ಅಭಿಯಾನದ ಮೊದಲ ದಿನ 1,535 ಟ್ರಾನ್ಸ್ಫಾರ್ಮರ್ ತಪಾಸಣೆ
ಮೈಸೂರು

ಅಭಿಯಾನದ ಮೊದಲ ದಿನ 1,535 ಟ್ರಾನ್ಸ್ಫಾರ್ಮರ್ ತಪಾಸಣೆ

May 7, 2022

ಮೈಸೂರು, ಮೇ ೬(ಎಂಟಿವೈ)- ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂಧನ ಇಲಾಖೆ ರಾಜ್ಯದಾದ್ಯಂತ ಆರಂಭಿಸಿರುವ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್ಫಾರ್ಮರ್) ನಿರ್ವಹಣಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಯಾನದ ಮೊದಲ ದಿನ ೫ ಜಿಲ್ಲೆಗಳಲ್ಲಿ ೮೩೬ ತಂಡಗಳ ಚೆಸ್ಕಾಂ ಸಿಬ್ಬಂದಿ ೧೫೩೫ ಟ್ರಾನ್ಸ್ಫಾರ್ಮರ್‌ಗಳನ್ನು ತಪಾಸಣೆ ಮಾಡಿ ಸರ್ವಿಸ್ ಮಾಡಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ(ಚೆಸ್ಕಾA) ವ್ಯಾಪ್ತಿಗೆ ೫ ಜಿಲ್ಲೆಗಳು ಒಳಪಡಲಿದ್ದು, ಅಭಿಯಾನದ ಮೊದಲ ದಿನ ಮೈಸೂರು ಜಿಲ್ಲೆಯಲ್ಲಿ ೪೪೬, ಮಂಡ್ಯ ಜಿಲ್ಲೆಯಲ್ಲಿ ೩೯೦, ಚಾಮರಾಜ ನಗರ ಜಿಲ್ಲೆಯಲ್ಲಿ ೧೬೯, ಕೊಡಗು ಜಿಲ್ಲೆ ಯಲ್ಲಿ ೧೦೩ ಹಾಗೂ ಹಾಸನ ಜಿಲ್ಲೆಯಲ್ಲಿ ೪೨೭ ಟ್ರಾನ್ಸ್ಫಾರ್ಮರ್ ಸೇರಿದಂತೆ ಚೆಸ್ಕಾಂ ವ್ಯಾಪ್ತಿಯ ೫ ಜಿಲ್ಲೆಗಳಲ್ಲಿ ೧,೫೩೫ ಟ್ರಾನ್ಸ್ ಫಾರ್ಮರ್ ತಪಾಸಣೆ ಮಾಡಿ ಸಣ್ಣ ಪುಟ್ಟ ರಿಪೇರಿ ಒಳಗೊಂಡAತೆ ಸರ್ವಿಸ್ ಮಾಡಲಾಗಿದೆ.
ಈ ಕುರಿತು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇಂಧನ ಸಚಿವರ ಆದೇಶದಂತೆ ಚೆಸ್ಕಾಂ ವ್ಯಾಪ್ತಿ ಯಲ್ಲಿನ ಐದೂ ಜಿಲ್ಲೆಗಳಲ್ಲಿ ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನ ಮೇ ೫ರಿಂದ ಆರಂಭಿಸಲಾಗಿದ್ದು, ಮೇ ೨೦ರವರೆಗೆ ನಡೆಸಲಾಗುತ್ತದೆ. ವಿವಿಧ ಉಪವಿಭಾಗಗಳ ಅಧಿಕಾರಿಗಳನ್ನೊಳಗೊಂಡAತೆ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು ೮೩೬ ತಂಡ ರಚಿಸಲಾಗಿದೆ. ತಾಂತ್ರಿಕ ಸಿಬ್ಬಂದಿಗಳು ಒಳಗೊಂಡಿರುವ ಈ ತಂಡದಲ್ಲಿ ಅಭಿ ಯಾನದ ಮೊದಲ ದಿನವೇ ಮೈಸೂರು ಜಿಲ್ಲೆಯಲ್ಲಿ ೪೪೬ ಟ್ರಾನ್ಸ್ಫಾರ್ಮರ್ ಸೇರಿದಂತೆ ೫ ಜಿಲ್ಲೆಗಳಲ್ಲಿ ೧,೫೩೫ ಟ್ರಾನ್ಸ್ಫಾರ್ಮರ್ ತಪಾಸಣೆ ಮಾಡಿ ಸರ್ವಿಸ್ ಮಾಡಲಾಗಿದೆ. ಎಲ್ಲಾ ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಯಾ ಸ್ಥಳಕ್ಕೆ ಭೇಟಿ ನೀಡಿ ಉತ್ತಮ ಗುಣಮಟ್ಟದ ನಿರ್ವಹಣೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅಗತ್ಯ ಸಲಹೆ-ಸೂಚನೆ ನೀಡುತ್ತಿದ್ದಾರೆ. ತಪಾಸಣೆ ವೇಳೆ ದೋಷ ಕಂಡು ಬಂದ ಟ್ರಾನ್ಸ್ ಫಾರ್ಮರ್ ಗಳಿಗೆ ಅವಶ್ಯವಿರುವ ಸಾಧನ ಸಲಕರಣೆಯನ್ನು ಸಕಾಲದಲ್ಲಿ ಪೂರೈಸ ಲಾಗುತ್ತಿದೆ ಎಂದು ತಿಳಿಸಿದರು.

ಈ ವಿಶೇಷ ಅಭಿಯಾನದಲ್ಲಿ ಪವರ್ ಮ್ಯಾನ್‌ಗಳು ಆಸಕ್ತಿಯಿಂದ ನಿರ್ವಹಣಾ ಕೆಲಸ ನಿಭಾಯಿಸುತ್ತಿದ್ದಾರೆ. ಗ್ರಾಹಕರಿಗೆ ತಡೆ ರಹಿತ ವಿದ್ಯುತ್ ಸರಬರಾಜು ಮಾಡಲು ಚೆಸ್ಕಾಂ ಸಿಬ್ಬಂದಿ ಶ್ರಮಿಸುತ್ತಿ ದ್ದಾರೆ. ತಾಂತ್ರಿಕ ಸಿಬ್ಬಂದಿ ಮತ್ತು ಅಧಿ ಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿರು ವುದರಿಂದ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ. ೨೫ ವರ್ಷ ಮೇಲ್ಪಟ್ಟ ಟ್ರಾನ್ಸ್ ಫಾರ್ಮರ್‌ಗಳನ್ನು ಈಗಾಗಲೇ ಗುರುತಿಸ ಲಾಗಿದೆ. ಅದಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಹತ್ತು ದಿನಗಳ ಒಳಗೆ ಈ ಅಭಿಯಾನವನ್ನು ಮುಗಿಸುವ ಗುರಿ ಹೊಂದಿದ್ದೇವೆ. ಒಂದು ಟ್ರಾನ್ಸ್ ಫಾರ್ಮರ್ ಅನ್ನು ಮೂರು ಮಂದಿ ನಿರ್ವಹಣೆ ಮಾಡಲಿದ್ದಾರೆ. ಟ್ರಾನ್ಸ್ ಫಾರ್ಮರ್‌ಗಳ ಗುಣಮಟ್ಟ ಮತ್ತು ಅವುಗಳ ಬುಷ್, ಆಯಿಲ್, ನಟ್, ಬೋಲ್ಟ್ ಹಾಗೂ ವಿವಿಧ ಭಾಗಗಳನ್ನು ಪರಿಶೀಲನೆ ನಡೆಸಿ ನಂತರ ಬದಲಾಯಿಸುತ್ತಾರೆ. ಈಗಾಗಲೇ ಮಳೆ ಅರಂಭವಾಗಿದ್ದು, ಇದರಿಂದ ವಿದ್ಯುತ್ ಅಪಘಾತ ತಪ್ಪಿಸು ವುದು ಹಾಗೂ ಟ್ರಾನ್ಸ್ ಫಾರ್ಮರ್‌ಗಳ ವಿಫಲತೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿ ಟ್ರಾನ್ಸ್ ಫಾರ್ಮರ್ ನಿರ್ವಹಣೆಗೆ ೩ ಗಂಟೆ ತಗುಲಲಿದ್ದು, ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವಿದ್ಯುತ್ ಅಡಚಣೆ ಉಂಟಾಗಾಗುವ ಸಾಧ್ಯತೆ ಇದ್ದು, ಗ್ರಾಹಕರು ಸಹಕರಿಸಬೇಕಿದೆ.

Translate »