ಮೃಗಾಲಯ ಪ್ರಾಧಿಕಾರಕ್ಕೆ 101 ಕೋಟಿ ರೂ. ಅನುದಾನ ಕೋರಿಕೆ
ಮೈಸೂರು

ಮೃಗಾಲಯ ಪ್ರಾಧಿಕಾರಕ್ಕೆ 101 ಕೋಟಿ ರೂ. ಅನುದಾನ ಕೋರಿಕೆ

February 5, 2021

ಮೈಸೂರು, ಫೆ.4(ಪಿಎಂ)- ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ 101 ಕೋಟಿ ರೂ. (10104.38 ಲಕ್ಷ ರೂ.) ಅನುದಾನ ಕಲ್ಪಿಸಿ ಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮನವಿ ಸಲ್ಲಿಸಿದರು.

ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಗುರುವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಎಲ್.ಆರ್.ಮಹದೇವಸ್ವಾಮಿ, ಪ್ರಾಧಿಕಾರದ ಒಟ್ಟು 9 ಮೃಗಾಲಯಗಳ ಖರ್ಚು-ವೆಚ್ಚಕ್ಕೆ 2021-22ರ ಸಾಲಿನಲ್ಲಿ 101 ಕೋಟಿ ರೂ. ಕೊರತೆ ಕಂಡು ಬರುತ್ತಿದೆ. ಹೀಗಾಗಿ ಈ ಕೊರತೆ ಮೊತ್ತವನ್ನು ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಅನುದಾನವಾಗಿ ಕಲ್ಪಿಸಿ ಕೊಡಬೇಕು ಎಂದು ಅಂಕಿ-ಅಂಶ ಒಳ ಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂಬಂಧ ಸಂಕ್ಷಿಪ್ತವಾಗಿ ಮುಖ್ಯ ಮಂತ್ರಿಗಳಿಗೆ ವಿವರ ನೀಡಿದ ಎಲ್.ಆರ್. ಮಹದೇವಸ್ವಾಮಿ, ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮೃಗಾಲಯಗಳಿಗೆ ವೀಕ್ಷಕರ ಕೊರತೆ ಉಂಟಾದ ಹಿನ್ನೆಲೆ ಯಲ್ಲಿ ನಿರೀಕ್ಷಿತ ಆದಾಯ ಪ್ರಾಧಿಕಾರಕ್ಕೆ ಲಭ್ಯವಾಗಿಲ್ಲ. ಈಗಲೂ ಕೋವಿಡ್ ಕಾರ ಣಕ್ಕೆ ವೀಕ್ಷಕರ ಸಂಖ್ಯೆ ಹಿಂದಿನ ಪ್ರಮಾ ಣಕ್ಕೆ ತಲುಪಿಲ್ಲ. ಜೊತೆಗೆ ಗೋ ಮಾಂಸ ನಿಷೇಧದ ಹಿನ್ನೆಲೆಯಲ್ಲಿ ಪ್ರಾಣಿಗಳ ಆಹಾರ ಪೂರೈಕೆ ವೆಚ್ಚ ಹೆಚ್ಚಾಗುತ್ತಿದೆ ಎಂದು ಮಾಹಿತಿ ನೀಡಿದರು. 2021-22ನೇ ಸಾಲಿಗೆ ಮೃಗಾಲಯಗಳ ನಿರ್ವಹಣೆಗೆ ಒಟ್ಟು 118 ಕೋಟಿ ರೂ. (11801.38 ಲಕ್ಷ ರೂ.) ವೆಚ್ಚ ವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 16.97 ಕೋಟಿ ರೂ. (1697. 00 ಲಕ್ಷ ರೂ.) ಮೃಗಾಲಯಗಳಿಂದ ಆದಾಯ ನಿರೀಕ್ಷಿಸಲಾಗಿದೆ. ಇನ್ನು 101 ಕೋಟಿ ರೂ. ಕೊರತೆ ಉಂಟಾಗಲಿದೆ. ಹೀಗಾಗಿ ಇದನ್ನು ಈ ಬಜೆಟ್‍ನಲ್ಲಿ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಎಲ್.ಆರ್. ಮಹದೇವಸ್ವಾಮಿ ಮನವಿ ಮಾಡಿದರು. ಈ ವೇಳೆ ಗುಂಡ್ಲುಪೇಟೆ ಶಾಸಕ ನಿರಂ ಜನ್, ಬಿಜೆಪಿ ಮುಖಂಡ ಡಾ.ಬಾಬು ಹಾಜರಿದ್ದರು.

ಅರಣ್ಯ ಸಚಿವರಿಗೆ ಅಭಿನಂದನೆ: ವಿಧಾನಸೌಧದಲ್ಲಿ ನೂತನ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್.ಮಹದೇವಸ್ವಾಮಿ ಗುರುವಾರ ಸನ್ಮಾ ನಿಸಿ ಅಭಿನಂದಿಸಿದರು. ಈ ಸಂದರ್ಭ ದಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೈಸೂರು ಮೃಗಾಲಯದ ಸಿಇಓ ಅಜಿತ್ ಕುಲಕರ್ಣಿ, ಗುಂಡ್ಲುಪೇಟೆ ಶಾಸಕ ನಿರಂಜನ್, ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಹಾಜರಿದ್ದರು.

 

Translate »