ಮೈಸೂರು, ಸೆ.10(ಪಿಎಂ)- ಕರ್ನಾ ಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಡಿ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡುವುದು ತಡವಾಗುತ್ತಿದೆ. ಹಾಗಾಗಿ ನಿಗಮಕ್ಕೇ ಆಯ್ಕೆಯ ಅಧಿಕಾರ ನೀಡಬೇಕು, ಇಲ್ಲವೇ ಅಧಿಕಾರಿ ವರ್ಗದ ಸಮಿತಿ ರಚಿಸಿ ಸ್ವತಂತ್ರ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ತಿಳಿಸಿದರು.
ಮೈಸೂರಿನ ವಿಜಯನಗರದ ಕೆಡಿ ವೃತ್ತದ ಬಳಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸ್ತ್ರೀಶಕ್ತಿ ಭವನದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಸಂಬಂಧ ಗುರುವಾರ ಹಮ್ಮಿ ಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದೆ. ನಿಗಮ ದಿಂದ ಫಲಾನುಭವಿಗಳಿಗೆ ಸೌಲಭ್ಯ ತಲುಪಿ ಸುವುದರಲ್ಲಿ ಹಿಂದೆ ಉಳಿದಿದ್ದೇವೆ. ಕೆಲ ಜಿಲ್ಲೆಗಳಲ್ಲಿ ಫಲಾನುಭವಿಗಳು ಸಾಲ ಪಡೆದು ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸು ತ್ತಿಲ್ಲ. ಉದ್ದೇಶಿತ ಕಾರ್ಯಕ್ಕೆ ಸಾಲದ ಹಣ ಬಳಸಿಕೊಳ್ಳದಿದ್ದರೆ ಸಾಲ ಮರುಪಾವ ತಿಯೂ ಕಷ್ಟವಾಗುತ್ತದೆ ಎಂದರು.
ಲೀಡ್ ಬ್ಯಾಂಕ್ ಎಜಿಎಂ ನಾಗಪ್ಪ ಮಾತ ನಾಡಿ, 2019-20ರಲ್ಲಿ ಉದ್ಯೋಗಿನಿ ಯೋಜನೆಯಲ್ಲಿ 292 ಅರ್ಜಿ ಬಂದಿದ್ದವು. 77 ಅರ್ಜಿಗೆ ಸಾಲ ಮಂಜೂರಾಗಿ, 1.56 ಲಕ್ಷ ರೂ. ಹಣ ಫಲಾನುಭವಿಗಳಿಗೆ ವಿತ ರಣೆಯಾಗಿದೆ. 179 ಅರ್ಜಿ ಬಾಕಿ ಇದ್ದು, 60 ಅರ್ಜಿಗಳನ್ನು ಮರುಪರಿಶೀಲಿಸಲು ಸರ್ಕಾರ ಸೂಚನೆ ನೀಡಿದೆ ಎಂದರು.
ಇದೇ ವೇಳೆ ಪೋಷಣಾ ಮಾಸಾಚರಣೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಉದ್ಯೋಗಿನಿ ಯೋಜನೆಯಡಿ 20 ಮಹಿಳೆ ಯರಿಗೆ ಚೆಕ್ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮಾ, ಜಿಪಂ ಉಪ ಕಾರ್ಯ ದರ್ಶಿ ಪ್ರೇಮಕುಮಾರ್, ನಿಗಮದ ಅಭಿವೃದ್ಧಿ ನಿರೀಕ್ಷಕಿ ಹೆಚ್.ವಿ.ಜಗದಾಂಬ ಇತರರಿದ್ದರು.