ಬ್ರಿಟನ್‍ನಿಂದ ಬಂದ 119 ಜನರಿಗೂ ಇಂದು ಪುರಭವನದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ: ಡಿಸಿ
ಮೈಸೂರು

ಬ್ರಿಟನ್‍ನಿಂದ ಬಂದ 119 ಜನರಿಗೂ ಇಂದು ಪುರಭವನದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ: ಡಿಸಿ

December 24, 2020

ಮೈಸೂರು, ಡಿ.23(ವೈಡಿಎಸ್)- ಬ್ರಿಟನ್ ನಲ್ಲಿ ರೂಪಾಂತರಗೊಂಡ ಕೋವಿಡ್ ವೈರಸ್ ಪತ್ತೆಯಾಗಿರುವುದರಿಂದ ಮೈಸೂರು ಜಿಲ್ಲಾಡಳಿತ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳಲು ಮುಂದಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರು ಅವರು, ಡಿ.1ರಿಂದ 20ರವರೆಗೆ 119 ಮಂದಿ, ಡಿ.21ರಂದು 18 ಮಂದಿ ಸೇರಿದಂತೆ ಒಟ್ಟು 137 ಮಂದಿ ಬ್ರಿಟನ್‍ನಿಂದ ಮೈಸೂರಿಗೆ ಬಂದಿದ್ದಾರೆ. ಡಿ.21ರಂದು ಬಂದ 18 ಜನರ ಕೋವಿಡ್ ಪರೀಕ್ಷೆಯಾಗಿದ್ದು, ಎಲ್ಲರದೂ ನೆಗೆಟಿವ್ ವರದಿ ಬಂದಿದೆ. ಡಿ.20ಕ್ಕೂ ಮೊದಲು ಬಂದವರೆಲ್ಲರೂ ಮುನ್ನೆಚ್ಚರಿಕೆ ಕ್ರಮವಾಗಿ ತಪ್ಪದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ ಎಂದರು.

ಬ್ರಿಟನ್‍ನಿಂದ ವಾಪಾಸ್ಸಾದವರ ಕೋವಿಡ್ ಪರೀಕ್ಷೆಗೆ ಡಿ.24ರಂದು ಟೌನ್‍ಹಾಲ್‍ನಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. ಬೆಳಗ್ಗೆ 10ರಿಂದ ಸಂಜೆ 4ರವರೆಗೂ ಪರೀಕ್ಷೆ ನಡೆಸಲಾಗುತ್ತದೆ. ಬ್ರಿಟನ್‍ನಿಂದ ಆಗಮಿ ಸಿದ ಎಲ್ಲರಿಗೂ ವಾರ್ ರೂಂನಿಂದ ಮಾಹಿತಿ ನೀಡಲಾಗಿದೆ ಎಂದರು.

ಅಲ್ಲದೇ, ಕೋವಿಡ್-19 ರೋಗ ಲಕ್ಷಣ ಇರುವವರು ಹಾಗೂ ಬ್ರಿಟನ್‍ನಿಂದ ಬಂದ ವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿ ದವರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳ ಬೇಕಿದೆ ಎಂದರು. ಜಿಪಂ ಸಿಇಓ ಪರ ಮೇಶ್, ಮೈಸೂರು ವೈದ್ಯಕೀಯ ಮಹಾ ವಿದ್ಯಾಲಯದ ಡೀನ್ ಡಾ.ನಂಜರಾಜ್, ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಮರನಾಥ್, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

 

 

Translate »