20 ವರ್ಷ ಜೀವಂತವಾಗಿರುತ್ತೆ ಕೊರೊನಾ: ಹಸಿ ಮಾಂಸ, ಮೀನು ಮುಟ್ಟಬೇಡಿ ಚೀನಾ ತಜ್ಞರ ಎಚ್ಚರಿಕೆ
ಮೈಸೂರು

20 ವರ್ಷ ಜೀವಂತವಾಗಿರುತ್ತೆ ಕೊರೊನಾ: ಹಸಿ ಮಾಂಸ, ಮೀನು ಮುಟ್ಟಬೇಡಿ ಚೀನಾ ತಜ್ಞರ ಎಚ್ಚರಿಕೆ

June 23, 2020

ನವದೆಹಲಿ: ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಸದ್ಯಕ್ಕಂತೂ ತೊಲಗುವ ಲಕ್ಷಣಗಳನ್ನು ತೋರಿಸುತ್ತಿಲ್ಲ. ಆದರೆ, ಜನರನ್ನು ಇನ್ನಷ್ಟು ಭೀತಿಗೊಳಪಡಿಸುವ ವಿಷಯಗಳೇ ಕೊರೊನಾ ಬಗ್ಗೆ ಹೊರಬೀಳುತ್ತಿವೆ. ಚೀನಾದ ಸಾಂಕ್ರಾಮಿಕ ರೋಗ ತಜ್ಞರಾದ ಪೆÇ್ರ.ಲೀ ಲಂಜುವಾನ್ ಆತಂಕಕಾರಿ ವಿಷಯವೊಂದನ್ನು ಹೊರ ಹಾಕಿದ್ದಾರೆ. ಕರೊನಾ ನಿಗದಿತ ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರಬಲ್ಲುದು ಎಂದು ಹೇಳಿದ್ದಾರೆ. ಜತೆಗೆ, ಹಸಿ ಮಾಂಸ ಹಾಗೂ ಮೀನನ್ನು ಮುಟ್ಟಲೇ ಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ವೈರಸ್ ಮೇಲೆ ತಂಪು ಯಾವುದೇ ಪರಿಣಾಮ ಬೀರುವುದಿಲ್ಲ. ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ತಿಂಗಳುಗಟ್ಟಲೇ ಈ ವೈರಸ್ ಜೀವಂತವಾಗಿರುತ್ತದೆ. ಜತೆಗೆ, ಮೈನಸ್ 20 ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರುತ್ತೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಕಡಲು ತಿನಿಸು (ಸೀ ಫುಡ್)ಗಳಲ್ಲಿ ಹಲವು ಬಾರಿ ಕಂಡು ಬಂದಿರುವುದಕ್ಕೆ ಇದೇ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಸಾಲ್ಮನ್ ಹಾಗೂ ಇತರ ಮಾಂಸವನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ಎಂದು ತಜ್ಞರು ಹೇಳಿದ್ದಾರೆ.

Translate »