ಜೂ.4ರಂದು ನಾಲ್ವಡಿ 134ನೇ ಜಯಂತಿ ಆಚರಣೆ
ಮೈಸೂರು

ಜೂ.4ರಂದು ನಾಲ್ವಡಿ 134ನೇ ಜಯಂತಿ ಆಚರಣೆ

May 30, 2018

ಮೈಸೂರು: ಮೈಸೂರಿನ ಅರಸು ಮಂಡಳಿಯಲ್ಲಿ ಜೂ.4ರಂದು ಬೆಳಿಗ್ಗೆ 9ಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಸು ಮಂಡಳಿಯ ಅಧ್ಯಕ್ಷ ಕೆಂಪರಾಜೇ ಅರಸ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಾಮಾಜ್ಯದಲ್ಲಿ ಹಲವು ಪ್ರಥಮಗಳ ಹರಿಕಾರ ಎನಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರಸು ಮಂಡಳಿಯ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ನಂತರ ಕೆ.ಆರ್.ವೃತ್ತದವರೆಗೂ ಮೆರವಣ ಗೆ ನಡೆಸಲಾಗುತ್ತದೆ. ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಶಾಸಕ ಎಸ್.ಎ. ರಾಮದಾಸ್ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕಿರಣ್ ಜಿ.ಎಸ್.ಅರಸ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಸುಮಾ ಅರಸ್, ಸುಷ್ಮಾ ಅರಸ್ ಇದ್ದರು.

Translate »