ಜುಲೈ ಅಂತ್ಯಕ್ಕೆ ಭಾಗಮಂಡಲ ಫ್ಲೈಓವರ್ ಕಾಮಗಾರಿ ಪೂರ್ಣ
ಕೊಡಗು

ಜುಲೈ ಅಂತ್ಯಕ್ಕೆ ಭಾಗಮಂಡಲ ಫ್ಲೈಓವರ್ ಕಾಮಗಾರಿ ಪೂರ್ಣ

March 25, 2022

ಮಡಿಕೇರಿ, ಮಾ.24- ಕೊಡಗಿನ ಭಾಗಮಂಡಲದಲ್ಲಿ ನಿರ್ಮಾಣದ ಹಂತ ದಲ್ಲಿರುವ ಫ್ಲೈ ಓವರ್ ಅನ್ನು 2022ರ ಜುಲೈ ಅಂತ್ಯಕ್ಕೆ ಪೂರ್ಣ ಗೊಳಿಸಲಾ ಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಭಾಗಮಂಡಲದಲ್ಲಿ ನಿರ್ಮಾಣ ವಾಗುತ್ತಿರುವ ಫ್ಲೈ ಓವರ್ ಕಾಮಗಾರಿಯ ಪ್ರಗತಿ, ಅನುದಾನ, ಕಾಮಗಾರಿ ಪೂರ್ಣ ವಾಗುವ ಕಾಲಮಿತಿಗಳ ವಿವರ ಕುರಿತು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರಕಾರವನ್ನು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ಕಾವೇರಿ ನೀರಾವರಿ ನಿಗಮದ ಮೂಲಕ ಫ್ಲೈ ಓವರ್ ಕಾಮಗಾರಿಯನ್ನು 4-10-2018ರಂದು 30.61 ಕೋಟಿ ರೂ.ಗಳ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಈ ಸಂದರ್ಭ 18 ತಿಂಗಳ ಕಾಲಾವಧಿ ನಿಗದಿಪಡಿಸಿ, 3-4-2020ರೊಳಗೆ ಪೂರ್ಣ ಗೊಳಿಸಬೇಕಿತ್ತು. ಆದರೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಭೂ ಸ್ವಾಧೀನ, ವಿದ್ಯುತ್ ಕಂಬಗಳ ಸ್ಥಳಾಂತರ, ಅರಣ್ಯ ಇಲಾಖೆ ಯಿಂದ ಗಿಡ ಮರಗಳ ತೆರವು ಕಾರ್ಯಕ್ಕೆ ವಿಳಂಬವಾಗಿರುವುದು, 2018, 2018ರ ಸಾಲಿನಲ್ಲಿ ಹೆಚ್ಚಿನ ಮಳೆ ಮತ್ತು 2020ರ ಕೋವಿಡ್ ಲಾಕ್‍ಡೌನ್ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದ್ದು, ಜುಲೈ ಅಂತ್ಯಕ್ಕೆ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಈಗಾಗಲೇ 15 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಫೆ. ಅಂತ್ಯಕ್ಕೆ ಒಟ್ಟು 13.87 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 16.74 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇರುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ವಿವರಿಸಿದ್ದಾರೆ.

Translate »