ಮಾ.28ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ 12,271 ವಿದ್ಯಾರ್ಥಿಗಳು
ಮೈಸೂರು

ಮಾ.28ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ 12,271 ವಿದ್ಯಾರ್ಥಿಗಳು

March 25, 2022

ಜಿಲ್ಲೆಯಲ್ಲಿ ಈ ವರ್ಷ 6,304 ವಿದ್ಯಾರ್ಥಿ ಗಳು ಹಾಗೂ 5,967 ವಿದ್ಯಾರ್ಥಿನಿಯರು ಸೇರಿ ಒಟ್ಟು 12,271 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 63 ಪರೀಕ್ಷಾ ಕೇಂದ್ರಗಳನ್ನು ತೆರೆಯ ಲಾಗಿದ್ದು, ಈ ಪೈಕಿ 5 ಕೇಂದ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ಕಾಯ್ದಿರಿಸಲಾಗಿದೆ ಎಂದು ಡಿಡಿಪಿಐ ಎಸ್.ಎನ್.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಈ ವರ್ಷ 11,548 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿ ದ್ದಾರೆ. ಖಾಸಗಿಯಾಗಿ 640 ವಿದ್ಯಾರ್ಥಿ ಗಳು, ಪುನರಾವರ್ತಿತ ವಿದ್ಯಾರ್ಥಿಗಳು 46, ಖಾಸಗಿಯಾಗಿ ಪುನರಾವರ್ತಿತರು 12, ಹಳೆ ವಿದ್ಯಾರ್ಥಿಗಳು 25 ಸೇರಿದಂತೆ ಒಟ್ಟು 12,271 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿ ಇರುವ ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಜೆಎಸ್‍ಎಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಖಾಸಗಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

ಚಾಮರಾಜನಗರ ತಾಲೂಕು: ತಾಲೂಕಿ ನಲ್ಲಿ 1,894 ವಿದ್ಯಾರ್ಥಿಗಳು, 1,903 ವಿದ್ಯಾರ್ಥಿನಿ ಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವ ರೊಂದಿಗೆ ಖಾಸಗಿ 176 ವಿದ್ಯಾರ್ಥಿಗಳು, 80 ವಿದ್ಯಾರ್ಥಿನಿಯರು ಹಾಗೂ ಪುನರಾ ವರ್ತಿತರರು 28 ಮಂದಿ, ಖಾಸಗಿ ಪುನರಾವ ರ್ತಿತರರು 3 ಮಂದಿ, ಹಳೆ ವಿದ್ಯಾರ್ಥಿಗಳು 14 ಮಂದಿ ಸೇರಿ ಒಟ್ಟು 4,098 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಗುಂಡ್ಲುಪೇಟೆ ತಾಲೂಕು: ತಾಲೂಕಿನಲ್ಲಿ 1,211 ವಿದ್ಯಾರ್ಥಿಗಳು, 1,187 ವಿದ್ಯಾರ್ಥಿನಿ ಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವರೊಂದಿಗೆ ಖಾಸಗಿ 142 ವಿದ್ಯಾರ್ಥಿ ಗಳು, 49 ವಿದ್ಯಾರ್ಥಿನಿಯರು ಹಾಗೂ ಪುನರಾವರ್ತಿತರರು 17 ಮಂದಿ, ಖಾಸಗಿ ಪುನರಾವರ್ತಿತರರು 4 ಮಂದಿ, ಹಳೆ ವಿದ್ಯಾರ್ಥಿಗಳು 7 ಮಂದಿ ಸೇರಿ ಒಟ್ಟು 2,617 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಹನೂರು ತಾಲೂಕು: ತಾಲೂಕಿನಲ್ಲಿ 1,172 ವಿದ್ಯಾರ್ಥಿಗಳು, 1,050 ವಿದ್ಯಾರ್ಥಿನಿ ಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವ ರೊಂದಿಗೆ ಖಾಸಗಿ 41 ವಿದ್ಯಾರ್ಥಿಗಳು, 25 ವಿದ್ಯಾರ್ಥಿನಿಯರು ಹಾಗೂ ಪುನರಾ ವರ್ತಿತರರು ಓರ್ವ ವಿದ್ಯಾರ್ಥಿನಿ, ಖಾಸಗಿ ಪುನರಾವರ್ತಿತರರು ಇಬ್ಬರು, ಹಳೆ ವಿದ್ಯಾರ್ಥಿ ಗಳು ಇಬ್ಬರು ಸೇರಿ ಒಟ್ಟು 2,293 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕೊಳ್ಳೇಗಾಲ ತಾಲೂಕು: ತಾಲೂಕಿನಲ್ಲಿ 1,063 ವಿದ್ಯಾರ್ಥಿಗಳು, 1,102 ವಿದ್ಯಾರ್ಥಿನಿ ಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವ ರೊಂದಿಗೆ ಖಾಸಗಿ 42 ವಿದ್ಯಾರ್ಥಿಗಳು, 20 ವಿದ್ಯಾರ್ಥಿನಿಯರು, ಖಾಸಗಿ ಪುನರಾ ವರ್ತಿತರರು 3 ವಿದ್ಯಾರ್ಥಿನಿಯರು, ಹಳೆ ವಿದ್ಯಾರ್ಥಿಗಳು ಇಬ್ಬರು ಸೇರಿ ಒಟ್ಟು 2,232 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಯಳಂದೂರು ತಾಲೂಕು: ತಾಲೂಕಿನಲ್ಲಿ 478 ವಿದ್ಯಾರ್ಥಿಗಳು, 488 ವಿದ್ಯಾರ್ಥಿನಿ ಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವ ರೊಂದಿಗೆ ಖಾಸಗಿ 45 ವಿದ್ಯಾರ್ಥಿಗಳು, 20 ವಿದ್ಯಾರ್ಥಿನಿಯರು ಸೇರಿ ಒಟ್ಟು 1,031 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಕೇಂದ್ರಗಳ ವಿವರ: ಜಿಲ್ಲೆಯಲ್ಲಿ ಒಟ್ಟು 63 ಪರೀಕ್ಷಾ ಕೇಂದ್ರಗಳನ್ನು ತೆರೆಯ ಲಾಗಿದ್ದು, ಈ ಪೈಕಿ ಚಾಮರಾಜನಗರ ತಾಲೂಕಿನಲ್ಲಿ 20 ಸಾಮಾನ್ಯ ಕೇಂದ್ರ, 2 ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ಹಾಗೂ ಒಂದು ಕಾಯ್ದಿರಿಸಿದ ಕೇಂದ್ರ ಸೇರಿ 23 ಕೇಂದ್ರ ತೆರೆಯಲಾಗಿದೆ. ಗುಂಡ್ಲು ಪೇಟೆಯಲ್ಲಿ 11 ಸಾಮಾನ್ಯ ಕೇಂದ್ರ ಹಾಗೂ ಒಂದು ಕಾಯ್ದಿರಿಸಿದ ಕೇಂದ್ರ ಸೇರಿ 12 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಹನೂರಿ ನಲ್ಲಿ 9 ಸಾಮಾನ್ಯ ಕೇಂದ್ರ ಹಾಗೂ ಒಂದು ಕಾಯ್ದಿರಿಸಿದ ಕೇಂದ್ರ ಸೇರಿ ಒಟ್ಟು 10 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಕೊಳ್ಳೇಗಾಲದಲ್ಲಿ 12 ಸಾಮಾನ್ಯ ಕೇಂದ್ರ ಹಾಗೂ ಒಂದು ಕಾಯ್ದಿರಿಸಿದ ಕೇಂದ್ರ ಸೇರಿ ಒಟ್ಟು 13 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಯಳಂದೂರಿನಲ್ಲಿ 4 ಸಾಮಾನ್ಯ ಕೇಂದ್ರ ಹಾಗೂ ಒಂದು ಕಾಯ್ದಿರಿಸಿದ ಕೇಂದ್ರ ಸೇರಿ ಒಟ್ಟು 5 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

Translate »