ಭಾರತದ ದಾಳಿ ಭೀತಿ; ತರಾತುರಿಯಲ್ಲಿ ಅಭಿನಂದನ್ ಬಿಡುಗಡೆ ಮಾಡಿದ್ದ ಪಾಕ್!
ಮೈಸೂರು

ಭಾರತದ ದಾಳಿ ಭೀತಿ; ತರಾತುರಿಯಲ್ಲಿ ಅಭಿನಂದನ್ ಬಿಡುಗಡೆ ಮಾಡಿದ್ದ ಪಾಕ್!

October 30, 2020

ನವದೆಹಲಿ, ಅ.29- ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರಕರಣ ಸುಲಭದಲ್ಲಿ ಮರೆಯು ವಂತಹುದಲ್ಲ. ವೈಮಾ ನಿಕ ದಾಳಿಯ ವೇಳೆ ಪಾಕಿ ಸ್ತಾನ ಭೂಭಾಗ ಸೇರಿದ್ದ ಅಭಿನಂದನ್ ವರ್ಧಮಾನ್ ರನ್ನು ಪಾಕಿಸ್ತಾನ 60 ಗಂಟೆಗಳ ಒಳಗೆ ಭಾರತಕ್ಕೆ ಮರಳಿ ಕಳು ಹಿಸಿತ್ತು. ಆದರೆ ವಿಂಗ್ ಕಮಾಂಡರ್ ಬಿಡುಗಡೆಯ ಹಿಂದಿನ ಕಥೆ ಈಗ ಬಯಲಾಗಿದೆ. ಒಂದು ವೇಳೆ ಪಾಕಿಸ್ತಾನ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರನ್ನು ಬಿಡುಗಡೆ ಮಾಡದೇ ಇದ್ದರೆ ಭಾರತವು ಅದರ ಮೇಲೆ ದಾಳಿ ನಡೆಸ ಬಹುದು ಎಂಬ ಭೀತಿಯಿಂದ ಅವರನ್ನು ಬಿಡುಗಡೆ ಮಾಡ ಲಾಗಿತ್ತು ಎಂದು ಪಿಎಂಎಲ್-ಎನ್ ನಾಯಕ ಅಯಾಝ್ ಸಾದಿಕ್ ಪಾಕ್ ಸಂಸತ್ತಿನಲ್ಲಿ ಹೇಳಿದ್ದಾರೆ. ಸದನದ ಚರ್ಚೆ ಯಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ಅಯಾಝ್ ಸಾದಿಕ್, `ವರ್ಧಮಾನ್ ಅವರನ್ನು ಕಸ್ಟಡಿಗೆ ಪಡೆದ ನಂತರ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಶಾ ಮಹಮೂದ್ ಖುರೇಷಿ ಸಭೆಯಲ್ಲಿದ್ದರು.

ಇಮ್ರಾನ್ ಖಾನ್ ಹಾಜರಾಗಲು ನಿರಾಕರಿಸಿದ್ದರು. ನನಗಿನ್ನೂ ನೆನಪಿದೆ. ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಕೋಣೆಗೆ ಬಂದರು, ಅವರ ಕಾಲುಗಳು ನಡುಗುತ್ತಿದ್ದವು, ಬೆವರುತ್ತಿದ್ದರು. ಆಗ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು, ನಾವು ಅಭಿನಂದನ್ ರನ್ನು ಬಿಡುಗಡೆ ಮಾಡದೆ ಇದ್ದರೆ, ರಾತ್ರಿ 9 ಗಂಟೆಗೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ, ಅವರನ್ನು ಬಿಟ್ಟು ಬಿಡಿ ಎಂದಿದ್ದರು’ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಭಿನಂದನ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಬೆಂಬಲಿಸಿವೆ. ಆದರೆ, ಇನ್ನು ಎಲ್ಲ ವಿಚಾರದಲ್ಲಿಯೂ ಬೆಂಬಲಿಸಲು ಸಾಧ್ಯವಿಲ್ಲ ಎಂದು ಸಾದಿಕ್ ಹೇಳಿದ್ದಾಗಿ ಪಾಕ್‍ನ `ದುನಿಯಾ ನ್ಯೂಸ್’ ವರದಿ ಮಾಡಿದೆ.

Translate »