ಮೈಸೂರಲ್ಲಿ ಏ.4-11ವರೆಗೆ ಕಬಡ್ಡಿ ಪಂದ್ಯಾವಳಿ
ಮೈಸೂರು

ಮೈಸೂರಲ್ಲಿ ಏ.4-11ವರೆಗೆ ಕಬಡ್ಡಿ ಪಂದ್ಯಾವಳಿ

March 10, 2021

ಮೈಸೂರು, ಮಾ.9(ಎಂಟಿವೈ)- ಮೈಸೂ ರಿನ ಎನ್.ಆರ್.ಮೊಹಲ್ಲಾದ ಟಿಎನ್‍ಎನ್ ಆದರ್ಶ ವಿದ್ಯಾರ್ಥಿನಿಲಯದ ಆಟದ ಮೈದಾನ ದಲ್ಲಿ ಏ.4ರಿಂದ 11ರವರೆಗೆ `ಕಬಡ್ಡಿ ಪಂದ್ಯಾ ವಳಿ-2021’ ಆಯೋಜಿಸಲಾಗಿದೆ. ಆಸಕ್ತ ತಂಡಗಳು ಮಾ.10ರಿಂದ 31ರವರೆಗೆ ಹೆಸರು ನೋಂದಾಯಿಸಿಕೊಳ್ಳ ಬಹುದು ಎಂದು ಕನ್ನಡ ಸೇನೆ ಕರ್ನಾಟಕ ಅಧ್ಯಕ್ಷ ಆರ್.ಸಿದ್ದ ಲಿಂಗಮೂರ್ತಿ ಮೈಸೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಕನ್ನಡ ಸೇನೆ ಕರ್ನಾ ಟಕದ ಹುಣಸೂರು ತಾಲೂಕು ಘಟಕ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ, ಹರೀಶ್ ಕುಮಾರ್ ಮತ್ತು ಯಶ್ವಂತ್ ಯುವ ಬಳಗದ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 20 ಸಾವಿರ ರೂ., ದ್ವಿತೀಯ 15 ಸಾವಿರ ರೂ., ತೃತೀಯ 10 ಸಾವಿರ ರೂ. ಮತ್ತು 4ನೇ ಬಹುಮಾನವಾಗಿ 5 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ ನೀಡ ಲಾಗುವುದು. ಪ್ರವೇಶ ಶುಲ್ಕ 1 ಸಾವಿರ ರೂ. ಎಂದರು. ನಾಕೌಟ್ ಮಾದರಿ ಪಂದ್ಯಾವಳಿ ನಡೆಲಿದೆ. ಒಂದು ತಂಡದಲ್ಲಿ ಒಂದೇ ಊರಿನ ಆಟಗಾರರಾಗಿ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮೊ. 81053 54516 ಮತ್ತು 85539 28785 ಸಂಪರ್ಕಿಸಬಹುದು ಎಂದರು.
ಪಂದ್ಯಾವಳಿ ಖಜಾಂಚಿ ಮೋಹನ್, ಕಬಡ್ಡಿ ತರಬೇತುದಾರ ಪ್ರಸಾದ್ ಉರುಫ್ ಪಾಪಣ್ಣ, ಬಿಜೆಪಿ ಮುಖಂಡ ಸಿ.ಟಿ.ವೆಂಕಟೇಶ್, ಸಂಚಾಲಕ ಹರೀಶ್‍ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Translate »