ರಾಜ್ಯದಲ್ಲಿ 7 ಹೊಸ ಪ್ರಕರಣ ಸೇರಿ 151 ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ 7 ಹೊಸ ಪ್ರಕರಣ ಸೇರಿ 151 ಮಂದಿಗೆ ಸೋಂಕು

April 6, 2020

ಬೆಂಗಳೂರು,ಏ.5-ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಇಂದಿನ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವಾಲಯ ಬುಲೆಟಿನ್ ರಿಲೀಸ್ ಮಾಡಿದೆ. ಹೊಸದಾಗಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟು 151 ಕೇಸ್‍ಗಳು ದೃಢಪಟ್ಟಿರುವುದಾಗಿ ತಿಳಿಸಿದೆ. ಒಟ್ಟು ನಾಲ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 12 ಮಂದಿ ಸೋಂಕಿನಿಂದ ಗುಣಮುಖರಾ ದವರನ್ನ ಡಿಸ್ಚಾರ್ಜ್ ಮಾಡಲಾಗಿದೆ. 135 ಆಕ್ಟೀವ್ ಪ್ರಕರಣಗಳಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 132 ಜನರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಹಾಗೂ ಇನ್ನುಳಿದ ಮೂವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಪೇಶೆಂಟ್ ನಂ.43, ನಂ.101 ಹಾಗೂ ನಂ.102ರನ್ನು ಐಸಿಯುನ ವೆಂಟಿಲೇಟರ್‍ನಲ್ಲಿಡಲಾಗಿದೆ. ಹೊಸದಾಗಿ ಪತ್ತೆಯಾದವರಲ್ಲಿ ನಾಲ್ವರು ಬೆಳಗಾವಿಯ ರಾಯಬಾಗ್ ಮೂಲದವ ರಾಗಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಸೋಂಕು ದೃಢಪಟ್ಟಿದೆ. ದುಬೈನಿಂದ ಆಗಮಿಸಿದ್ದ ಬೆಂಗಳೂರಿನ ದಂಪತಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ದೆಹಲಿಯಿಂದ ಆಗಮಿಸಿದ್ದ ಬಳ್ಳಾರಿ ಮೂಲದ ವ್ಯಕ್ತಿಗೂ ಕೊರೊನಾ ಇರೋದು ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇದುವರೆಗೂ ಅತಿಹೆಚ್ಚು, ಒಟ್ಟು 57 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. 9 ಜನರು ಡಿಸ್ಜಾರ್ಜ್ ಆಗಿದ್ದು, 47 ಪ್ರಕರಣ ಆಕ್ಟೀವ್‍ನಲ್ಲಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿ ದ್ದಾರೆ. ದಕ್ಷಿಣ ಕನ್ನಡದಲ್ಲಿ ಒಟ್ಟು 12 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.

Translate »