ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲು, ಪೊಲೀಸರಿಂದ ಆರೋಪಿ ವಿಚಾರಣೆ
ಮೈಸೂರು, ಅ. 7(ಆರ್‍ಕೆ)- ನಿವೇಶನದ ನಕಲಿ ದಾಖಲಾತಿ ನೀಡಿ ಬ್ಯಾಂಕಿನಿಂದ 96 ಲಕ್ಷÀ ರೂ. ಸಾಲ ಪಡೆದು ಮೈಸೂ ರಿನ ಕೆ.ಆರ್. ಸರ್ಕಲ್‍ನಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಸದಸ್ಯರೊ ಬ್ಬರು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಂಕಿನ ಸದಸ್ಯರಾದ ಕುವೆಂಪುನಗರದ ನೃಪತುಂಗ ರಸ್ತೆ, 1ನೇ ಕ್ರಾಸ್ ನಿವಾಸಿ ವೆಂಕಟಪ್ಪ ಅವರ ಮಗ ಜಿ.ವಿ. ಬಾಲು, ನಿವೇಶನದ ನಕಲಿ ದಾಖಲೆಗಳನ್ನು ಒತ್ತೆ ಇಟ್ಟು 96 ಲಕ್ಷ ರೂ. ಸಾಲ ಪಡೆದು ವಂಚಿಸಿದವರು. ಶ್ರೀ ಕನ್ಯಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವ ಸ್ಥಾಪಕರಾದ ಮೈಸೂರಿನ ವಿಶ್ವೇಶ್ವರನಗರದ ಸಿಐಟಿಬಿ ಕಾಲೋನಿ 4ನೇ ಕ್ರಾಸ್ ನಿವಾಸಿ ಕೆ.ಎನ್. ನಟರಾಜು ಅವರು ನೀಡಿದ ಲಿಖಿತ ದೂರಿನನ್ವಯ ಅಕ್ಟೋಬರ್ 1ರಂದು ಐಪಿಸಿ ಸೆಕ್ಷನ್ 465, 467, 470, 471 ಮತ್ತು 420 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ತನಿಖೆ ನಡೆಸುತ್ತಿದ್ದಾರೆ.
ಸರ್ಕಾರದ ಕಾವೇರಿ ಆನ್‍ಲೈನ್ ಆ್ಯಪ್‍ನಲ್ಲಿ ಪರಿಶೀಲಿಸುವ ಸಂದರ್ಭ ಬ್ಯಾಂಕಿನ ಸದಸ್ಯ ಜಿ.ವಿ. ಬಾಲು ಎಂಬುವರು 2020ರ ಜುಲೈ 3ರಂದು 96 ಲಕ್ಷ ರೂ. ಸಾಲ ಪಡೆಯು ವಾಗ ಬ್ಯಾಂಕಿನಿಂದ ನೀಡಿದ್ದ ಮಾರ್ಟ್‍ಗೇಜ್ ಡೀಡ್ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬ್ಯಾಂಕಿನ ಹೆಸರಿಗೆ ನೋಂದಣಿ ಮಾಡಿಸುವ ಬದಲಾಗಿ ನಕಲಿ ನಮೂನೆ, ಸೀಲು, ಸಹಿಗಳನ್ನು ಬಳಸಿ ದಾಖಲೆಗಳು ನೋಂದಣಿ ಆಗಿರುವ ಹಾಗೆ ನಮೂದಿಸಿ 96 ಲಕ್ಷ ರೂ. ಸಾಲದ ಹಣ ಬಿಡುಗಡೆ ಮಾಡಿಸಿ ಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಪರಿಶೀಲಿಸಿದಾಗ ಬ್ಯಾಂಕಿಗೆ ಸಲ್ಲಿಸಿರುವ ದಾಖಲೆಗಳಿಗೂ, ಮಾರ್ಟ್‍ಗೇಜ್ ಮಾಡುವಾಗ ನೀಡಿರುವ ದಾಖಲೆಗಳಿಗೂ ವ್ಯತ್ಯಾಸ ಕಂಡುಬಂದಿದ್ದು, ಬ್ಯಾಂಕ್ ಅಧಿಕಾರಿಗಳು ಬಾಲು ಅವರನ್ನು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ನಟರಾಜು ದೂರಿನಲ್ಲಿ ತಿಳಿಸಿದ್ದಾರೆ.
ಮೈಸೂರಿನ ನಾಚನಹಳ್ಳಿ ಪಾಳ್ಯ ಇ-ಬ್ಲಾಕ್‍ನ 586ನೇ ಸಂಖ್ಯೆಯ ನಿವೇಶನವನ್ನು ಒತ್ತೆ ಇರಿಸಿ ಬ್ಯಾಂಕಿನಿಂದ ಸಾಲ ಪಡೆಯಲು ಬಾಲು ಅವರು ನಕಲಿ ದಾಖಲೆ ಸೃಷಿಸಿ ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ಆಪಾದಿಸಿ ದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತ ತಾನು ನೀಡಿರುವ ದಾಖಲೆ ಗಳು ನಕಲಿಯಲ್ಲ, ಎಲ್ಲವೂ ಮೂಲ ದಾಖಲೆಗಳೇ ಎಂದು ಹೇಳುತ್ತಿದ್ದಾರೆಯಾದ್ದರಿಂದ ದಾಖಲೆಗಳ ನೈಜತೆ ತಿಳಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಪ್ರಸನ್ನಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.