ಮೈಸೂರಲ್ಲಿ ಶನಿವಾರ 138 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಶನಿವಾರ 138 ಮಂದಿಗೆ ಸೋಂಕು

August 9, 2020

ಮೈಸೂರು, ಆ.8(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ 138 ಸೇರಿ ರಾಜ್ಯದಲ್ಲಿ ಶನಿವಾರ 7,178 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಮೈಸೂರಿನಲ್ಲಿ 6,856 ಹಾಗೂ ರಾಜ್ಯದಲ್ಲಿ 1,72,102ಕ್ಕೆ ಏರಿಕೆಯಾಗಿದೆ. ಇನ್ನು ಮೈಸೂರಲ್ಲಿ 85 ಸೇರಿ ರಾಜ್ಯಾದ್ಯಂತ ಶನಿವಾರ 5,006 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 89,238 ಮಂದಿ ಸೋಂಕಿನ ವಿರುದ್ಧ ಸೆಣಸಾಡಿ, ಗೆದ್ದಿದ್ದಾರೆ.

ಮೈಸೂರಿನಲ್ಲಿರುವ 3,886 ಸಕ್ರಿಯ ಪ್ರಕರಣಗಳಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 253, ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ಸ್‍ಗಳಲ್ಲಿ 65, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 696, ಖಾಸಗಿ ಆಸ್ಪತ್ರೆಗಳಲ್ಲಿ 210, ಖಾಸಗಿ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 69 ಹಾಗೂ ಹೋಂ ಐಸೋಲೇಷನ್‍ನಲ್ಲಿ 2,593 ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 79,765 ಸಕ್ರಿಯ ಪ್ರಕರಣಗಳಿವೆ.

ಮೈಸೂರಲ್ಲಿ ಕೊರೊನಾದಿಂದ ಆ.6ರಂದು 49 ವರ್ಷದ ವ್ಯಕ್ತಿ, 75 ಹಾಗೂ 80 ವರ್ಷದ ವೃದ್ಧೆಯರು, ಆ.7ರಂದು 41 ಹಾಗೂ 67 ವರ್ಷದ ಮಹಿಳೆಯರು, 64, 69, 74 ಹಾಗೂ 83 ವರ್ಷದ ವೃದ್ಧರು, ಆ.8ರಂದು 60 ವರ್ಷದ ಮಹಿಳೆ ಸೇರಿ ಒಟ್ಟು 10 ಮಂದಿ ಮೃತಪಟ್ಟಿರುವುದಾಗಿ ಶನಿವಾರದ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 223ಕ್ಕೆ ಏರಿಕೆಯಾಗಿದೆ. ಇದನ್ನೊಳಗೊಂಡಂತೆ ರಾಜ್ಯದಲ್ಲಿ ಶನಿವಾರ 93 ಸೇರಿ ಈವರೆಗೆ 3,091 ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ವಿವರ: ಮೈಸೂರಲ್ಲಿ 138 ಸೇರಿ ಬೆಂಗಳೂರು 2665, ಬಳ್ಳಾರಿ 607, ಉಡುಪಿ 313, ಬೆಳಗಾವಿ 302, ರಾಯ ಚೂರು 295, ಕಲಬುರಗಿ 261, ಯಾದಗಿರಿ 200, ದಕ್ಷಿಣಕನ್ನಡ 194, ತುಮಕೂರು 177, ಕೊಪ್ಪಳ 163, ಬಾಗಲಕೋಟೆ 149, ವಿಜಯಪುರ 143, ಹಾಸನ 133, ದಾವಣಗೆರೆ 132, ಉತ್ತರಕನ್ನಡ 117, ಮಂಡ್ಯ 101, ಹಾವೇರಿ 95, ಗದಗ 94, ರಾಮನಗರ 93, ಚಿಕ್ಕಮಗಳೂರು 89, ಶಿವಮೊಗ್ಗ 73, ಬೆಂಗಳೂರು ಗ್ರಾಮಾಂತರ 66, ಚಿಕ್ಕಬಳ್ಳಾಪುರ 66, ಚಿತ್ರದುರ್ಗ 63, ಚಾಮರಾಜನಗರ 62, ಕೋಲಾರ 57, ಬೀದರ್ 47 ಹಾಗೂ ಕೊಡಗು ಜಿಲ್ಲೆಯಲ್ಲಿ 22 ಹೊಸ ಪ್ರಕರಣ ದಾಖಲಾಗಿವೆ.

ಕಡಿಮೆ ಟೆಸ್ಟಿಂಗ್: ಮೈಸೂರು ಜಿಲ್ಲೆಯಲ್ಲಿ ಕಳೆದ 2 ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಕೇವಲ 1,293 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಆ.6ರಂದು 2,225, ಆ.5ರಂದು 1,809 ಹಾಗೂ ಆ.4ರಂದು 2,179 ಮಂದಿಗೆ ಟೆಸ್ಟಿಂಗ್ ಮಾಡಲಾಗಿತ್ತು. ಜಿಲ್ಲೆಯ ಹೆಲ್ತ್ ಬುಲೆಟಿನ್ ಅಂಕಿ ಅಂಶದ ಪ್ರಕಾರ ಖಾಸಗಿ ಆಸ್ಪತ್ರೆ ಗಳಲ್ಲಿ ನಡೆಸುತ್ತಿರುವ ಟೆಸ್ಟಿಂಗ್ ಸಂಖ್ಯೆ ಮಾತ್ರ ದಿನೇ ದಿನೆ ಹೆಚ್ಚುತ್ತಿದೆ.

Translate »