12ನೇ ಶತಮಾನ ಕರ್ನಾಟಕದ ಸಂಕ್ರಮಣ ಕಾಲ
ಮೈಸೂರು

12ನೇ ಶತಮಾನ ಕರ್ನಾಟಕದ ಸಂಕ್ರಮಣ ಕಾಲ

March 10, 2021

ಮೈಸೂರು,ಮಾ.9(ಆರ್‍ಕೆಬಿ)-12ನೇ ಶತ ಮಾನ ಕರ್ನಾಟಕದ ಸಂಕ್ರಮಣ ಕಾಲ ಎಂದು ಮೈಸೂರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿ.ಮಾಲತಿ ತಿಳಿಸಿದರು.

ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಮುಕ್ತ ಗಂಗೋತ್ರಿ ಅಕ್ಕಮಹಾದೇವಿ ಅಧ್ಯ ಯನ ಮತ್ತು ಸಂಶೋಧನಾ ಪೀಠ. ಶರಣು ವಿಶ್ವವಚನ ಫೌಂಡೇಷನ್ ಸಹಯೋಗದಲ್ಲಿ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಮತ್ತು ಮಹಿಳಾ ದಿನಾ ಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳಾ ದಿನಾಚರಣೆ ಯಂದು ಅಕ್ಕಮಹಾದೇವಿಯನ್ನು ಸ್ಮರಿಸಲೇ ಬೇಕು. ಆಕೆ ರಾಜನನ್ನು ಎದುರಿಸಿ ಆಧ್ಯಾ ತ್ಮಿಕತೆಯೆಡೆಗೆ ಒಲವಿಟ್ಟುಕೊಂಡು ಯಾವುದೇ ಸ್ತುತಿಗೆ ಹಿಗ್ಗದೆ, ನಿಂದನೆಗಳಿಗೆ ಕುಗ್ಗದೆ ಎಲ್ಲಾ ಕಾಲದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಆದರ್ಶ ಮತ್ತು ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಮಹಿಳಾ ದಿನಾ ಚರಣೆ ಎಂದರೆ ನಮಗೆ ನೆನಪಾಗುವುದು ಅಕ್ಕಮಹಾದೇವಿ. ಹೆಣ್ಣನ್ನು ಗೌರವಯುತ ವಾಗಿ ಕಂಡ ಶರಣರು ಕಂದಾಚಾರ, ಮೂಢ ನಂಬಿಕೆಗಳನ್ನು ಆಚರಿಸದಂತೆ ಕ್ರಾಂತಿ ಕಾರಿ ನಡೆಗಳ ಮೂಲಕ ವಚನದಂತೆಯೇ ಬದುಕಿದರು. ನಂತರ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನತೆ ಒದಗಿಸುವ ಮೂಲಕ ಮಹಿಳೆ ಯರು ಎಲ್ಲಾ ಕ್ಷೇತ್ರಗಳಲ್ಲೂ ಸಬಲರಾಗಲು ಕಾರಣರಾದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರಾಮುವಿ ಕುಲ ಸಚಿವ ಪ್ರೊ.ಲಿಂಗರಾಜ ಗಾಂಧಿ, ಜಗತ್ತಿ ನಲ್ಲಿ ಅಂಧಕಾರ ಕವಿದಿದ್ದಾಗ ವಚನ ಚಳು ವಳಿ ವಚನಗಳ ಮೂಲಕ ಬೆಳಕು ನೀಡಿತು. ಮಹಿಳೆ ಯಾವುದೇ ಸಮಾಜದ, ದೇಶದ, ಸಂಸಾರದ ಕೇಂದ್ರ ಬಿಂದು. ಮಹಿಳೆ ಮತ್ತು ಪುರುಷ ಎಂಬ ಭೇದವಿಲ್ಲದಿದ್ದಾಗ ಮಾತ್ರ ಸಾಮರಸ್ಯದ ಬದುಕು ಸಾಧ್ಯ ಎಂದರು.

ಅಕ್ಕಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಪೀಠದ ಸಂಯೋಜಕಿ ಹೆಚ್. ರಾಜೇಶ್ವರಿ, ಅಕ್ಕಮಹಾದೇವಿಯ ಬಗ್ಗೆ ಪ್ರಚಾರೋಪನ್ಯಾಸ ನೀಡಿದ ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕ ಡಾ. ವಚನ ಕುಮಾರಸ್ವಾಮಿ ಅಕ್ಕಮಹಾದೇವಿ ಕುರಿತು ಪ್ರಚಾರೋಪನ್ಯಾಸ ನೀಡಿದರು. ಡೀನ್(ಶೈಕಣಿಕ) ಅಶೋಕ್ ಕಾಂಬ್ಳೆ, ಡಾ. ಷಣ್ಮುಖ, ಡಾ.ಶರಣಮ್ಮ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರ ಸ್ವಾಮಿ, ಅಂತಾರಾಷ್ಟ್ರೀಯ ಅಂತರ್ಜಾಲ ಸಂಚಾಲಕ ಪಿ.ವಿ.ರುದ್ರೇಶ್, ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಉಪಾಧ್ಯಕ್ಷ ಉಮಾ ಪತಿ, ಕಾರ್ಯದರ್ಶಿ ಅನಿತಾ ನಾಗರಾಜು, ಸಂಗೀತ ಶಿಕ್ಷಕ ಕಿರಣ್, ಉಷಾ ನಾಗೇಶ್, ಅನ್ನಪೂರ್ಣ, ಪಾರ್ವತಮ್ಮ, ಮೀನಾಕ್ಷಿ, ಇಂದ್ರಾಣಿ, ಲತಾ ಉಮಾಪತಿ ಇದ್ದರು.

Translate »