ದೇಶದಲ್ಲಿ ಒಂದೇ ದಿನ 13,586 ಜನಕ್ಕೆ ಕೊರೊನಾ: ಸೋಂಕಿತರ ಸಂಖ್ಯೆ 3.80 ಲಕ್ಷ 12,573 ಮಂದಿ ಸಾವು
ಮೈಸೂರು

ದೇಶದಲ್ಲಿ ಒಂದೇ ದಿನ 13,586 ಜನಕ್ಕೆ ಕೊರೊನಾ: ಸೋಂಕಿತರ ಸಂಖ್ಯೆ 3.80 ಲಕ್ಷ 12,573 ಮಂದಿ ಸಾವು

June 20, 2020

ನವದೆಹಲಿ: ಕೊರೊನಾನಿಂದ ದೇಶ ದಲ್ಲಿ ಒಂದೇ ದಿನ 13,586 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 336 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ 12,573ಕ್ಕೆ ತಲುಪಿದೆ. ಇನ್ನು 3,80,532 ಮಂದಿ ಸೋಂಕಿತರ ಪೈಕಿ 2,04,711 ಮಂದಿ ಸೋಂಕಿ ನಿಂದ ಗುಣಮುಖರಾಗಿದ್ದು, ಇನ್ನೂ ದೇಶ ದಲ್ಲಿ 1,63,248 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರ, ತಮಿಳು ನಾಡು, ಗುಜರಾತ್, ಉತ್ತರಪ್ರದೇಶ ಗಳು ಅತೀ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಾಗಿ ಮುಂದುವರಿದಿವೆ.

ರಾಜ್ಯದಲ್ಲಿ ಒಂದೇ ದಿನ 337 ಪ್ರಕರಣ ಪತ್ತೆ, 8,281ಕ್ಕೇರಿದ ಸೋಂಕಿತರ ಸಂಖ್ಯೆ!
ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ದಾಖಲೆಯ 138 ಕೊರೊನಾ ಪ್ರಕ ರಣಗಳು ಪತ್ತೆಯಾಗಿದ್ದು, 7 ಮಂದಿ ಬಲಿ ಯಾಗಿದ್ದಾರೆ. ರಾಜ್ಯದಲ್ಲಿ ಇಂದು ಹೊಸ ದಾಗಿ 337 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,281ಕ್ಕೆ ಏರಿಕೆಯಾಗಿದೆ. ರಾಜ್ಯ ದಲ್ಲಿ ಇಂದು 10 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.

Translate »