚಿಸ್ತಾನ್ ಸಂಸದರು ಜೋರು ಧ್ವನಿಯಲ್ಲಿ “ಮೋದಿ … ಮೋದಿ … ಮೋದಿ …” ಎಂದು ಘೋಷಣೆ ಕೂಗಿದ್ದಾರೆ.

ಈಗಾಗಲೇ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಷಯದಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರ ಕಾಲು ಗಳು ನಡುಗಿದ್ದವು ಎಂಬ ಸುದ್ದಿ ಪಾಕಿಸ್ತಾನಕ್ಕೆ ತೀವ್ರ ಮುಜುಗರ ವನ್ನುಂಟು ಮಾಡಿದೆ. ಇದರ ನಡುವೆಯೇ ಪಾಕಿಸ್ತಾನ ಸಂಸತ್ ನಲ್ಲಿ ಕೆಲ ಸಂಸದರು ಮೋದಿ ಪರ ಘೋಷಣೆ ಕೂಗಿರುವುದು ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.

ಪಾಕ್ ಸಂಸತ್‍ನಲ್ಲಿ ಆಗಿದ್ದೇನು?: ಚಾರ್ಲಿ ಹೆಬ್ಡೋ ಕಾರ್ಟೂನ್ ಮತ್ತು ಇಸ್ಲಾಮೋಫೆÇೀಬಿಯಾ ವಿಚಾರವಾಗಿ ಪಾಕ್ ಸಂಸತ್‍ನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಬಲೂಚಿಸ್ತಾನ್ ಸಂಸದರು ಜೋರು ಧ್ವನಿಯಲ್ಲಿ ಮೋದಿ… ಮೋದಿ… ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ವಿದೇಶಾಂಗ ವ್ಯವಹಾರ ಗಳ ಸಚಿವ ಮೊಹಮ್ಮದ್ ಖುರೇಷಿ
ತಮ್ಮ ಭಾಷಣವನ್ನು ಮಧ್ಯದಲ್ಲಿಯೇ ಮೊಟಕುಗೊಳಿಸಿ ಸಂಸತ್ತಿನಿಂದ ಹೊರ ನಡೆದಿ ದ್ದಾರೆ. ಬಲೂಚಿಸ್ತಾನ್ ವಿಷಯ ಕುರಿತು ಖುರೇಷಿ ಮಾತನಾಡುತ್ತಿದ್ದಾಗ ಬಲೂಚಿಸ್ತಾನ್ ಸಂಸದರು ಮೋದಿಯನ್ನು ಕೊಂಡಾಡಿದ್ದಾರೆ. ಪದೇ ಪದೆ ಅವರ ಪರ ಘೋಷಣೆ ಕೂಗಿ ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವ ಖುರೇಷಿ …. ಆ ಸಂಸದರ ಹೃದಯಗಳಲ್ಲಿ ಮೋದಿಯವರ ಆಶಯಗಳು ನುಸುಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಪಕ್ಷದ ಸದಸ್ಯರು ಪಾಕಿಸ್ತಾನದಲ್ಲಿ ಭಾರತದ ದೃಷ್ಟಿಕೋನವನ್ನು ಮಾರಾಟ ಮಾಡುತ್ತಿದ್ದಾರೆ. ರಾಷ್ಟ್ರೀಯ ಸಂಸ್ಥೆಗಳನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಪ್ರತಿಪಕ್ಷಗಳ ಸದಸ್ಯರ ಬಲೂಚಿಸ್ತಾನ್ ಸ್ವಾತಂತ್ರ್ಯದ ಘೋಷಣೆಗಳು ನಾಚಿಕೇಗೇಡು ಎಂದು ಹೇಳಿ ಸಂಸದರ ವರ್ತನೆಯನ್ನು ಖಂಡಿಸಿ ದರು. ಇದೇ ವೇಳೆ ಆಡಳಿತ ಪಕ್ಷದ ಸಂಸದರು, ಮೋದಿ ಪರ ಘೋಷಣೆ ಕೂಗುವ ನಾಯಕರು ದೇಶದ್ರೋಹಿಗಳು ಎಂದು ಮರುಘೋಷಣೆ ಕೂಗಿದ್ದಾರೆ.

Translate »