ಕೊರೊನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಪುರಾವೆಗಳಿಲ್ಲ
ಮೈಸೂರು

ಕೊರೊನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಪುರಾವೆಗಳಿಲ್ಲ

April 6, 2020

ನವದೆಹಲಿ,ಏ.5- ಕೊರೊನಾ ವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆ ಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.

ಗಾಳಿಯಲ್ಲಿ ಸೋಂಕು ಹರಡುವಿಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸ್ಪಷ್ಟ ಪಡಿಸಿದೆ. ಈ ಮಧ್ಯೆ ತಬ್ಲೀಘಿ ಘಟನೆ ಯಿಂದಾಗಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದ್ವಿಗುಣ ವಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿ ಸಿದೆ. ಪ್ರಸ್ತುತ 4 ದಿನಗಳಲ್ಲಿ ಕೊರೊನಾ ಸೋಂಕು ಪ್ರಕ ರಣಗಳ ಸಂಖ್ಯೆ ದ್ವಿಗುಣವಾಗು ತ್ತಿದೆ. ಆದರೆ ತಬ್ಲೀಘಿ ಜಮಾತ್ ಘಟನೆಯಿಂದಾಗಿ ಹೆಚ್ಚುವರಿ ಪ್ರಕರಣಗಳು ವರದಿಯಾಗದಿದ್ದರೆ, ದ್ವಿಗುಣಗೊಳಿಸುವ ಪ್ರಮಾಣ 7 ದಿನಗಳು ಆಗಿರುತ್ತಿತ್ತು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯ ದರ್ಶಿ ಲಾವ್ ಅಗರ್ ವಾಲ್ ಸುದ್ದಿಗೋಷ್ಠಿಯಲ್ಲಿ ಇಂದಿಲ್ಲಿ ತಿಳಿಸಿದರು.

ಕೋವಿಡ್-19 ಸೋಂಕು ತಗುಲಿದ 267 ಜನರು ಗುಣಮುಖರಾಗಿದ್ದಾರೆ. ಶನಿವಾರದಿಂದ 11 ಸಾವು, 505 ಹೊಸ ಪ್ರಕರಣಗಳು ವರದಿಯಾಗಿದ್ದು, 83 ಜನರು ಮೃತಪಟ್ಟಿ ದ್ದಾರೆ ಎಂದು ವಿವರಿಸಿದರು.

24 ರಾಜ್ಯಗಳು, 399 ಜಿಲ್ಲೆಗಳಲ್ಲಿ ಈ ಸೋಂಕು ಕಂಡುಬಂದಿದ್ದು, ಹಾಟ್‍ಸ್ಪಾಟ್ ಗಳಲ್ಲಿ ಬಫರ್ ವಲಯ ಹಾಗೂ ನಿರ್ಬಂ ಧಿತ ಪ್ರದೇಶಗಳನ್ನು ಗುರುತಿಸಲಾಗಿದೆ. ನಿರ್ಬಂಧಿತ ಪ್ರದೇಶಗಳ ಕಡೆಯಲ್ಲಿರುವ ಎಲ್ಲಾ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಕೋವಿಡ್-19 ಪರೀಕ್ಷೆ ಯನ್ನು ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೊಳಪಡಿಸಲಾಗುವುದು ಎಂದು ಅಗರ್‍ವಾಲ್ ತಿಳಿಸಿದರು.

Translate »