ಮೈಸೂರು ವಿವಿ ಗೌರವ ಡಾಕ್ಟರೇಟ್ ಪುರಸ್ಕೃತ ಜಾನಪದ ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿಗೆ ಅಭಿನಂದನೆ
ಮೈಸೂರು

ಮೈಸೂರು ವಿವಿ ಗೌರವ ಡಾಕ್ಟರೇಟ್ ಪುರಸ್ಕೃತ ಜಾನಪದ ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿಗೆ ಅಭಿನಂದನೆ

May 7, 2022

ಮೈಸೂರು,ಮೇ.೬(ಜಿಎ)- ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸಪ್ತಸ್ವರ ಸಿಂಚನ ಟ್ರಸ್ಟ್ ಮತ್ತು ಅಮ್ಮ ವಸುಂಧರೆ ಟ್ರಸ್ಟ್ ವತಿಯಿಂದ ಜಾನಪದ ಕಲಾವಿದ ಡಾ.ಎಂ. ಮಳವಳ್ಳಿ ಮಹದೇವಸ್ವಾಮಿ ಅವರನ್ನು ಶುಕ್ರವಾರ ಸಂಜೆ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಜಾನಪದ ವಾದ್ಯ ಗಳನ್ನು ನುಡಿಸುವ ಮೂಲಕ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ. ಎಸ್. ಸದಾನಂದ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದಿನ ಕಾರ್ಯಕ್ರಮದಲ್ಲಿ ಇಬ್ಬರು ಡಾಕ್ಟರ್ ಗಳಿದ್ದೇವೆ. ನಾನು ಮನುಷ್ಯನ ಶರೀರದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದರೆ, ಮಳವಳ್ಳಿ ಮಹದೇವಸ್ವಾಮಿ ಅವರು ಮನುಷ್ಯನ ಮಾನಸಿಕ ಕಾಯಿಲೆ ಮತ್ತು ಸಮಾಜದ ಕಾಯಿಲೆಗಳಿಗೆ ತಮ್ಮ ಸಂಗೀತದ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಇಂದಿಗೂ ಅನೇಕ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಸಮಯ ದಲ್ಲಿ ಸಂಗೀತವನ್ನು ಬಳಸುತ್ತಾರೆ ಎಂದರು.

ಮಹದೇವಸ್ವಾಮಿ ಅವರ ಮಾತು ಮತ್ತು ಸಂಗೀತ ಮನಸ್ಸಿಗೆ ನಾಟುತ್ತದೆ. ಅಂತಹ ವರನ್ನು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಗುರುತಿಸಿ ಡಾಕ್ಟರೇಟ್ ನೀಡಿರುವುದು ಸಂತಸದ ವಿಚಾರವಾಗಿದೆ ಎಂದರು.

ಅಭಿನAದನೆ ಸ್ವೀಕರಿಸಿದ ಡಾ.ಎಂ. ಮಳ ವಳ್ಳಿ ಮಹದೇವಸ್ವಾಮಿ ಮಾತನಾಡಿ, ನಾನು ಎಲ್ಲಾ ವೇದಿಕೆಗಳಲ್ಲಿ ತಿಳಿಸಿರುವಂತೆ ಈ ಕಲೆಯನ್ನು ಹೊಟ್ಟೆ ಪಾಡಿಗಾಗಿ ಬಳಸುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಬಡತನದ ಜೀವನ. ನಾವು ನಡೆದುಬಂದ ಹಾದಿ ಯನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ನನ್ನ ಕಲೆಗೆ ಡಾ. ರಾಜ್‌ಕುಮಾರ್ ಅವರು ಚಲನಚಿತ್ರಗಳು ಮತ್ತು ಭಕ್ತಿ ಪ್ರದಾನ ಗೀತೆಗಳೇ ಮುಖ್ಯ ಪ್ರೇರಣೆಯಾಗಿತ್ತು. ಅಂದಿನ ದಿನಗಳಲ್ಲಿ ನಾವು ಒಂದು ಹೊತ್ತಿನ ಊಟ ಕ್ಕಾಗಿ ರಾತ್ರಿ ಪೂರ್ತಿ ಕಥೆಗಳನ್ನು ಹೇಳುತ್ತಿ ದ್ದೆವು, ಆದರೆ ಇಂದು ಕೇವಲ ಕೆಲ ಹಾಡು ಗಳನ್ನು ಹಾಡಿ ಸಾವಿರಾರು ರೂ. ಗಳನ್ನು ಪಡೆ ಯುತ್ತಾರೆ. ಇತ್ತೀಚಿನ ಪೀಳಿಗೆಗೆ ಹೊಟ್ಟೆ ತುಂಬ ಊಟವಿರುವುದರಿಂದ ಕಲೆ ಕಲಿಕೆಯಲ್ಲಿ ಆಸಕ್ತಿ ಇಲ್ಲದಂತಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ನಾನು ಜಾನಪದ ಉಳಿವಿಗಾಗಿ ಈಗಾಗಲೇ ಟ್ರಸ್ಟ್ ಅನ್ನು ಸ್ಥಾಪಿಸಿದ್ದೇನೆ. ಅದಕ್ಕೆ ಸ್ಥಳದ ಅವಶ್ಯಕತೆ ಇದೆ. ಸರ್ಕಾರ ಸ್ಥಳ ನೀಡಿದರೆ ಅನುಕೂಲವಾಗುತ್ತದೆ. ಕಲಿಕೆಗೆ ಬರುವ ವಿದ್ಯಾರ್ಥಿಗಳಿಗೆ ಸ್ಟೆöÊಫಂಡ್ ನೀಡುವ ಮೂಲಕ ಕಲೆಯನ್ನು ಪೋಷಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಪಾಲಿಕೆ ವಲಯ ಆಯುಕ್ತ ಎಂ.ನAಜುAಡಯ್ಯ, ಮಾನಸ ಗಂಗೋತ್ರಿ ಜಾನಪದ ವಿಭಾಗದ ಮುಖ್ಯಸ್ಥ ಪ್ರೊ. ನಂಜಯ್ಯ ಹೊಂಗನೂರು, ಹಿರಿಯ ಪರ್ತಕರ್ತ ಅಂಶಿಪ್ರಸನ್ನಕುಮಾರ್, ಮೈಸೂರು ಜಿಲ್ಲಾ ಕನ್ನಡ ಜನಪದ ಪರಿಷತ್ ಅಧ್ಯಕ್ಷ ಡಾ.ಹೆಚ್. ಕ್ಯಾತನಹಳ್ಳಿ ಪ್ರಕಾಶ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡಾ.ಕೆ.ಆರ್. ಮಂಜುನಾಥ್, ವಿಷ್ಣು ಏಜೆನ್ಸಿಸ್‌ನ ಶ್ರೀರಾಮ ಭಗವತ್, ಎವಿಎಸ್‌ಎಸ್ ಸಂಸ್ಥೆ ಅಧ್ಯಕ್ಷ ತುಂಬಲ ರಾಮಣ್ಣ, ಸಪ್ತಸ್ವರ ಸಿಂಚನ ಟ್ರಸ್ಟ್ ಅಧ್ಯಕ್ಷ ಎನ್. ಹರೀಶ್ ಹಾಗೂ ಅಮ್ಮ ವಸುಂಧರೆ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಜಿ. ಅಮ್ಮ ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »