ಕ್ಷಯರೋಗ ಮುಕ್ತ ಗ್ರಾಪಂ ಮಾಡಲು ಕ್ರಮ
ಮಂಡ್ಯ

ಕ್ಷಯರೋಗ ಮುಕ್ತ ಗ್ರಾಪಂ ಮಾಡಲು ಕ್ರಮ

March 25, 2022

ಭಾರತೀನಗರ, ಮಾ.24(ಅ.ಸತೀಶ್)- ಕ್ಷಯರೋಗ ಮುಕ್ತ ಗ್ರಾಮಪಂಚಾಯಿತಿಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ವಕ್ರತುಂಡ ವೆಂಕಟೇಶ್ ತಿಳಿಸಿದರು.

ಇಲ್ಲಿಗೆ ಸಮೀಪದ ಮಣಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ, ಆರೋಗ್ಯ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕ್ಷಯ ರೋಗ ಮುಕ್ತವಾಗಿಸಲು ಆರೋಗ್ಯ ಅಧಿಕಾರಿ ಗಳೊಂದಿಗೆ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ರೂಪಿಸ ಲಾಗುತ್ತಿದೆ. ಕೆಮ್ಮು ಇರುವಂತಹ ಪ್ರತಿಯೊಬ್ಬರು ಆರೋಗ್ಯಾ ಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಸುಧಾ ಮಾತ ನಾಡಿ, ಎರಡು ವಾರಕ್ಕೂ ಹೆಚ್ಚು ಕೆಮ್ಮು ಇರುವ ಮತ್ತು ರಾತ್ರಿ ವೇಳೆ ಹೆಚ್ಚು ಬೆವರು ಬರುವಂತಹ ವ್ಯಕ್ತಿಗ ಳನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲಾಗಿದೆ. ಕ್ಷಯರೋಗ ಕಂಡುಬಂದಲ್ಲಿ ಉಚಿತವಾಗಿ ಮಾತ್ರೆಗಳನ್ನು ವಿತರಿಸಿ ಅವರಿಗೆ ಪೌಷ್ಟಿಕ ಆಹಾರಕ್ಕಾಗಿ ನಿಶ್ಚಯ ಯೋಜನೆಯಡಿ 500 ರೂ. ಗಳನ್ನು ಧನಸಹಾಯ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಆಡಳಿತ ಮಂಡಳಿ ಕ್ರಮಕೈಗೊಂಡಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಲ್.ಕೃಷ್ಣೇಗೌಡ ಮಾತನಾಡಿ, ವಿಶ್ವಕ್ಷಯ ರೋಗ ದಿನವನ್ನು ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ. ಟಿಬಿ ಮತ್ತು ಕೋವಿಡ್ ಉಸಿರಾಟ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಕೆಮ್ಮು ಮತ್ತು ಸೀನುವುದರ ಮೂಲಕ ಹರಡುತ್ತದೆ. ಕೋವಿಡ್ ಮತ್ತು ಟಿಬಿ ಕಾಯಿಲೆ ಒಂದೇ ರೀತಿಯ ಲಕ್ಷಣಗಳಾದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರ ಹೊಂದಿರುತ್ತದೆ ಎಂದರು.ಅಪೌಷ್ಟಿಕತೆ, ಸಕ್ಕರೆ ಕಾಯಿಲೆ, ಎಚ್‍ಐವಿ ಮತ್ತು ತಂಬಾಕು ಸೇವನೆ ಮಾಡುವ ಜನರಿಗೆ ಕೋವಿಡ್ ಕಾಯಿಲೆ ಮತ್ತು ಟಿಬಿ ಹರಡುವುದರಿಂದ ರೋಗದ ಪರಿಣಾಮ ಹೆಚ್ಚು ಹಾನಿಕಾರವಾಗಬಹುದು ಎಂದರು. ಇದೇ ವೇಳೆ ಗ್ರಾ.ಪಂ ಸದಸ್ಯರಾದ ಮಣಿಗೆರೆ ರಾಮಚಂದ್ರೇ ಗೌಡ, ಸೌಭಾಗ್ಯ, ತಿಬ್ಬಯ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಂಜಮಣಿ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ತಾಲೂಕು ಸಂಯೋಜಕ ಪ್ರಭುಸ್ವಾಮಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ-ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Translate »