ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ 17 ಬೆಳೆಗಳು
ಮೈಸೂರು

ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ 17 ಬೆಳೆಗಳು

June 23, 2020

ಮೈಸೂರು,ಜೂ.22-ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ 2020-21 ಅಡಿ ಮುಂಗಾರು ಹಂಗಾಮಿಗೆ ಮೈಸೂರು ಜಿಲ್ಲೆಗೆ 9 ಆಹಾರಧಾನ್ಯ ಬೆಳೆಗಳು, 3 ಎಣ್ಣೆ ಕಾಳು ಬೆಳೆಗಳು, 1 ವಾಣಿಜ್ಯ ಬೆಳೆ ಹಾಗೂ 4 ತರಕಾರಿ ಬೆಳೆಗಳು ಸೇರಿ ಒಟ್ಟು 17 ಬೆಳೆಗಳನ್ನು ಬೆಳೆ ವಿಮೆಗೆ ಒಳಪಡಿಸಲಾಗಿದೆ.

ರೈತರು ಪಾವತಿಸಬೇಕಾದ ವಿಮಾಕಂತು, ವಿಮಾ ಮೊತ್ತದ ಶೇ.2ರಷ್ಟು ಇದ್ದು, ರೈತರು ವಿಮೆ ಯೋಜನೆಯಡಿ ನೋಂದಾಯಿಸಲು ನಿಗದಿತ ಅರ್ಜಿ ನಮೂನೆ ಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಮೀಪದ ಬ್ಯಾಂಕಿಗೆ ತೆರಳಿ ನಿರ್ದಿಷ್ಟ ವಿಮಾಕಂತನ್ನು ಪಾವತಿಸುವುದು. ಮಳೆಯಾಶ್ರಿತ ಉದ್ದು, ಹೆಸರು ಎಳ್ಳು ವಿಮಾ ಮೊತ್ತ ಪಾವತಿಸಲು ಕೊನೆಯ ದಿನಾಂಕ ಜೂ.30 ಆಗಿರುತ್ತದೆ. ಮಳೆಯಾಶ್ರಿತ ಸೂರ್ಯಕಾಂತಿ, ನೆಲಗಡಲೆ, ಅಲಸಂದೆ, ಜೋಳ ಮತ್ತು ಆಲೂಗಡ್ಡೆ ಹಾಗೂ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ಟೊಮ್ಯಾಟೋ, ಎಲೆಕೋಸು ವಿಮಾ ಮೊತ್ತವನ್ನು ಜುಲೈ 15ರೊಳಗೆ ಪಾವತಿಸುವುದು. ಮಳೆಯಾಶ್ರಿತ ಮುಸುಕಿನ ಜೋಳ, ರಾಗಿ, ತೊಗರಿ, ಹತ್ತಿ ಮತ್ತು ಅರಿಶಿಣ ಹಾಗೂ ನೀರಾವರಿ ಬೆಳೆಗಳಾದ ರಾಗಿ, ನೆಲಗಡಲೆ, ಹತ್ತಿ ವಿಮಾ ಮೊತ್ತ ಪಾವ ತಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ನೀರಾವರಿ ಬೆಳೆ ಭತ್ತ ಹಾಗೂ ಮಳೆಯಾಶ್ರಿತ ಹುರುಳಿ ವಿಮಾ ಮೊತ್ತವನ್ನು ಆಗಸ್ಟ್ 14ರೊಳಗೆ ಪಾವತಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »