ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆ; ಭಕ್ತರ ಪ್ರವೇಶ ನಿರ್ಬಂಧ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆ; ಭಕ್ತರ ಪ್ರವೇಶ ನಿರ್ಬಂಧ

June 20, 2020

ಮೈಸೂರು, ಜೂ.19(ಎಂಟಿವೈ)- ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನದ ವಿಶೇಷ ಪೂಜೆಯಲ್ಲಿ ಭಕ್ತರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಜೂ.22ರಂದು ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ನೋಡಿಕೊಂಡು ಆಷಾಢ ಮಾಸದ ಎಲ್ಲಾ ದಿನ ಬೆಟ್ಟಕ್ಕೆ ಪ್ರವೇಶ ಬಂದ್ ಮಾಡುವ ಕುರಿತು ನಿರ್ಧಾರ ಪ್ರಕ ಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿವರ್ಷ ಆಷಾಢ ಮಾಸ ದಲ್ಲಿ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಪೂಜೆ ಸಲ್ಲಿಸುವ ವಾಡಿಕೆಯಿದೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ ಹಾಗೂ ವರ್ಧಂತಿ ದಿನ ಭಕ್ತರಿಗೆ ಅವಕಾಶ ನೀಡದಿರಲು ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದರು.

ಆಷಾಢದ ಮಂಗಳವಾರ, ಇತರೆ ದಿನವೂ ಬೆಟ್ಟಕ್ಕೆ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುವುದ ರಿಂದ ತಿಂಗಳಿಡೀ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂ ಧಿಸುವಂತೆ ಬೆಟ್ಟದ ನಿವಾಸಿಗಳು ಮನವಿ ಮಾಡಿ ದ್ದಾರೆಂಬ ಮಾಹಿತಿ ಇದೆ. ಆದರೆ ಅಧಿಕೃತವಾಗಿ ಮನವಿ ಸಲ್ಲಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ಸೋಮವಾರ(ಜೂ.22)ದಿಂದ ಆಷಾಢÀ ಮಾಸ ಆರಂಭ. ಮಂಗಳವಾರ ಬೆಟ್ಟಕ್ಕೆ ಎಷ್ಟು ಸಂಖ್ಯೆ ಯಲ್ಲಿ ಭಕ್ತರು ಬರುತ್ತಾರೆ ಎನ್ನುವುದನ್ನು ಅವಲೋ ಕಿಸುತ್ತೇವೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಬಂದರೆ ಅಥವಾ ಸೋಂಕು ಹರಡುವಂತಹ ವಾತಾವರಣ ಕಂಡುಬಂದರೆ ಆಷಾಢ ಮಾಸದ ಎಲ್ಲಾ ದಿನವೂ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂ ಧಿಸಲಾಗುವುದು. ಈ ವರ್ಷ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಮನೆಯಲ್ಲೇ ಆಷಾಢದ ಪೂಜೆ ಮಾಡಬೇಕು ಎಂದು ಸಲಹೆ ನೀಡಿದರು.

ಜನಜಂಗುಳಿ ಬೇಡ: ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನ ಮೈಸೂರಿನ ದೇವಾಲಯಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವು ದನ್ನು ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ತೆರಳಲು ಆಗ ದವರು ನಗರದ ದೇವಾಲಯಗಳಲ್ಲಿ ದೇವಿ ದರ್ಶನ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಗಳೂ ಸೇರಿದಂತೆ ಮೈಸೂರಿನ ಯಾವುದೇ ದೇವಾ ಲಯಗಳಲ್ಲಿ ಹೆಚ್ಚು ಭಕ್ತರು ಕಂಡು ಬಂದರೆ ಆ ದೇವಾಲಯಗಳನ್ನೂ ಬಂದ್ ಮಾಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು

Translate »