ನಾಳೆಯಿಂದ ಮೈಸೂರಲ್ಲಿ `ಹುನಾರ್ ಹಾತ್’ ಬೃಹತ್ ಮೇಳ
ಮೈಸೂರು

ನಾಳೆಯಿಂದ ಮೈಸೂರಲ್ಲಿ `ಹುನಾರ್ ಹಾತ್’ ಬೃಹತ್ ಮೇಳ

February 5, 2021

ಮೈಸೂರು,ಫೆ.4(ಎಂಕೆ)-ದೇಶದ ಹಲವು ರಾಜ್ಯಗಳ ಸಾಂಪ್ರದಾಯಿಕ ‘ಕರಕುಶಲ, ಪಾಕ ಮತ್ತು ಸಂಸ್ಕøತಿ’ ಪರಿಚಯಿಸುವ 25ನೇ ‘ಹುನಾರ್ ಹಾತ್’ ಮೇಳವನ್ನು ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾ ಲಯ ಮೈಸೂರಿನಲ್ಲಿ ಆಯೋಜಿಸುತ್ತಿದೆ.

ನಗರದ ಮಹಾರಾಜ ಕಾಲೇಜು ಮೈದಾನ ದಲ್ಲಿ ಫೆ.6ರಿಂದ 14ರವರೆಗೆ ಈ ಬೃಹತ್ ವಸ್ತು ಪ್ರದರ್ಶನವಿರಲಿದ್ದು, 25 ರಾಜ್ಯಗಳ ಕುಶಲಕರ್ಮಿಗಳು, ಪಾಕ ಪ್ರವೀಣರು ಭಾಗ ವಹಿಸಲಿದ್ದಾರೆ. ಇಲ್ಲಿನ 125 ಮಳಿಗೆಗಳಲ್ಲಿ 100 ಮಳಿಗೆಗಳನ್ನು ಕುಶಲಕರ್ಮಿಗಳಿಗೆ, 25 ಮಳಿಗೆಗಳಲ್ಲಿ ಖಾದ್ಯ ತಯಾರಿಕೆ ಮತ್ತು ಮಾರಾಟಕ್ಕೆ ನೀಡಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಹಬಾಜ್ ಆಲಿ ಮೈಸೂರಿನಲ್ಲಿ ಗೋಷ್ಠಿಯಲ್ಲಿ ವಿವರಿಸಿದರು.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾ ಲಯದ ಸಾಂಪ್ರದಾಯಿಕ ವ್ಯಾಪಾರ, ಅಭಿ ವೃದ್ಧಿಗಾಗಿ ಕರಕುಶಲ ಕಲೆ ಕೌಶಲ ಮತ್ತು ತರಬೇತಿ ನವೀಕರಣ ಯೋಜನೆಯಡಿ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಶೀರ್ಷಿಕೆ ಯಲ್ಲಿ ಆಯೋಜಿಸಿದ ‘ಹುನಾರ್ ಹಾತ್’ ಮೇಳವನ್ನು ಫೆ.6ರ ಬೆಳಿಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸುವರು. ಅಲ್ಪಸಂಖ್ಯಾತರ ವ್ಯವಹಾರಗಳ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಜ್ಯದ ಯುವ ಸಬಲೀಕರಣ-ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ ಎಂದರು.

‘ಹುನಾರ್ ಹಾತ್’ ಅಲ್ಪಸಂಖ್ಯಾತ ಸಮು ದಾಯಗಳ ಸಾಂಪ್ರದಾಯಿಕ ಕಲೆ, ಕರಕುಶಲ ವಸ್ತುಗಳ ವೈಶಿಷ್ಟ್ಯ, ಪರಂಪರೆ ರಕ್ಷಿಸುವ ಮತ್ತು ಉತ್ತೇಜಿಸುವ ಗುರಿ ಹೊಂದಿದೆ. 2016ರಲ್ಲಿ ದೆಹಲಿಯಿಂದ ಪ್ರಾರಂಭ ಗೊಂಡ ಮೇಳ ವಿವಿಧ ರಾಜ್ಯಗಳ ಬಳಿಕ ಈಗ ಮೈಸೂರಿಗೆ ಬಂದಿದೆ. ‘ಹುನಾರ್ ಹಾತ್’ ಬೆಳ್ಳಿ ಮಹೋತ್ಸವವನ್ನು (25ನೇ ಮೇಳ) ಇಲ್ಲಿ ಆಯೋಜಿಸಿದ್ದೇವೆ. ಮೇಳ ದಲ್ಲಿ ಗುಜರಾತಿನ ಅಪ್ಲಿಕ್, ಅಜ್ರಾಖ್ ಮತ್ತು ಕಾಪರ್ ಬೆಲ್‍ನ ಉತ್ಪನ್ನಗಳು, ಮಧ್ಯಪ್ರದೇಶದ ಬೂಟಿಕ್, ಬಂದೇಜ್, ಚಾಂದೇರಿ, ಅಸ್ಸಾಂನ ಧಕಾಯಿ ಸಿಲ್ಕ್, ಡ್ರೈ ಫ್ಲವರ್ಸ್, ಡಾಲಿಯಾ ಟೋಕ್ರಿ, ಗೋಲ್ಡನ್ ಗ್ರಾಸ್, ಲಡಾಕ್ ಕಲೆ, ಮಣಿ ಪುರದ ನೆಲಹಾಸು, ತೊಗಲಿನ ಉತ್ಪನ್ನ ಗಳು, ಹೈದರಾಬಾದ್ ಮುತ್ತುಗಳು ಸೇರಿ ಹಲವು ರಾಜ್ಯಗಳ ವಿವಿಧ ಬಗೆ ವಸ್ತುಗಳ ಪ್ರದರ್ಶನ-ಮಾರಾಟ ನಡೆಯಲಿದೆ ಎಂದರು.

ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬಹಳ ಆಸಕ್ತಿ ವಹಿಸಿ ಮೇಳ ಆಯೋಜಿಸುತ್ತಿ ದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶÀ ವಿದೆ. ಪ್ರತಿ ಸಂಜೆ ಸಾಂಸ್ಕøತಿಕ ಕಾರ್ಯ ಕ್ರಮಗಳಿರಲಿವೆ. ಥರ್ಮಲ್ ಸ್ಕ್ರಿನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಬಳಕೆಗೆ ಕ್ರಮ ಕೈಗೊಳ್ಳ ಲಾಗುವುದು ಎಂದರು. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಬಿ.ಎನ್.ನಾಗೇಂದ್ರ ಗೋಷ್ಠಿಯಲ್ಲಿದ್ದರು.

 

Translate »