ಕುವೆಂಪು ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸಲು ಮೈಸೂರು  ವಿವಿ ಕುಲಪತಿ ಪೆÇ್ರ. ಜಿ.ಹೇಮಂತ್‍ಕುಮಾರ್‍ಗೆ ಮನವಿ
ಮೈಸೂರು

ಕುವೆಂಪು ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸಲು ಮೈಸೂರು  ವಿವಿ ಕುಲಪತಿ ಪೆÇ್ರ. ಜಿ.ಹೇಮಂತ್‍ಕುಮಾರ್‍ಗೆ ಮನವಿ

December 25, 2020

ಮೈಸೂರು, ಡಿ. 24- ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ ನಿಯೋಗ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಅವರನ್ನು ಭೇಟಿ ಮಾಡಿ  ಮಾನಸಗಂಗೋತ್ರಿಯ ದ್ವಾರದಲ್ಲಿ ನಿರ್ಮಿಸಿರುವ ಕುವೆಂಪು ಪ್ರತಿಮೆಗೆ ಮೇಲ್ಛಾವಣಿ ನಿರ್ಮಿಸುವಂತೆ ಮನವಿ ಮಾಡಿತು. ವಿಶ್ವಮಾನವ ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಹಾಕವಿ ಕುವೆಂಪುರವರ ಪುತ್ಥಳಿಯನ್ನು ಅವರ ಕರ್ಮಭೂಮಿ, ಕನಸಿನ ಕೂಸು ಮಾನಸಗಂಗೋತ್ರಿ ಆವರಣದ ಪ್ರಮುಖ ದ್ವಾರದಲ್ಲಿ ನಿರ್ಮಿಸಿದ್ದು, ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಆದರೆ ಕುವೆಂಪು ಅವರ ಪ್ರತಿಮೆಯು ಬಿಸಿಲು, ಮಳೆಗೆ ತೆರೆದುಕೊಂಡಿದ್ದು ಹಕ್ಕಿಪಕ್ಷಿಗಳ ಮಲಮೂತ್ರಗಳು ಪ್ರತಿಮೆಯನ್ನು ವಿರೂಪಗೊಳಿಸುತ್ತಿದೆ. ದಿನಕಳೆದಂತೆ ಪುತ್ಥಳಿ ಕಳೆಗುಂದುವ ಅಪಾಯ ಎದುರಾಗಿದೆ.

ಡಿ.29ರಂದು ಕುವೆಂಪುರವರ ಜನ್ಮ ದಿನಾಚರಣೆ ಇದ್ದು, ಅಷ್ಟರೊಳಗೆ ಪ್ರತಿಮೆ ಮೇಲ್ಛಾ ವಣಿ ನಿರ್ಮಿಸಿ, ಯಾವುದೇ ರೀತಿಯ ಅಪಚಾರವಾಗದಂತೆ ಅದರ ಗೌರವ ಘನತೆಗೆ ಕುಂದು ಬಾರದಂತೆ ಕಾರ್ಯೋನ್ಮುಖರಾಗಿ ಸಮಸ್ತ ಕನ್ನಡಿಗರ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಲಾಯಿತು. ಮನವಿಗೆ ಪೂರಕವಾಗಿ ಸ್ಪಂದಿಸಿದ ಕುಲಪತಿ ಪೆÇ್ರ.ಜಿ.ಹೇಮಂತ್‍ಕುಮಾರ್, ಈ ಸತ್ಕಾರ್ಯವನ್ನು ಆದಷ್ಟು ಬೇಗ ನೆರವೇರಿಸಿ, ಕುವೆಂಪುರವರ ಘನತೆ, ಗೌರವ ಮೇಳೈಸುವಂತೆ ಮಾಡುವುದು ನನ್ನ ಕರ್ತವ್ಯ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಪೆÇ್ರ.ಕೆ.ಎಸ್. ಭಗವಾನ್, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಕ.ಸಾ.ಪ.ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ, ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್, ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಡೈರಿ ವೆಂಕಟೇಶ್, ಸಂಚಾಲಕ ಪ್ರಶಾಂತ್ ಆರ್ಯ ಮತ್ತು ಇನ್ನಿತರರು ಉಪಸ್ಥಿತರಿದ್ದರು.

 

 

Translate »