ಅತಿಕ್ರಮಣವಾಗಿದ್ದ 100 ಕೋಟಿ  ಮೌಲ್ಯದ ಆಸ್ತಿ ಮುಡಾ ವಶಕ್ಕೆ ಮೈಸೂರು ವಿಜಯನಗರ 4ನೇ ಹಂತದಲ್ಲಿ 5.14 ಎಕರೆ ಆಸ್ತಿ ರಕ್ಷಣೆ
ಮೈಸೂರು

ಅತಿಕ್ರಮಣವಾಗಿದ್ದ 100 ಕೋಟಿ ಮೌಲ್ಯದ ಆಸ್ತಿ ಮುಡಾ ವಶಕ್ಕೆ ಮೈಸೂರು ವಿಜಯನಗರ 4ನೇ ಹಂತದಲ್ಲಿ 5.14 ಎಕರೆ ಆಸ್ತಿ ರಕ್ಷಣೆ

December 19, 2021

ಮೈಸೂರು,ಡಿ.18(ಆರ್‍ಕೆ)- ಮೈಸೂರು ನಗರದಾದ್ಯಂತ ಸರ್ಕಾರಿ ಆಸ್ತಿ ಕಬಳಿಸು ತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೈಸೂರಿನ ವಿಜಯನಗರ 4ನೇ ಹಂತ, 2ನೇ ಘಟ್ಟದಲ್ಲಿ ವಸತಿ ಬಡಾವಣೆಗೆಂದು ಮುಡಾ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡಿದ್ದ ಬಸವನಹಳ್ಳಿಯ ಸರ್ವೆ ನಂ.118ರ 5.14 ಎಕರೆ ಜಮೀನಿನಲ್ಲಿ ಅನ ಧಿಕೃತವಾಗಿ 2 ಶೆಡ್‍ಗಳನ್ನು ನಿರ್ಮಿಸುವುದರೊಂದಿಗೆ ಕಬಳಿಸಲಾಗಿತ್ತು.

ಭೂ ಸ್ವಾಧೀನಪಡಿಸಿಕೊಂಡ ನಂತರ ಮುಡಾದಿಂದ ಅದರ ಮಾಲೀಕರಿಗೆ ಪರಿಹಾರ ವನ್ನು ಪಾವತಿಸಿದ್ದರೂ, ಅವರಿಂದ ಮಹದೇವಯ್ಯ ಎಂಬುವವರು ಮಾರಾಟ ಕರಾರು ಮಾಡಿಸಿಕೊಂಡು ಬೇರೆ ಬೇರೆ ಕಾರಣ ನೀಡಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ಅಂತಿಮವಾಗಿ ನ್ಯಾಯಾ ಲಯವು ಸದರಿ ಸ್ವತ್ತು ಮುಡಾಗೆ ಸೇರಿದ್ದಾಗಿದೆ ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ಅನಧಿಕೃತ ನಿರ್ಮಾಣವನ್ನು ನೆಲಸಮಗೊಳಿಸಿದ ಅಧಿಕಾರಿಗಳು, ಭಾರೀ ಬೆಲೆ ಬಾಳುವ ಆಸ್ತಿಯನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಸೂಚನಾ ಫಲಕವನ್ನು ಅಳವಡಿಸಿದರು. ಆ ಜಾಗದಲ್ಲಿ 50×80 ಅಡಿ ಅಳತೆಯ 11 ಹಾಗೂ 40×60 ಅಡಿ ಅಳತೆಯ 36 ನಿವೇಶನಗಳನ್ನು ರಚಿಸಲು ಮುಡಾ ಉದ್ದೇಶಿಸಿ ನಕ್ಷೆ ತಯಾರಿಸಿತ್ತು. ಆ ಪ್ರಕಾರ ಅದರ ಮೌಲ್ಯ 100 ಕೋಟಿ ರೂ.ಗಳಾಗಲಿದೆ ಎಂದು ಪ್ರಾಧಿಕಾರದ ಆಯುಕ್ತ ಡಾ. ನಟೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಮೈಸೂರು ನಗರದಾದ್ಯಂತ ಮುಡಾ ಜಾಗ ಒತ್ತುವರಿಯಾಗಿರುವುದನ್ನು ಪತ್ತೆ ಮಾಡಲು ಕಾರ್ಯಾಚರಣೆ ಮುಂದುವರಿದಿದ್ದು, ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಅತಿಕ್ರಮಣ ತೆರವುಗೊಳಿಸಲಾಗುವುದು

ಎಂದು ತಿಳಿಸಿದ್ದಾರೆ. ಇಂದು ನಡೆದ ಒತ್ತುವರಿ ತೆರವು ಕಾರ್ಯಾ ಚರಣೆಗೆ ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಶಂಕರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳಾದ ಮೋಹನ್, ಸತ್ಯನಾರಾಯಣ ಜೋಷಿ, ವಲಯಾಧಿಕಾರಿ ಗಳಾದ ಕೆ.ಆರ್.ಮಹೇಶ್, ರವೀಂದ್ರಕುಮಾರ್, ಕಿರಣ್, ಶಿವಣ್ಣ, ನಾಗೇಶ, ರವಿಶಂಕರ್ ಸೇರಿ ದಂತೆ ಹಲವು ಮುಡಾ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »