ಕೌಲಂದೆಯಲ್ಲಿ ಆಕ್ಷೇಪಾರ್ಹ ಪ್ರಸ್ತಾಪ: ಇಬ್ಬರ ಬಂಧನ
ಮೈಸೂರು

ಕೌಲಂದೆಯಲ್ಲಿ ಆಕ್ಷೇಪಾರ್ಹ ಪ್ರಸ್ತಾಪ: ಇಬ್ಬರ ಬಂಧನ

May 7, 2022

ಮೈಸೂರು, ಮೇ ೬(ಎಸ್‌ಬಿಡಿ)- ನಂಜನಗೂಡು ತಾಲೂಕು ದೊಡ್ಡ ಕೌಲಂದೆ ಗ್ರಾಮದಲ್ಲಿ ಆಕ್ಷೇಪಾರ್ಹ ಪ್ರಸ್ತಾಪ ಮಾಡಿದ್ದ ಪ್ರಕರಣ ಸಂಬAಧ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಫೈಸ್ ಷರೀಫ್ (೨೨) ಹಾಗೂ ಅನಾನ್ ಅಲಿಖಾನ್ (೨೫)ನನ್ನು ಕೌಲಂದೆ ಠಾಣೆ ಪೊಲೀಸರು ಬಂಧಿಸಿ, ಆಕ್ಷೇಪಾರ್ಹ ಪ್ರಸ್ತಾಪ ಮಾಡಿದ್ದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದರು.

ಈ ಸಂಬAಧ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಆರ್.ಚೇತನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವೈರಲ್ ವಿಡಿಯೋದಲ್ಲಿ ಆಕ್ಷೇಪಾರ್ಹ ಪ್ರಸ್ತಾಪವಿದ್ದ ಧ್ವನಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದು ವರೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರಾರ್ಥನೆ ಬಳಿಕ ರಸ್ತೆಯಲ್ಲಿ ಮುಸ್ಲಿಮರ ದೊಡ್ಡ ಗುಂಪು ನೋಡಿದಾಗ ಅಚಾನಕ್ಕಾಗಿ ಬಾಯ್ತಪ್ಪಿನಿಂದ ತಪ್ಪಾಗಿ ಮಾತನಾಡಿದ್ದೇವೆ ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾಗಿ ತಿಳಿದುಬಂದಿದೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿರುವ ಇಬ್ಬರೂ ಯಾವ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ. ಇವರಿಗೆ ಯಾರೂ ಕುಮ್ಮಕ್ಕು ನೀಡಿದಂತಿಲ್ಲ. ಅಜ್ಞಾನದಿಂದ ಹೀಗೆ ಹೇಳಿರಬಹುದೆಂದು ಮೇಲ್ನೋಟಕ್ಕೆ ತಿಳಿದುಬಂದಿದೆಯಾದರೂ ಆರೋಪಿಗಳ ಪೂರ್ವಾಪರದ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ರAಜಾನ್ ದಿನ ಸಾಮೂಹಿಕ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುವಾಗ ಗುಂಪಾ ಗಿದ್ದ ಜನರ ವಿಡಿಯೋ ಚಿತ್ರೀಕರಿಸುವ ವೇಳೆ ಇಬ್ಬರು `ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್'(ಕವಲಂದೆ ಎಂದರೆ ಪುಟ್ಟ ಪಾಕಿಸ್ತಾನ) ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಶತ್ರು ರಾಷ್ಟçದ ಪರ ಒಲವು ವ್ಯಕ್ತಪಡಿಸಿರುವ ದುಷ್ಕರ್ಮಿಗಳನ್ನು ಬಂಧಿಸುವAತೆ ಒತ್ತಾಯ ಕೇಳಿಬಂದಿತ್ತು. ಮುಖ್ಯಮಂತ್ರಿಗಳೂ ಕ್ರಮಕ್ಕೆ ಸೂಚಿಸಿದ್ದರು.

ಮುಠ್ಠಾಳ ದೇಶದ ಹೆಸರು ನಮಗೇಕೆ?: ಗ್ರಾಮದ ಮುಸ್ಲಿಂ ಮುಖಂಡರು ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದಲ್ಲದೆ ಆರೋಪಿಗಳ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿದ್ದಾರೆ. ಗ್ರಾಮದ ಮುಖಂಡ ಜಾವಿದ್ ಅಹಮ್ಮದ್ ಮಾತನಾಡಿ, ನಾವು ಭಾರತದಲ್ಲೇ ಹುಟ್ಟಿ ಬೆಳೆದಿರೋರು. ನಮ್ಮ ಏಳೆಂಟು ತಲೆ ಮಾರಿನ ಇತಿಹಾಸ ಗೊತ್ತಿದೆ. ಆ ಇಬ್ಬರು ಹುಡುಗರು ಮಾಡಿದ್ದು ತಪ್ಪು. ನಾವೇ ಅವರನ್ನು ಹಿಡಿದು ಕೊಟ್ಟಿದ್ದೇವೆ. ಸಂವಿಧಾನದಡಿಯಲ್ಲಿ ಅವರಿಗೆ ಶಿಕ್ಷೆ ನೀಡಲಿ. ನಾವು ಭಾರತೀಯರು, ಎಂದೂ ಅಂತಹ ಹೇಳಿಕೆ ನೀಡುವುದಿಲ್ಲ. ಆ ಮುಠ್ಠಾಳ ದೇಶದ ಹೆಸರು ನಮಗೇಕೆ ಬೇಕು? ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಕೇಳಿಸಿದ್ದರೆ ತಕ್ಕ ಶಾಸ್ತಿಯಾಗುತ್ತಿತ್ತು: ಪ್ರಾರ್ಥನೆ ಮಾಡಿ ತೆರಳುತ್ತಿದ್ದ ಜನರನ್ನು ನೋಡಿ ಇಬ್ಬರು ಹುಡುಗರು ಛೋಟಾ ಪಾಕಿಸ್ತಾನ್ ಎಂದು ಹೇಳಿದ್ದಾರೆ. ಆ ವೇಳೆ ನಮಗೆ ಕೇಳಿಸಲಿಲ್ಲ, ವಿಡಿಯೋದಲ್ಲಿ ಗೊತ್ತಾಯಿತು. ಹಾಗೆ ಹೇಳಿದ್ದು ನಮಗೇ ನಾದರೂ ಕೇಳಿಸಿದ್ದರೆ ಅಲ್ಲೇ ಹೊಡೆಯು ತ್ತಿದ್ದೆವು. ಖಂಡಿತವಾಗಿ ಆ ಹುಡುಗರು ಮಾಡಿದ್ದು ತಪ್ಪು. ಈ ರೀತಿಯ ಘಟನೆ ಮುಂದೆ ಆಗಬಾರದು ಎಂದು ಎಚ್ಚರಿಕೆ ನೀಡಿದ್ದೇವೆ. ನಾವು ಹುಟ್ಟಿರುವುದು, ಬೆಳೆದಿರುವುದು, ಸಾಯುವುದು, ಮಣ್ಣಾ ಗುವುದು ಭಾರತದಲ್ಲೇ. ನಾವು ಭಾರತೀ ಯರು, ಭಾರತೀಯರೇ ಆಗಿರುತ್ತೇವೆ ಎಂದು ಹೇಳಿದ ಮತ್ತೋರ್ವ ಮುಖಂಡರು, ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಿದರು.

Translate »