ಮೈಸೂರು, ಸೆ.10(ಎಂಟಿವೈ)- ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೈಸೂರು ನಗರದ ಹಲವೆಡೆ ಬಳಸಲ್ಪ ಟ್ಟಿರುವ ಮಾಸ್ಕ್‍ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿ ರುವುದು ಕಂಡು ಬರುತ್ತಿದೆ. ಇದು ಸ್ವಚ್ಛತಾ ಕಾರ್ಯದ ಪೌರಕಾರ್ಮಿಕರಲ್ಲಿ ಆತಂಕವುಂಟು ಮಾಡುತ್ತಿದೆ.
ಮೈಸೂರು ನಗರದ ಪ್ರಮುಖ ರಸ್ತೆಗಳೂ ಸೇರಿ ದಂತೆ ಬಹುತೇಕ ಬಡಾವಣೆಗಳಲ್ಲಿನ ರಸ್ತೆಗಳಲ್ಲಿ ಬಳಸಿ ಬಿಸಾಡಿರುವ ಮಾಸ್ಕ್ ಕಂಡು ಬರು ತ್ತಿದೆ. ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ರುವ ಪೌರಕಾರ್ಮಿಕರಿಗೆ ರಸ್ತೆಯಲ್ಲಿ ಬಿದ್ದಿರುವ ಮಾಸ್ಕ್ ಮುಟ್ಟುವುದರಿಂದ ಕೊರೊನಾ ಸೋಂಕು ಹರಡಬಹುದೆಂಬ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿ ಬಳಸಲ್ಪಟ್ಟ ಮಾಸ್ಕ್‍ಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವೈಜ್ಞಾನಿಕವಾಗಿ ನಾಶ ಮಾಡುವಂತೆ ಕೋರುತ್ತಿದ್ದಾರೆ. ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮಾತನಾಡಿ, ಕೊರೊನಾ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ರಸ್ತೆಯಲ್ಲಿ ಬಳಸಿದ ಮಾಸ್ಕ್ ಬಿದ್ದಿರುತ್ತಿದ್ದವು. ಇದೀಗ ಎಲ್ಲರೂ ಮರು ಬಳಕೆ ಮಾಸ್ಕ್ ಗಳನ್ನೇ ಹೆಚ್ಚಾಗಿ ಬಳಸುತ್ತಿರುವುದರಿಂದ ರಸ್ತೆಯಲ್ಲಿ ಬಿಸಾ ಡುವುದು ಕಡಿಮೆಯಾಗಿದೆ. ವಾಹನ ಚಾಲನೆ ವೇಳೆ ಕೆಲವರು ಆಕಸ್ಮಿಕವಾಗಿ ಮಾಸ್ಕ್‍ಗಳನ್ನು ಬೀಳಿಸಿ ಹೋಗುತ್ತಿರುವುದು ಕಂಡು ಬಂದಿದೆ ಎಂದರು. ಬಳಸಿದ ಮಾಸ್ಕ್‍ಗಳನ್ನು ಉದ್ದೇಶ ಪೂರ್ವಕವಾಗಿ ರಸ್ತೆಗೆ ಬಿಸಾಡುವವರು ಕಂಡು ಬಂದರೆ ದಂಡ ವಿಧಿಸಲಾಗುತ್ತದೆ. ಈ ಹಿಂದೆ ಕಸ ಸಂಗ್ರಹಕ್ಕೆ ಇಡಲಾಗುತ್ತಿದ್ದ ಕಂಟೇನರ್ ನಲ್ಲಿ ಬಳಸಿದ ಮಾಸ್ಕ್‍ಗಳು ಪತ್ತೆಯಾಗುತ್ತಿದ್ದವು. ಒಂದೆರಡು ದಿನ ಗಮನಿಸಿದಾಗ ಕ್ಲಿನಿಕ್‍ವೊಂದ ರಲ್ಲಿ ಬಳಸಲ್ಪಟ್ಟ ಮಾಸ್ಕ್‍ಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ತುಂಬಿ ಕಸದ ಕಂಟೇನರ್‍ಗೆ ಎಸೆದು ಹೋಗುತ್ತಿದ್ದರು. ಅದನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಲಾಯಿತು. ಬಳಿಕ ಕಂಟೇನರ್‍ನಲ್ಲಿ ಮಾಸ್ಕ್ ಹಾಕುವುದು ತಪ್ಪಿದೆ. ಹೋಮ್ ಐಸೋಲೇಷನ್‍ನಲ್ಲಿರುವ ಸೋಂಕಿತರು ಬಳಸಿದ ಮಾಸ್ಕ್, ಮೆಡಿಕಲ್ ವೇಸ್ಟ್ ವಿಲೇವಾರಿಗೆ ಪ್ರತ್ಯೇಕ ಸಿಬ್ಬಂದಿಯಿ ದ್ದಾರೆ. ಇದರಿಂದ ಸೋಂಕು ಹರಡುವಿಕೆ ತಪ್ಪಿಸಿದಂತಾಗಿದೆ ಎಂದರು.