ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಕುಶಾಲನಗರದ 13 ಮಂದಿ ಭಾಗಿ ಶಂಕೆ
ಕೊಡಗು

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಕುಶಾಲನಗರದ 13 ಮಂದಿ ಭಾಗಿ ಶಂಕೆ

April 2, 2020

ಮಡಿಕೇರಿ, ಏ.1- ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಮಂದಿರದಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಕೊಡಗಿನ 13 ಮಂದಿ ಭಾಗಿಯಾಗಿರುವ ಮಾಹಿತಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಲಭಿಸಿದ್ದು, ಪಾಲ್ಗೊಂಡವರು ಕುಶಾಲನಗರ ವ್ಯಾಪ್ತಿಯ ನಿವಾಸಿಗಳೆಂದು ತಿಳಿದು ಬಂದಿದೆ.

ಪ್ರಾರ್ಥನಾ ಸಭೆಗೆ ತೆರಳಿದ್ದ 5 ಮಂದಿ ದೆಹಲಿಯಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ. ಇನ್ನೂ 5 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಉಳಿದ 1 ಪ್ರಕರಣದ ವ್ಯಕ್ತಿಯು ಕೊಡಗು ಜಿಲ್ಲೆಯಲ್ಲಿ ವಾಸವಿದ್ದು, ಅವರ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿರುತ್ತದೆ. ಈ 1 ಪ್ರಕರಣವೂ ಒಳಗೊಂಡಂತೆ ಈಗ ಪತ್ತೆ ಹಚ್ಚಿರುವ 2 ಪ್ರಕರಣಗಳನ್ನು ಸೇರಿಸಿ ಒಟ್ಟು 3 ವ್ಯಕ್ತಿಗಳನ್ನು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ಸಮೂಹ ಸಂಪರ್ಕ ತಡೆ ಗೃಹಕ್ಕೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Translate »