ಮೈಸೂರು ನಗರದಲ್ಲಿ ಈ ಬಾರಿ 110 ಕಿ.ಮೀ. ವಿದ್ಯುತ್ ದೀಪಾಲಂಕಾರ
ಮೈಸೂರು

ಮೈಸೂರು ನಗರದಲ್ಲಿ ಈ ಬಾರಿ 110 ಕಿ.ಮೀ. ವಿದ್ಯುತ್ ದೀಪಾಲಂಕಾರ

August 20, 2022

ಮೈಸೂರು, ಆ. 19(ಆರ್‍ಕೆ)- ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿರುವ ಸರ್ಕಾರ, ಸಾಂಸ್ಕøತಿಕ ನಗರಿ ಮೈಸೂರು ನಗರದಾದ್ಯಂತ ರಸ್ತೆ, ಸರ್ಕಲ್, ಜಂಕ್ಷನ್, ಉದ್ಯಾನವನ ಸೇರಿದಂತೆ 110 ಕಿ.ಮೀ. ವಿದ್ಯುತ್ ದೀಪಾಲಂಕಾರಕ್ಕೆ ತಯಾರಿ ನಡೆಸಿದೆ.
ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಿ, ಇಲ್ಲಿನ ಪ್ರತಿಯೊಂದು ಉದ್ದಿಮೆಯ ಬೆಳವಣಿಗೆಗೆ ದಸರಾ ಮಹೋತ್ಸವವನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತದ (ಚೆಸ್ಕಾಂ) ಅಧಿಕಾರಿ ಗಳು ವಿದ್ಯುದ್ದೀಪಾಲಂಕಾರವನ್ನು ಈ ಬಾರಿ ಅತ್ಯಾ ಕರ್ಷಕವಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ ಕಳೆದ ಎರಡು ವರ್ಷಗಳ ಕಾಲ ಸರಳ ಹಾಗೂ ಸಾಂಪ್ರ ದಾಯಿಕವಾಗಿ ದಸರಾ ಆಚರಿಸಿದಾಗಲೂ, ವಿದ್ಯು ದ್ದೀಪಾಲಂಕಾರವನ್ನು ವಿಶೇಷ ರೀತಿಯಲ್ಲಿ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಚೆಸ್ಕಾಂ ಅಧಿಕಾರಿಗಳು, ಸರ್ಕಾರದ ನಿರ್ದೇಶನದಂತೆ ಈ ಬಾರಿ ಪಶ್ಚಿಮ ಬಂಗಾಳ ರಾಜ್ಯದಿಂದ ವಿಶೇಷವಾದ ಎಲ್‍ಇಡಿ ವಿದ್ಯುತ್ ದೀಪಗಳನ್ನು ತರಿಸಿ ಆಕರ್ಷಕ ದೀಪಾ ಲಂಕಾರಕ್ಕೆ ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ.
ಅರಮನೆ, ಸುತ್ತಲಿನ ರಸ್ತೆ, ಸರ್ಕಲ್, ರಾಜ ಮಾರ್ಗ, ಬನ್ನಿಮಂಟಪದ ಪಂಜಿನ ಕವಾಯತು ಮೈದಾನ, ಮೈಸೂರು-ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಿಂದ ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣ, ಬಿಎನ್ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ, ಇರ್ವಿನ್ ರೋಡ್, ಜೆಎಲ್‍ಬಿ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಕೆಆರ್‍ಎಸ್ ರಸ್ತೆ, ಹುಣಸೂರು ರಸ್ತೆ, ಚಾಮರಾಜ ಜೋಡಿ ರಸ್ತೆ, ಮಹಾತ್ಮಗಾಂಧಿ ರಸ್ತೆ, ಲಲಿತ ಮಹಲ್ ರಸ್ತೆ, ಪ್ರಮುಖ ಸರ್ಕಲ್‍ಗಳಲ್ಲಿ ಹಾಗೂ ಚಾಮುಂಡಿಬೆಟ್ಟದ ಮಾರ್ಗ, ಬೆಟ್ಟದ ಶ್ರೀ ಚಾಮುಂಡೇ ಶ್ವರಿ ದೇವಸ್ಥಾನದ ಆವರಣದಲ್ಲೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲು ಯೋಜನೆ ರೂಪಿಸಲಾಗಿದೆ. ಮೈಸೂರಿನ ಪ್ರಮುಖ ಜಂಕ್ಷನ್ ಗಳಲ್ಲಿ ಪುನೀತ್ ರಾಜ್‍ಕುಮಾರ್ ಪ್ರತಿಕೃತಿ ಸೇರಿ ದಂತೆ ವಿಶಿಷ್ಟ ಆಕೃತಿಗಳಿಗೆ ವಿಶಿಷ್ಟ ರೀತಿಯಲ್ಲಿ ಈ ಬಾರಿ ವಿದ್ಯುದ್ದೀಪಾಲಂಕಾರ ಮಾಡಲಾಗುವುದು ಎಂದು ಸೆಸ್ಕ್ ಪ್ರಧಾನ ವ್ಯವಸ್ಥಾಪಕ (ಖರೀದಿ) ಕೆ.ಎಂ. ಮುನಿ ಗೋಪಾಲರಾಜು ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ 2020ರ ದಸರಾ ಮಹೋ ತ್ಸವದಲ್ಲಿ ಕೇವಲ 50 ಕಿ.ಮೀ. ಹಾಗೂ ಕಳೆದ ವರ್ಷ 100 ಕಿ.ಮೀ. ವ್ಯಾಪ್ತಿಗೆ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ 110 ಕಿ.ಮೀ.ವರೆಗೆ ಪಶ್ಚಿಮ ಬಂಗಾಳ ರಾಜ್ಯದಿಂದ ವಿಶೇಷ ಎಲ್‍ಇಡಿ ಬಲ್ಬ್‍ಗಳನ್ನು ತರಿಸಿ ಮತ್ತಷ್ಟು ವಿನೂತನವಾಗಿ ವಿದ್ಯುತ್ ದೀಪಾಲಂಕಾರ ಮಾಡಲು ಸರ್ಕಾರದ ನಿರ್ದೇಶನದಂತೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು. ಕೊಲ್ಕತ್ತಾದಲ್ಲಿ ನಡೆಯುವ ದುರ್ಗಾ ಪೂಜೆಗೆ ಮಾಡುವ ರೀತಿಯಲ್ಲೇ ಮೈಸೂರು ದಸರಾ ಮಹೋತ್ಸವಕ್ಕೆ ದೀಪಾಲಂಕಾರ ಮಾಡಿ ಕಣ್ಮನ ತಣಿಸುವಂತೆ ಮಾಡಲಾಗುವುದು. ಅದಕ್ಕಾಗಿ ಸದ್ಯದಲ್ಲೇ ಟೆಂಡರ್ ಕರೆಯಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮುನಿಗೋಪಾಲರಾಜು ತಿಳಿಸಿದರು.

Translate »