ಡಾ.ಶಿವರಾಜಪ್ಪನವರ 3 ಪುಸ್ತಕಗಳ ಲೋಕಾರ್ಪಣೆ
ಮೈಸೂರು

ಡಾ.ಶಿವರಾಜಪ್ಪನವರ 3 ಪುಸ್ತಕಗಳ ಲೋಕಾರ್ಪಣೆ

December 25, 2020

ಮೈಸೂರು, ಡಿ.24-ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾರಾ ಪ್ರಕಾಶನಾಲಯ ಸಂಯುಕ್ತಾಶ್ರಯದಲ್ಲಿ ಡಿ.31ರಂದು ಬೆಳಗ್ಗೆ 10.30 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯ ಪ್ರಾಚ್ಯವಿದ್ಯಾ ಸಂಶೋಧನಾ ಲಯ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಅವರು ರಚಿಸಿರುವ `ಸಾಹಿತ್ಯ ಸಂವೇದನೆ, ಸಾಹಿತ್ಯ ವಿಮರ್ಶೆ ಮತ್ತು ಕಲ್ಹಣನ ರಾಜತರಂಗಿಣಿ’ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ವಿಜಯನಗರ 1ನೇ ಹಂತ ದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸ ಲಾಗಿದೆ. ಸಾಹಿತಿ ಪ್ರೊ. ಸಿ.ಪಿ.ಕೃಷ್ಣಕುಮಾರ್ ಪುಸ್ತಕ ಬಿಡುಗಡೆ ಮಾಡುವರು. ಕವಿ ಡಾ.ಜಯಪ್ಪ ಹೊನ್ನಾಳಿ ಪುಸ್ತಕ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಉಪ ಆಯುಕ್ತ ಡಾ.ಪ್ರಕಾಶ್‍ಗೌಡ ಭಾಗವಹಿಸಲಿದ್ದು, ಕೃತಿಕಾರ ಡಾ.ಎಸ್. ಶಿವರಾಜಪ್ಪ, ಪ್ರಕಾಶಕ ಎಂ.ಎನ್.ಶಶಿಕುಮಾರ್ ಉಪಸ್ಥಿತರಿರುವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.

Translate »