ಕುವೆಂಪುನಗರ, ಸಾತಗಳ್ಳಿಯಲ್ಲಿ ಒತ್ತುವರಿಯಾಗಿದ್ದ 16 ಕೋಟಿ ರೂ. ಮೌಲ್ಯದ ಆಸ್ತಿ ಮುಡಾ ವಶಕ್ಕೆ
ಮೈಸೂರು

ಕುವೆಂಪುನಗರ, ಸಾತಗಳ್ಳಿಯಲ್ಲಿ ಒತ್ತುವರಿಯಾಗಿದ್ದ 16 ಕೋಟಿ ರೂ. ಮೌಲ್ಯದ ಆಸ್ತಿ ಮುಡಾ ವಶಕ್ಕೆ

September 11, 2020

ಮೈಸೂರು, ಸೆ.10(ಆರ್‍ಕೆ)- ಮೈಸೂರಿನ ಕುವೆಂಪುನಗರ ಮತ್ತು ಸಾತಗಳ್ಳಿ ಬಡಾವಣೆಗಳಲ್ಲಿ ಅನಧಿಕೃತ ವಾಗಿ ಒತ್ತುವರಿ ಮಾಡಿಕೊಂಡಿದ್ದ 16 ಕೋಟಿ ರೂ. ಮೌಲ್ಯದ ಆಸ್ತಿ ಯನ್ನು ಮುಡಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಾತಗಳ್ಳಿ ಸರ್ವೆ ನಂಬರ್ 68/1, 2, 3ರ 10.14 ಎಕರೆ ಪೈಕಿ 3.27 ಎಕರೆ ಭೂಮಿ (15 ಕೋಟಿ ರೂ. ಮೌಲ್ಯ)ಯನ್ನು ಬೇರೆಯವರು ಒತ್ತುವರಿ ಮಾಡಿ ಕೊಂಡಿದ್ದರು. ಅದೇ ರೀತಿ ಕುವೆಂಪುನಗರದ ಪಡುವಣ ರಸ್ತೆಯಲ್ಲಿ 40×60 ಅಡಿ ಅಳತೆಯ 3 ನಿವೇಶನಗಳನ್ನು ಖಾಸಗಿಯವರು ಶೆಡ್ ಮತ್ತು ಕಾಂಪೌಂಡ್ ನಿರ್ಮಿಸಿ ಕೊಂಡಿದ್ದರು. ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಅವರ ನಿರ್ದೇಶನದ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಮುಡಾ ಅಧಿಕಾರಿಗಳು, ಒತ್ತುವರಿ ಮಾಡಿಕೊಂಡಿದ್ದ ಆಸ್ತಿಯನ್ನು ತೆರವುಗೊಳಿಸಿ ವಶಕ್ಕೆ ಪಡೆದು ಸ್ಥಳದಲ್ಲಿ ಅತಿಕ್ರಮ ಪ್ರವೇಶ ಮಾಡಿದವರಿಗೆ ಕಾನೂನು ರೀತಿಯ ಕ್ರಮ ವಹಿಸಲಾಗುವುದು ಎಂದು ಸೂಚನಾ ಫಲಕ ಅಳವಡಿಸಿ ದ್ದಾರೆ. ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಶಂಕರ್, ವಲಯಾಧಿಕಾರಿ ಗಳಾದ ರವೀಂದ್ರಕುಮಾರ್, ಜಿ.ಮೋಹನ್, ವೇಣುಗೋಪಾಲ್, ಕಾವೇರಿಗೌಡ, ನಾಗೇಶ್, ನಟೇಶ್ ಹಾಗೂ ಇತರರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 

Translate »