ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 168 ವೆಂಟಿಲೇಟರ್, 3500 ಹಾಸಿಗೆ ಕಾಯ್ದಿರಿಸಲಾಗಿದೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 168 ವೆಂಟಿಲೇಟರ್, 3500 ಹಾಸಿಗೆ ಕಾಯ್ದಿರಿಸಲಾಗಿದೆ

June 20, 2020

ಮೈಸೂರು, ಜೂ.19(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 168 ವೆಂಟಿ ಲೇಟರ್ ಹಾಗೂ 3500ಕ್ಕೂ ಹೆಚ್ಚು ಹಾಸಿಗೆ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಿಯಮ ಸಡಿಲಿಕೆಯಿಂ ದಾಗಿ ದೆಹಲಿ, ಆಂಧ್ರಪ್ರದೇಶ, ರಾಜಸ್ತಾನ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ಸಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆ ಮಾರ್ಗದಲ್ಲಿ ದಿನಕ್ಕೆ ಸರಾಸರಿಯಂತೆ 110 ಮಂದಿ, ವಿಮಾನ ದಲ್ಲಿ 50ರಿಂದ 60 ಮಂದಿ ಮೈಸೂರಿಗೆ ಬರುತ್ತಿದ್ದಾರೆ. ಈ ಎಲ್ಲರ ವಿವರ ಪಡೆದು, ಥರ್ಮಲ್ ಸ್ಕ್ರೀನಿಂಗ್ ಮಾಡಿ ಕ್ವಾರಂಟೇನ್ ನಲ್ಲಿರಿಸಲಾಗುತ್ತಿದೆ. ಅಲ್ಲದೆ ಕಡ್ಡಾಯವಾಗಿ ಎಲ್ಲರ ಗಂಟಲು ದ್ರವ ಪರೀಕ್ಷೆ ಒಳಪಡಿಸ ಲಾಗುತ್ತಿದೆ. ಹೊರ ರಾಜ್ಯದಿಂದ ಬಂದವರನ್ನು ಬನ್ನಿಮಂಟಪದ ಪಂಜಿನ ಕವಾಯತ್ ಮೈದಾನದಲ್ಲಿ ತಪಾಸಣೆಗೊಳಪಡಿಸಲಾಗು ತ್ತಿದೆ. ಸೆಲ್ಫ್ ಡಿಕ್ಲರೇಷನ್ ಫಾರಂ ಪಡೆದು, ಕ್ವಾರಂಟೇನ್ ಕಳಿಸಲಾಗುತ್ತದೆ ಎಂದರು.

ಕೋವಿಡ್ ಕೇರ್ ಸೆಂಟರ್ ಆರಂಭ: ಸರ್ಕಾರದ ಸೂಚನೆ ಮೇರೆಗೆ ಕೊರೊನಾ ಸೋಂಕಿತರನ್ನು ಎ,ಬಿ,ಸಿ ಎಂದು ಮೂರು ಕ್ಯಾಟಗರಿ ಮಾಡಲಾಗುತ್ತಿದೆ. ಗಂಭೀರವಾಗಿ ಲ್ಲದ ಸೋಂಕಿತರನ್ನು(ವೆರಿ ಮೈಲ್ಡ್ ಸಿ ಕ್ಯಾಟಗಿರಿ)ಯಲ್ಲಿ ಗುರುತಿಸಲಾಗುತ್ತದೆ. ಇಂತಹವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಆಗತ್ಯವಿರುವುದಿಲ್ಲ. ಆ ವರ್ಗದ ಸೋಂಕಿತ ರಿಗೆ ಕೇವಲ ನ್ಯೂಟ್ರಿಷಿಯನ್ ಫುಡ್ ಕೊಟ್ಟು ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ವರಿಗಾಗಿ `ಕೋವಿಡ್ ಕೇರ್ ಸೆಂಟರ್’ ಆರಂಭಿಸಲು ಸರ್ಕಾರ ಸೂಚನೆ ನೀಡಿದೆ. ಜನವಸತಿ ಪ್ರದೇಶದಲ್ಲಿ ಇರದ ಶಾಲಾ ಕಟ್ಟಡಗಳನ್ನು ಗುರು ತಿಸಿ ಅದರಲ್ಲಿ ಕೋವಿಡ್ ಕೇರ್ ಸೆಂಟರ್ ಆರಂ ಭಿಸಲಾಗುತ್ತದೆ. ಸಿ ಕ್ಯಾಟ ಗಿರಿಯ ಕೊರೊನಾ ಸೋಂಕಿತರನ್ನು ಈ ಕೇರ್ ಸೆಂಟರ್‍ನಲ್ಲಿಟ್ಟು ಆರೈಕೆ ಮಾಡ ಲಾಗುತ್ತದೆ ಎಂದರು.

168 ವೆಂಟಿಲೇಟರ್ ಮೀಸಲು: ಎ ಕ್ಯಾಟ ಗರಿ ಸೋಂಕಿತರ ಸ್ಥಿತಿಗತಿಗೆ ಅನುಸಾರವಾಗಿ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕಾಗು ತ್ತದೆ. ಮಾಡರೇಟ್ ಕೇಸ್‍ನಲ್ಲಿ ಸೋಂಕಿತ ರಿಗೆ ಆಕ್ಸಿಜûನ್ ಕೊಡಲೇಬೇಕಾಗಿದೆ. ಈಗಾ ಗಲೇ ಕೋವಿಡ್ ಆಸ್ಪತ್ರೆಯಲ್ಲಿ 17 ವೆಂಟಿಲೇ ಟರ್ ಇವೆ. ಕೆ.ಆರ್.ಆಸ್ಪತ್ರೆಯಲ್ಲಿರುವ 30 ವೆಂಟಿಲೇಟರ್‍ನಲ್ಲಿ 6 ವೆಂಟಿಲೇಟರ್ ಅನ್ನು ಕೋವಿಡ್ ರೋಗಿಗಳಿಗಾಗಿ ಮೀಸ ಲಿಡಲಾಗಿದೆ. ಇದರೊಂದಿಗೆ ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ವೆಂಟಿಲೇಟರ್ ಕಾಯ್ದಿರಿಸಲಾಗಿದೆ. ಇದಲ್ಲದೆ ನಾರಾಯಣ ಹೃದಾಯಾಲಯ ಹಾಗೂ ಅಪೋಲೋ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳಲ್ಲೂ ವೆಂಟಿಲೇಟರ್ ಪಡೆಯಲು ನಿರ್ಧರಿಸಲಾಗಿದ್ದು, ಒಟ್ಟಾರೆ 168 ವೆಂಟಿ ಲೇಟರ್ ಕಾಯ್ದಿರಿಸಲಾಗಿದೆ ಎಂದರು.

3500 ಬೆಡ್ ಕಾಯ್ದಿರಿಸಲಾಗಿದೆ: ಬಿ ಕ್ಯಾಟ ಗಿರಿಯ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಯಲ್ಲಿರುವ ಎಲ್ಲಾ ಹಾಸಿಗೆ, ಎಲ್ಲಾ ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಲ್ಲಿ ತಲಾ 30 ಬೆಡ್, ಜಿಲ್ಲಾ ಮಟ್ಟದಲ್ಲಿ ಇಎಸ್‍ಐ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಒಟ್ಟು 3500 ಹಾಸಿಗೆ ಕಾಯ್ದಿರಿಸಲಾಗಿದೆ. ಅದ ರಲ್ಲಿ 250 ಹಾಸಿಗೆಯನ್ನು ಕ್ರಿಟಿಕಲ್ ಕೇರ್‍ಗೆ ಮೀಸಲಿಡಲಾಗಿದೆ ಎಂದು ವಿವರಿಸಿದರು.

ಭಯವಿಲ್ಲದೆ ತಪಾಸಣೆ ಮಾಡಿಸಿಕೊಳ್ಳಿ: ಮೈಸೂರು ಜಿಲ್ಲೆಯಲ್ಲಿ ಕಳೆದ ಒಂದು ವಾರ ದಿಂದ 150ರಿಂದ 200 ಜನರಿಗೆ ಜ್ವರ ಇರು ವುದು ಕಂಡು ಬಂದಿದೆ. ಖಾಸಗಿ ಆಸ್ಪತ್ರೆ, ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿ ದ್ದಾರೆ. ಅವರಲ್ಲಿ ಕೆಲವರು ಗಂಟಲು ದ್ರವ ಪರೀಕ್ಷೆಗೆ ಮುಂದೆ ಬರುತ್ತಿಲ್ಲ. ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟರೆ ಏನಾಗು ತ್ತದೋ ಎಂಬ ಆತಂಕದಿಂದ ದೂರ ಇದ್ದಾರೆ. ಇದು ಅಪಾಯಕಾರಿ. ಉಸಿರಾಟದ ಸಮ ಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. 2-3 ದಿನ ಜ್ವರ ಇದ್ದರೆ ತಪಾಸಣೆ ಮಾಡಿಸಿ ಕೊಳ್ಳಲು ತಪ್ಪದೆ ಬರಬೇಕು. ಭಯ ಪಡುವ ಆತಂಕ ವಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲೂ ಗಂಟಲು ದ್ರವವನ್ನು ಪರೀಕ್ಷೆಗೆ ಸ್ಯಾಂಪಲ್ ಪಡೆಯ ಲಾಗುತ್ತಿದೆ. ಉಚಿತವಾಗಿ ಪರೀಕ್ಷೆ ನಡೆಸು ವುದರಿಂದ ಸೋಂಕಿನ ಲಕ್ಷಣ ಕಂಡು ಬಂದ ವರು ತಪಾಸಣೆಗೆ ಬರಬೇಕು. ಒಬ್ಬರಿಂದ ಸಮುದಾಯಕ್ಕೆ ಸೋಂಕು ಹರಡುವ ಮುನ್ನ ಸ್ವಯಂಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮನವಿ ಮಾಡಿದರು.

Translate »