ಮೈಸೂರು ಜಿಲ್ಲೆಯಲ್ಲಿ 148.46 ಹೆಕ್ಟೇರ್ ಬೆಳೆ ಹಾನಿ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 148.46 ಹೆಕ್ಟೇರ್ ಬೆಳೆ ಹಾನಿ

July 14, 2022

ಮೈಸೂರು, ಜು.13(ಎಂಕೆ)- ಜಿಲ್ಲೆಯಾ ದ್ಯಂತ ಕಳೆದೊಂದು ತಿಂಗಳಿನಲ್ಲಿ ಸುರಿದ ಮಳೆಗೆ 148.46 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ನಂಜನಗೂಡು, ಪಿರಿಯಾಪಟ್ಟಣ, ಮೈಸೂರು ಹಾಗೂ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಮುಂಗಾರು ಹಂಗಾಮಿನಲ್ಲಿಯೇ ಅತಿವೃಷ್ಟಿ ಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ 11.78 ಹೆಕ್ಟೇರ್ ಪ್ರದೇಶದಲ್ಲಿ(ಭತ್ತ-0.32, ರಾಗಿ-1.19, ಮುಸುಕಿನ ಜೋಳ-0.69, ಉದ್ದು-3.73, ಅಲಸಂದೆ-5.76 ಹಾಗೂ ಹತ್ತಿ-0.9) ಬೆಳೆ ಹಾನಿಯಾ ಗಿದ್ದರೆ, ಮೈಸೂರು ತಾಲೂಕಿ ನಲ್ಲಿ 27.40 ಹೆಕ್ಟೇರ್ ಪ್ರದೇಶದಲ್ಲಿ (ಭತ್ತ-0.40, ರಾಗಿ-11.18, ಅವರೆ-0.36, ಅಲಸಂದೆ-12.83 ಹಾಗೂ ಎಳ್ಳು-2.63) ಬೆಳೆ ಹಾನಿಯಾಗಿದೆ. ಹಾಗೆಯೇ ನಂಜನ ಗೂಡಿನಲ್ಲಿ 99.28 ಹೆಕ್ಟೇರ್ ಪ್ರದೇಶದಲ್ಲ್ಲಿ (ಭತ್ತ-97.77 ಹಾಗೂ ಸೂರ್ಯಕಾಂತಿ-1.51) ಬೆಳೆ ನಾಶವಾಗಿದ್ದರೆ, ಪಿರಿಯಾಪಟ್ಟಣ ತಾಲೂಕಿನಲ್ಲಿ 10 ಹೆಕ್ಟೇರ್ ಪ್ರದೇಶದಲ್ಲಿ ಮುಸು ಕಿನ ಜೋಳ ಹಾನಿಯಾಗಿದೆ.

ನಂಜನಗೂಡಿನಲ್ಲೇ ಹೆಚ್ಚು: ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿ ದರೆ ನಂಜನಗೂಡಿನಲ್ಲಿ ಅತೀ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾ ಗಿದ್ದು, ಅದರಲ್ಲಿ ಬಹುಪಾಲು ಭತ್ತದ ಬೆಳೆಗೆ ಹಾನಿಯಾಗಿದೆ. 97.77 ಹೆಕ್ಟೇರ್ ಪ್ರದೇಶದಲ್ಲಿ ವಿಪರೀತ ಮಳೆಯಿಂದಾಗಿ ಭತ್ತ ಹಾನಿ ಯಾಗಿದ್ದು, ರೈತರನ್ನು ಕಂಗಲಾಗಿಸಿದೆ.

ಜಂಟಿ ಸಮೀಕ್ಷೆ: ಬೆಳೆ ಹಾನಿ ಪ್ರದೇಶ ಗಳಿಗೆ ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ರೈತರಿಂದ ಹಾನಿಗೀಡಾದ ಬೆಳೆ ಪ್ರಮಾಣದ ಕುರಿತು ಮಾಹಿತಿ ಕ್ರೋಢೀ ಕರಿಸಿ ಪರಿಹಾರ ತಂತ್ರಾಂಶ(ಸಾಫ್ಟ್‍ವೇರ್)ಕ್ಕೆ ಅಪ್ ಲೋಡ್ ಮಾಡುತ್ತಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರ ಶೇಖರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬೆಳೆ ಪರಿಹಾರ: ಬೆಳೆ ಹಾನಿಗೆ ಅನು ಗುಣವಾಗಿ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೆರ್‍ಗೆ 6800 ರೂ., ಹಾಗೂ ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ 13,500 ರೂ., ಪರಿಹಾರ ಹಣ ನೀಡಲಾಗುವುದು. ಪರಿಹಾರ ಮೊತ್ತವೂ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದರು.

Translate »