ಮೈಸೂರು, ಸೆ.10(ಆರ್‍ಕೆಬಿ)- ಕೋವಿಡ್ ಪ್ರಕರಣಗಳಲ್ಲಿ ಹಿರಿಯ ನಾಗರಿ ಕರ ಸಾವು ಹೆಚ್ಚು ಸಂಭವಿಸುತ್ತಿದ್ದು, ಉಸಿ ರಾಟದ ತೊಂದರೆ ಇರುವವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಬೇಕಿದೆ. ಆದರೆ ಆಕ್ಸಿಜನ್, ಬೆಡ್ ಕೊರತೆ ಇರುವುದರಿಂದ ಹಿರಿಯ ನಾಗರಿಕರಿಗೆ ಸೂಕ್ತ ಚಿಕಿತ್ಸೆ ಸಿಗದೆ ತೊಂದರೆ ಯಾಗುತ್ತಿದೆ. ಇದಕ್ಕಾಗಿ ಹಿರಿಯ ನಾಗರಿಕ ರಿಗೆ ಪ್ರತ್ಯೇಕ ಆಸ್ಪತ್ರೆಯನ್ನು ಬಿಎಂಹೆಚ್‍ನಲ್ಲಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಶಾಸಕ ಎಸ್.ಎ.ರಾಮದಾಸ್ ನೇತೃತ್ವದ ಸಭೆಯಲ್ಲಿ ಕೃಷ್ಣರಾಜ ಕ್ಷೇತ್ರವನ್ನು ಕೊರೊನಾ ಮುಕ್ತಗೊಳಿಸುವ ಸಂಬಂಧ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ಸಂದರ್ಭ ದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೆ.ಆರ್.ಕ್ಷೇತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಮೊಬೈಲ್ ಟೆಸ್ಟಿಂಗ್ ಸೆಂಟರ್ ಅವಶ್ಯಕವಿದೆ. ಕೈಗಾ ರಿಕಾ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವುದನ್ನು ತಡೆಯಲು ಕೈಗಾರಿಕಾ ವಲಯಗಳಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಸಂಬಂಧಪಟ್ಟ ವರ ಗಮನಕ್ಕೆ ತರಲು ಸಭೆ ತೀರ್ಮಾನಿಸಿತು.
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ರೋಲಾನ್ ಚೈನ್ ಫ್ಯಾಕ್ಟರಿ ಮತ್ತಿತರೆ ಕೈಗಾರಿಕೆಗಳಲ್ಲಿ ಉದ್ಯೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ -19 ಪರೀಕ್ಷೆ ಮಾಡಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಹೋಮ್ ಐಸೊಲೇ ಷನ್ ತಂಡದ ಕೊರತೆಯಿದೆ. ಪಾಸಿಟಿವ್ ಎಂದು ತಿಳಿಸಿದ 3-4 ದಿನಗಳ ನಂತರ ಹೋಮ್ ಐಸೋಲೇಷನ್ ತಂಡ ತಡ ವಾಗಿ ಭೇಟಿ ನೀಡುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಹಿರಿಯರು, ಪುಟ್ಟ ಮಕ್ಕಳು, ಗರ್ಭಿಣಿಯರು ಇರುವ ಮನೆಗಳನ್ನು ಮತ್ತು ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದ ಮನೆಗಳಲ್ಲಿ ಹೋಮ್ ಐಸೋಲೇಷನ್‍ಗೆ ಅವಕಾಶ ನೀಡಲಾಗಿದೆ. ಇದರಿಂದ ಪ್ರಾಥ ಮಿಕ ಸಂಪರ್ಕದಲ್ಲಿದ್ದವರಿಗೂ ಸೋಂಕು ಹರಡುತ್ತಿದೆ. ಹೀಗಾಗಿ ಹೋಮ್ ಐಸೋ ಲೇಷನ್ ಕ್ರಮ ಕಟ್ಟುನಿಟ್ಟಾಗಿ ಪಾಲಿಸ ಬೇಕಿದೆ. ಕೆ.ಆರ್. ಕ್ಷೇತ್ರಕ್ಕೆ ಪ್ರತ್ಯೇಕ ಮೂರು ತಂಡಗಳ ಅವಶ್ಯಕತೆ ಇದೆ ಎಂದು ತೀರ್ಮಾನಿಸಲಾಯಿತು.
ಟೌನ್‍ಹಾಲ್‍ನಲ್ಲಿ 24 ಗಂಟೆಗಳ ಕಾಲ ಪರೀಕ್ಷಾ ಕೇಂದ್ರ ತೆರೆಯಲು ಆರೋಗ್ಯ ಇಲಾಖೆಗೆ ಸೂಚಿಸಲು ಸಭೆ ನಿರ್ಧ ರಿಸಿತು. ಗರ್ಭಿಣಿಯರಿಗೆ ಜೆಎಲ್‍ಬಿ ರಸ್ತೆ ಯಲ್ಲಿರುವ ಎಸ್‍ಎಂಟಿ ಆಸ್ಪತ್ರೆಯಲ್ಲಿ ಮತ್ತೊಂದು ಕೋವಿಡ್ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಲು ತಿಳಿಸಲಾಯಿತು.