- 66ನೇ ವನ್ಯಜೀವಿ ಸಪ್ತಾಹ
- 15 ಮಹಿಳೆಯರು, 65 ಪುರುಷರು ಭಾಗಿ
- ಅರಣ್ಯ ಇಲಾಖೆ, ನೆಹರು ಯುವ ಕೇಂದ್ರ, ವಿವಿಧ ಸಂಘಟನೆಗಳ ಆಯೋಜನೆ
ಮೈಸೂರು, ಅ.7(ಪಿಎಂ)- ವನ್ಯಜೀವಿ ಸಂರಕ್ಷಣೆ ಸಂದೇಶ ಸಾರಲು 120 ಕಿ.ಮೀ. ಸೈಕ್ಲೊಥಾನ್ ನಡೆಸಲಾಗಿದೆ.ಮೈಸೂರಿನ ಅರಣ್ಯ ಭವನದಿಂದ ಕಾಕನ ಕೋಟೆ ಸಫಾರಿ ಕೇಂದ್ರದವರೆಗಿನ ಸೈಕಲ್ ರ್ಯಾಲಿಯಲ್ಲಿ 15 ಮಹಿಳೆಯರು, 65 ಪುರು ಷರು ಬುಧವಾರ ಸೈಕಲ್ ಸವಾರಿ ನಡೆಸಿ ದರು. `66ನೇ ವನ್ಯಜೀವಿ ಸಪ್ತಾಹ-2020’ರ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಅರಣ್ಯ ಇಲಾಖೆ, ನೆಹರು ಯುವ ಕೇಂದ್ರ, ಮೈಸೂರು ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು ಡಿಸ್ಟ್ರಿಕ್ಟ್ ಸೈಕ್ಲಿಂಗ್ ಅಸೋಸಿಯೇಷನ್, ರೋಟರಿ ಮೈಸೂರು ಈಸ್ಟ್ ಮತ್ತು ನ್ಯಾಷನಲ್ ಅಡ್ವೆಂ ಚರ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಸೈಕ್ಲಾಥಾನ್ ನಡೆಯಿತು.
ಮೈಸೂರಿನ ಅರಣ್ಯ ಭವನದ ಆವರಣ ದಲ್ಲಿ ಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಹೀರಾಲಾಲ್ ಸೈಕಲ್ ಸವಾರಿಗೆ ಚಾಲನೆ ನೀಡಿದರು. ಡಿಸಿಎಫ್ ಡಿ.ಮಹೇಶ್ ಕುಮಾರ್, ಸೈಕಲ್ ಸವಾರಿ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಮಾಹಿತಿ ನೀಡಿದರು.
ಸೈಕ್ಲೊಥಾನ್‍ಗೆಂದು ಆಗಮಿಸಿದ್ದ ಆಸಕ್ತ ರಿಗೆ ಮೊದಲಿಗೆ ಆರೋಗ್ಯ ತಪಾಸಣೆ ನಡೆಸ ಲಾಯಿತು. ಅರಣ್ಯ ಭವನ, ರೈಲ್ವೆ ಪ್ಯಾರಲಲ್ ರಸ್ತೆ, ಅಂಡರ್‍ಬ್ರಿಡ್ಜ್, ಎನ್‍ಐಇ ಹಿಂಬದಿ ರಸ್ತೆ, ಮೈಸೂರು-ಮಾನಂದವಾಡಿ ರಸ್ತೆ, ರಿಂಗ್ ರೋಡ್ ಜಂಕ್ಷನ್, ಜಯಪುರ, ಹಂಪಾ ಪುರ, ಹ್ಯಾಂಡ್‍ಪೋಸ್ಟ್, ಅಂತರಸಂತೆ ಮಾರ್ಗವಾಗಿ ಸೈಕಲ್ ಸವಾರಿ ಸಾಗಿತು. ಮಧ್ಯಾಹ್ನದ ವೇಳೆಗೆ ಕಾಕನಕೋಟೆಯಲ್ಲಿ ಸಫಾರಿ ನಡೆಸಿ, `ವನ್ಯಜೀವಿ’ ಬಗ್ಗೆ ಉಪನ್ಯಾಸ ನೀಡಲಾಯಿತು. ಬಳಿಕ ಸೈಕ್ಲೊಥಾನ್‍ನಲ್ಲಿ ಭಾಗಿಯಾದವರಿಗೆ ಪ್ರಮಾಣಪತ್ರ ವಿತರಿಸ ಲಾಯಿತು. ಅಲ್ಲಿಂದ ಸಂಜೆ 4ರ ವೇಳೆಗೆ ವಾಪಸ್ ಹೊರಟ ಸೈಕ್ಲೊಥಾನ್, ಸಂಜೆ 7ರ ವೇಳೆಗೆ ಮೈಸೂರಿಗೆ ಮರಳಿತು.
ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಅತುಲ್ ನಿಕ್ಕಂ, ಮೈಸೂರು ವಲಯದ ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಸಿ.ಪ್ರಶಾಂತ್ ಕುಮಾರ್, ಎಸಿಎಫ್ ಎಸ್.ಪಿ.ಮಹದೇವ್, ಪೆÇ್ರಬೆಷನರಿ ಎಸಿಎಫ್ ಅನುಷಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮ ನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಮತ್ತಿತ ರರು ಕಾರ್ಯಕ್ರಮದಲ್ಲಿದ್ದರು.